ಪೇಸ್‍ಬುಕ್ ಬಳಕೆದಾರರು ಮೃತಪಟ್ಟ ಬಳಿಕ… ಆತನ ಖಾತೆ ಏನಾಗುತ್ತದೆ? ಇನ್ನಷ್ಟು ಮಾಹಿತಿ.!

ಲವರ್ ಮೋಸ ಮಾಡಿದಳೆಂದು…ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ರೈಲು ಕೆಳಗೆಬಿದ್ದು ಆತ್ಮಹತ್ಯೆ ಮಾಡಿಕೊಂಡ ನರೇಷ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ…ಇಂತಹ ಘಟನೆಗಳು ಅನೇಕ ನಡೆಯುತ್ತಿದ್ದರೂ… ನರೇಶ್ ಸಂಗತಿ ಮಾತ್ರ ತುಂಬಾ ವೈರಲ್ ಆಯಿತು. ಅದಕ್ಕೆ ಕಾರಣ ಆತ ತನ್ನ ಮರಣಕ್ಕೂ ಮುನ್ನ ತನ್ನ ಲವರ್‌ಗೆ ಸಂಬಂಧಿಸಿದ ಡೀಟೇಲ್ಡ್ ಮಾಹಿತಿಯನ್ನು ಫೊಟೋ ಸಮೇತ…ಫೇಸ್‌ಬುಕ್‌ನ ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಆದರೆ ಸಾಮಾನ್ಯವಾಗಿ ಮನುಷ್ಯ ಸತ್ತ ಬಳಿಕ…ಆತನ ಫೇಸ್‌ಬುಕ್ ಖಾತೆ ಕ್ಲೋಸ್ ಆಗುತ್ತದೆ. ಆದರೆ ನರೇಷ್ ಕೊನೆಯ ಬಯಕೆಯಂತೆ ಆತನ ಪೋಸ್ಟ್ ಎಲ್ಲರಿಗೂ ತಲುಪಬೇಕೆಂದು, ಆತನ ಗೆಳೆಯರಿಗೆ ನೆನೆಪಿರಬೇಕೆಂದು ಫೇಸ್‌ಬುಕ್ ಆತನ ಪ್ರೊಫೈಲನ್ನು remembering ಆಗಿ ಬದಲಾಯಿಸಿದೆ.

ಫೇಸ್‍ಬುಕ್ ಬಳಕೆದಾರರು ಮೃತಪಟ್ಟ ಬಳಿಕ… ಆತನ ಖಾತೆ ಏನಾಗುತ್ತದೆ?
ಜಗತ್ತಿನಾದ್ಯಂತ ಇರುವ ಫೇಸ್‌ಬುಕ್ ಬಳಕೆದಾರರಲ್ಲಿ ಮೃತಪಟ್ಟವರ ಖಾತೆಗಳ ಸಂಖ್ಯೆ ಸರಿಸುಮಾರು 30 ಮಿಲಿಯನ್‌ವರೆಗೂ ಇವೆಯೆಂದು, ನಿತ್ಯ ಜಗತ್ತಿನಾದ್ಯಂತ 8 ಸಾವಿರ ಮಂದಿ ಫೇಸ್‌ಬುಕ್ ಬಳಕೆದಾರರು ಮೃತಪಡುತ್ತಿದ್ದಾರೆಂದು ಸಾಕ್ಷಾತ್ ಫೇಸ್‌ಬುಕ್ ತಿಳಿಸಿದೆ. ಇಷ್ಟಕ್ಕೂ ಫೇಸ್‌ಬುಕ್ ಬಳಕೆದಾರ ಸತ್ತು ಹೋದರೆ ಆತನ ಖಾತೆ ಏನಾಗುತ್ತದೆ? ಎಂಬ ಒಂದು ಸಂದೇಹವನ್ನು ಹಲವರು ಬಳಕೆದಾರು ಫೇಸ್‌ಬುಕ್ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಫೇಸ್‌ಬುಕ್ ಪ್ರತಿನಿಧಿ ಅಂತಹವರಿಗಾಗಿ ಒಂದು ವಿಶೇಷ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಅದೇನೆಂದರೆ ಲೆಗಸಿ ಕಾಂಟ್ಯಾಕ್ಟ್.

