ರಾಂಗ್ ನಂಬರ್‌ ಒಂದಕ್ಕೆ ಉತ್ತರ ಕೊಟ್ಟಳು… ಆ ಬಾಲಕಿ ಜೀವನ ಏನಾಯಿತು ಗೊತ್ತಾ?!!

ಅಪರಿಚಿತ ಫೋನ್‌ ನಂಬರ್‌ನಿಂದ ಬಂದ ಮೆಸೇಜ್…ಒಬ್ಬ ಬಾಲಕಿಯ ಜೀವನವನ್ನೇ ಬದಲಾಯಿಸಿತು. ಸ್ನೇಹದ ಮಾತಿನ ಹಿಂದೆ ಅಡಗಿರುವ ಮೋಸವನ್ನು ಆಕೆ ಗಮನಿಸಲಿಲ್ಲ… ಲೈಂಗಿಕ ದಾಳಿಗೆ ಗುರಿಯಾದಳು. ಕೊನೆಗೆ ಯುವತಿ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಹೈದರಾಬಾದಿನ ರೆಯಿನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೀರಾ ಚೌಕ್ ಎಸಿಪಿ ಆನಂದ್ ಕೊಟ್ಟ ವಿವರಗಳು ಈ ರೀತಿ ಇವೆ. ರೆಯಿನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಬಾಲಕಿ (17) ಮೊಬೈಲ್ ಫೋನಿಗೆ ಮೆಸೇಜ್ ಬಂತು. ಬಹುಶಃ ಗೊತ್ತಿರುವವರಿರಬೇಕೆಂದು ಗುಡ್ ಮಾರ್ನಿಂಗ್ ಎಂದು ಮೆಸೇಜ್ ಮಾಡಿದಳು.

ಅಂದಿನಿಂದ ಬಾಲಕಿ, ಅಪರಿಚಿತ ವ್ಯಕ್ತಿ ಇಬ್ಬರೂ ಮೆಸೇಜ್‌ಗಳು, ಫೋನ್‌ನಲ್ಲಿ ಮಾತನಾಡಿಕೊಳ್ಳುವುದನ್ನು ಮಾಡಿದರು. ಈ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿ ತಾನು ನಾಸೀರ್ ಬಾಬಾ (19) ಎಂದೂ, ಸಂತೋಷ್ ನಗರ್‌ದಲ್ಲಿ ವಾಸವಾಗದ್ದೀನೆಂದು ಹೇಳಿದ. ಸ್ವಲ್ಪ ಸಮಯದ ಬಳಿಕ ನೀನೆಂದರೆ ಇಷ್ಟ ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದ ಕಾರಣ ಬಾಲಕಿ ಅದಕ್ಕೆ ಓಕೆ ಎಂದಿದ್ದಳು. ಅಂದಿನಿಂದ ಪ್ರತಿ ದಿನ ಭೇಟಿಯಾಗುತ್ತಿದ್ದರು. ಮದುವೆಯಾಗೋಣ ಎಂದು ಬಾಬಾ ಆ ಬಾಲಕಿಗೆ ಹೇಳಿದ. ಕುಟುಂಬಿಕರಿಗೆ ಹೇಳಿ ಮದುವೆಯಾಗೋಣ ಎಂದಳು ಬಾಲಕಿ. ಮನೆಯಲ್ಲಿ ಹೇಳಿದರೆ ಒಪ್ಪಿಕೊಳ್ಳಲ್ಲ ಎಂದು ಬಾಬಾ ನಂಬಿಸಿದ. ಹಾಗಾಗಿ ಬಾಲಕಿಯನ್ನು ನಗರದ ಹೊರವಲಯಕ್ಕೆ ಡಿಸೆಂಬರ್ ತಿಂಗಳ 26ರಂದು ಕರೆದೊಯ್ದ.

ಅಲ್ಲಿಯವರೆಗೂ ಪ್ಲಾನ್ ಪ್ರಕಾರ ವ್ಯವಹರಿಸಿದ ಬಾಬಾ ಇನ್ನೊಂದು ಕಡೆ ವಾಸವಾಗಿದ್ದ ಸೋದರನಿಗೆ ಫೋನ್ ಮಾಡಿ ಕೊಠಡಿಯೊಂದನ್ನು ವ್ಯವಸ್ಥೆ ಮಾಡುವಂತೆ ಕೇಳಿದ. ಆ ದಿನ ರಾತ್ರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ. ಮರುದಿನ ಸಂತ್ರಸ್ಥೆಯನ್ನು ಆಕೆ ಮನೆ ಬಳಿ ಬಿಟ್ಟು ಹೊರಟುಹೋದ. ಆದರೆ ಅದಾಗಲೆ ಬಾಲಕಿ ಕಾಣಿಸುತ್ತಿಲ್ಲ ಎಂದು ಅವರ ತಂದೆತಾಯಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿ ಮನೆಗೆ ಬಂದ ಕೂಡಲೆ ವಿವರಗಳನ್ನು ತಿಳಿದುಕೊಂಡು ಪೊಲೀಸರಿಗೆ ತಿಳಿಸಿದರು. ಹಾಗಾಗಿ ಪೊಲೀಸರು ವಿಚಾರಿಸಲಾಗಿ ಬಾಲಕಿ ನಡೆದ ಸಂಗತಿಯನ್ನು ತಿಳಿಸಿದ್ದಾಳೆ. ಆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.


Click Here To Download Kannada AP2TG App From PlayStore!