ಫೇಸ್‌ಬುಕ್‌ನಲ್ಲಿ ಲಭ್ಯವಾಗುತ್ತಿರುವ ಈ ಲೆಗಸಿ ಕಾಂಟ್ಯಾಕ್ಟ್ ಎಂಬ ಫೀಚರ್ ಮೂಲಕ ಬಳಕೆದಾರರು ತಾವು ಮೃತಪಟ್ಟ ಬಳಿಕ ತಮ್ಮ ಖಾತೆ ಅದಷ್ಟಕ್ಕದೇ ಡಿಲೀಟ್ ಆಗಬೇಕೆ? ಬೇಡವೆ? ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬಹುದು. ಒಂದು ವೇಳೆ ಆ ಖಾತೆ ಬೇಡ ಎಂದುಕೊಂಡರೆ ಆ ವ್ಯಕ್ತಿ ಮೃತಪಟ್ಟ ಬಳಿಕ ಫೇಸ್‌ಬುಕ್‌ನಲ್ಲಿ ಆತನಿಗೆ ಫ್ರೆಂಡ್ಸ್ ಆಗಿರುವ ಸ್ನೇಹಿತರು, ಕುಟುಂಬ ಸದಸ್ಯರು ಫೇಸ್‌ಬುಕ್‌ಗೆ ಒಂದು ರಿಕ್ವೆಸ್ಟ್ ಕಳುಹಿಸಿದರೆ ಸಾಕು, ಆ ಖಾತೆ ಡಿಲೀಟ್ ಆಗುತ್ತದೆ. ಅಥವಾ ಖಾತೆ ಮುಂದುವರೆಯಬೇಕು ಎಂದು ಬಯಸಿದರೆ ಲೆಗಸಿ ಕಾಂಟ್ಯಾಕ್ಟ್‌‍ನಲ್ಲಿ ಯೂಸರ್ ತನಗೆ ಅತ್ಯಂತ ಆತ್ಮೀಯವಾಗಿರುವ ಸ್ನೇಹಿತರು, ಕುಟುಂಬ ಸದಸ್ಯರಲ್ಲಿ ಯಾರನ್ನಾದರೂ ಒಂದು ಫೇಸ್‌‍ಬುಕ್ ಐಡಿಯನ್ನು ಆ ಕಾಂಟ್ಯಾಕ್ಟ್‌ಗೆ ಕೊಡಬಹುದು. ಇದರಿಂದ ಯೂಸರ್ ಮೃತಪಟ್ಟ ಬಳಿಕ ಲೆಗಸಿ ಕಾಂಟ್ಯಾಕ್ಟ್‌ನಲ್ಲಿ ಕೊಟ್ಟ ಐಡಿ ಪ್ರಕಾರ ಸಂಬಂಧಿತ ವ್ಯಕ್ತಿಗಳು ಮೃತಪಟ್ಟ ವ್ಯಕ್ತಿಯ ಖಾತೆ ನಿರ್ವಹಿಸಬಹುದು. ಆದರೆ ಆ ಖಾತೆಗೆ ಲಾಗಿನ್ ಆಗಲು ಮಾತ್ರ ಸಾಧ್ಯವಾಗಲ್ಲ. ಆ ಖಾತೆಯ ಪ್ರೊಫೆಲ್ ಪಿಕ್ಚರ್, ಸ್ಟೇಟಸ್ ಮೆಸೇಜ್‌ನಂತಹವನ್ನು ಬದಲಾಯಿಸಬಹುದು. ಫ್ರೆಂಡ್ಸ್ ರಿಕ್ವೆಸ್ಟ್‌ಗಳಿಗೆ ಪ್ರತಿಕ್ರಿಯಿಸಬಹುದು. ಟೈಮ್‌ಲೈನ್‌ನಲ್ಲಿ ಆ ಬಳಕೆದಾರರನ್ನು ಮಿಸ್ ಆಗುತ್ತಿದ್ದೇನೆ ಎಂದು ಪೋಸ್ಟ್ ಮಾಡಬಹುದು. ಆದರೆ ಲಾಗಿನ್ ಆಗಲು, ಹಳೆ ಪೋಸ್ಟ್‌ಗಳು, ಇಮೇಜ್‌ಗಳನ್ನು ಡಿಲೀಟ್ ಮಾಡಲು ಅವಕಾಶ ಇರಲ್ಲ.

ಆದರೆ ಯಾರಾದರೂ ವ್ಯಕ್ತಿ ಮೃತಪಟ್ಟರೆ ಆತನ ಫೇಸ್‌ಬುಕ್ ಖಾತೆ ಪ್ರೊಫೆಲ್‌ನಲ್ಲಿ Remembering ಎಂಬ ಮೆಸೇಜ್ ದರ್ಶನ ನೀಡುತ್ತದೆ. ಅದಕ್ಕಾಗಿ ಆ ವ್ಯಕ್ತಿಗೆ ಸೇರಿದ ಫೇಸ್‌ಬುಕ್ ಫ್ರೆಂಡ್ಸ್ ಫೇಸ್‌ಬುಕ್‌ಗೆ ರಿಕ್ವೆಸ್ಟ್ ಕಳುಹಿಸಬೇಕಾಗುತ್ತದೆ. ಅದನ್ನು ಫೇಸ್‌ಬುಕ್ ಓಕೆ ಮಾಡಿದರೆ ಇನ್ನು ಆ ವ್ಯಕ್ತಿ ಫೇಸ್‌ಬುಕ್ ಖಾತೆ Memorialized Timeline ಆಗಿ ಕಾಣಿಸುತ್ತದೆ. ಆ ಬಳಿಕ ಲೆಗಸಿ ಕಾಂಟ್ಯಾಕ್ಟ್‌ನಲ್ಲಿ ಕೊಟ್ಟಿರುವ ಐಡಿ ಪ್ರಕಾರ ಮೊದಲು ಸಾಗಬೇಕಾಗುತ್ತದೆ. ಅದು ಕೊಡಲಿಲ್ಲ ಎಂದರೆ ಆ ವ್ಯಕ್ತಿ ಖಾತೆ ಹಾಗೆಯೇ ಉಳಿಯುವುದೋ, ಡಿಲೀಟ್ ಆಗುವುದೋ ನಡೆಯುತ್ತದೆ. ಅದೂ ಸಹ ಇತರೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದರೆ ಮಾತ್ರ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ Memorialized Timeline ಆಗಿ ಬದಲಾದ ಫೇಸ್‌ಬುಕ್ ಯೂಸರ್‌ಗೆ ಸೇರಿದ ವಿಷಯಗಳೇನು ಇತರರಿಗೆ ಕಾಣಿಸಲ್ಲ. ಉದಾಹರಣೆಗೆ.. ಬರ್ತ್‌ಡೇ ರಿಮೈಂಡರ್‌ಗಳು, ಪೀಪರ್ ಸಜೆಷನ್ಸ್‌ನಂತಹವು. ಆದರೆ ಫೇಸ್‌ಬುಕ್ ಖಾತೆಯಲ್ಲಿ ಆಯಾ ಬಳಕೆದಾರರು ಕ್ರಿಯೇಟ್ ಮಾಡಿದ ಪೇಜ್‌ಗಳೂ ಡಿಲೀಟ್ ಆಗುತ್ತವೆ. ಇದರಿಂದ ಇವು ಸಹ ಯಾರಿಗೂ ಕಾಣಿಸಲ್ಲ.

ಸೋ, ನೀವೂ ನಿಮ್ಮ ಫೇಸ್‌ಬುಕ್ ಖಾತೆಯಲ್ಲಿ ಲೆಗಸಿ ಕಾಂಟ್ಯಾಕ್ಟ್ ಆಡ್ ಮಾಡಿಕೊಳ್ಳಬೇಕೆಂದರೆ ಫೇಸ್‌ಬುಕ್‌ನಲ್ಲಿ ಹೋಗಿ ಸೆಟ್ಟಿಂಗ್ಸ್ – ಸೆಕ್ಯುರಿಟಿ – ಲೆಗಸಿ ಕಾಂಟ್ಯಾಕ್ಟ್ ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು. ಆದರೆ ನಿಮಗೆ ತುಂಬಾ ಆತ್ಮೀಯರ ಲೆಗಸಿ ಕಾಂಟ್ಯಾಕ್ಟ್ ಐಡಿ ಕೊಡಿ. ಇಲ್ಲದಿದ್ದರೆ ಇತರರ ಕೈಗೆ ನಿಮ್ಮ ಮಾಹಿತಿ ಸೇರುವ ಅಪಾಯ ಇದೆ. ನಾವು ಇರಲಿ, ಇಲ್ಲದಿರಲಿ ನಮ್ಮ ಮಾಹಿತಿ ಅಮೂಲ್ಯವಾದದ್ದು ಅಲ್ಲವೇ!

 


Click Here To Download Kannada AP2TG App From PlayStore!