ನಿಮ್ಮ ದೇಹದಲ್ಲಿರುವ ಅಧಿಕ ಕೊಬ್ಬು ಕರಗಬೇಕೆ..? ಮಿದುಳು ಶಾರ್ಪ್ ಆಗಬೇಕಾ..? ಹಾಗಿದ್ದರೆ ಹಿಮ್ಮುಖವಾಗಿ ವಾಕಿಂಗ್ ಮಾಡಿ…

ವಾಕಿಂಗ್‌ನಿಂದ ನಮಗೆ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ ಎಂದು ಎಲ್ಲರಿಗೂ ಗೊತ್ತೇ ಇದೆ. ಇದರಿಂದ ಸ್ಥೂಲಕಾಯ ನಿವಾರಣೆಯಾಗುತ್ತದೆ. ಕೊಲೆಸ್ಟರಾಲ್ ನಿಯಂತ್ರಣಕ್ಕೆ ಬರುತ್ತದೆ. ಒಳ್ಳೆಯ ದೇಹಸೌಷ್ಠವ ಬರುತ್ತದೆ. ಸ್ನಾಯುಗಳು ದೃಢಗೊಳ್ಳುತ್ತವೆ. ಇನ್ನೂ ಅನೇಕ ಪ್ರಯೋಜನಗಳು ಇವೆ. ಆದರೆ ವಾಕಿಂಗ್ ಯಾರೇ ಆಗಲಿ ಹೇಗೆ ಮಾಡುತ್ತಾರೆ…? ಹೇಗೆಂದರೆ ಮುಂದೆ ನಡೆಯುತ್ತಾ ಹೋಗುತ್ತೇವೆ, ಅಂತಿದ್ದೀರಾ..? ನೀವು ಹೇಳುತ್ತಿರುವುದು ಕರೆಕ್ಟ್. ಆದರೆ ಮುಂದಕ್ಕೆ ಅಲ್ಲದೆ ಹಿಮ್ಮುಖವಾಗಿ ನಡೆಯುತ್ತಾ ಸಹ ವಾಕಿಂಗ್ ಮಾಡಬಹುದು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ಈಗ ನೋಡೋಣ.

1. ಸಾಮಾನ್ಯವಾಗಿ ಮುಂದೆ ನಡೆಯುತ್ತಾ ವಾಕಿಂಗ್‌ನಲ್ಲಿ ಖರ್ಚಾಗುವ ಕ್ಯಾಲೊರಿಗಳಿಗಿಂತಲೂ ಹಿಮ್ಮುಖವಾಗಿ ನಡೆದರೆ ಹೆಚ್ಚು ಕ್ಯಾಲರಿ ಖರ್ಚಾಗುತ್ತದೆ.

2. ಹಿಮ್ಮುಖವಾಗಿ ನಡೆಯುವ ವಾಕಿಂಗ್‌ನಲ್ಲಿ 100 ಅಡಿ ನಡೆದರೆ ಮುಂದೆ ನಡೆಯುವ ವಾಕಿಂಗ್‌ನಲ್ಲಿ 1000 ಹೆಜ್ಜೆಹಾಕಿದಂತೆ.

3. ದೃಷ್ಟಿ ಸಂಬಂಧಿ ಸಮಸ್ಯೆಗಳು ಇರುವವರು ನಿತ್ಯ ಹಿಮ್ಮುಖವಾಗಿ ನಡೆಯುವುದನ್ನು ಪ್ರಾಕ್ಟೀಸ್ ಮಾಡಿದರೆ ಆ ಸಮಸ್ಯೆಗಳು ನಿವಾರಣೆಯಾಗುತ್ತವೆ.

4. ತೊಡೆಗಳು, ಕಾಲುಗಳು, ಎದೆಭಾಗ, ಹೊಟ್ಟೆಯಂತಹ ಭಾಗಗಳಲ್ಲಿನ ಕೊಬ್ಬು ಕರಗುತ್ತದೆ. ಆಯಾ ಭಾಗಗಳಲ್ಲಿರುವ ಸ್ನಾಯುಗಳು ಬಲಗೊಳ್ಳುತ್ತವೆ. ಇದು ತೂಕ ಕಡಿಮೆಯಾಗಬೇಕು ಎನ್ನುವವರಿಗೆ ಸುಲಭ ಉಪಾಯ.

5. ಮುಂದೆ ನಡೆಯುವ ವಾಕಿಂಗ್‌ನಲ್ಲಿ ಮಿದುಳು ಅಷ್ಟಾಗಿ ಕೆಲಸ ಮಾಡುವ ಅಗತ್ಯ ಇರಲ್ಲ. ಆದರೆ ಹಿಮ್ಮುಖವಾಗಿ ನಡೆಯುವ ವಾಕಿಂಗ್‌ನಿಂದ ಮಿದುಳು ಕೆಲಸ ಮಾಡುತ್ತಾ, ಏಕಾಗ್ರತೆಯಿಂದ ಇರುತ್ತದೆ. ಆದಕಾರಣ ಜ್ಞಾಪಕಶಕ್ತಿಯಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ಮಿದುಳಿನ ಸಾಮರ್ಥ್ಯ ಉತ್ತಮಗೊಂಡು ಶಾರ್ಪ್ ಆಗುತ್ತದೆ.

6. ಚೀನಾದಲ್ಲಿ ಪುರಾತನ ಕಾಲದಲ್ಲಿ ಈ ರೀತಿ ಹಿಮ್ಮುಖವಾಗಿ ನಡೆಯುತ್ತಿದ್ದರು. ಇದರಿಂದ ಬಹಳಷ್ಟು ಮಂದಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಿದ್ದರಂತೆ. ಈಗ ಜಪಾನ್, ಯೂರೋಪ್ ದೇಶಗಳಲ್ಲಿ ಈ ಟ್ರೆಂಡ್ ಹೆಚ್ಚಾಗಿ ಇದೆ.

7. ಹಿಮ್ಮುಖವಾಗಿ ನಡೆಯುವುದರಿಂದ ಮೊಣಕಾಳು, ಮಂಡಿನೋವಿನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಬೆನ್ನುಮೂಳೆ ನೇರವಾಗುತ್ತದೆ. ಬೆನ್ನುನೋವು ಸಮಸ್ಯೆಗಳು, ನೋವುಗಳು ನಿವಾರಣೆಯಾಗುತ್ತವೆ.

8. ವಾರದಲ್ಲಿ ನಾಲ್ಕು ದಿನಗಳ ಕಾಲ ನಿತ್ಯ 10 ರಿಂದ 15 ನಿಮಿಷ ಹಿಮ್ಮುಖವಾಗಿ ನಡೆದರೆ ಸಾಕು. ಇದರಿಂದ ಮೇಲೆ ತಿಳಿಸಿದ ಉಪಯೋಗಗಳು ಇವೆ.

9. ಮುಂದೆ ನಡೆಯುವುದಕ್ಕಿಂತ ಹಿಮ್ಮುಖವಾಗಿ ನಡೆದರೆ ಹೃದಯ ಜೋರಾಗಿ ಹೊಡೆದುಕೊಳ್ಳುತ್ತದೆ. ಇದರಿಂದ ಹೃದಯಕ್ಕೆ ಒಳ್ಳೆಯ ಕಾರ್ಡಿಯಾ ಎಕ್ಸ್‌‌ರ್‌ಸೈಜ್ ಆಗಿ ಹೃದಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

10. ಹಿಮ್ಮುಖವಾಗಿ ನಡೆಯುವುದರಿಂದ ದೇಹದಲ್ಲಿನ ಅಧಿಕ ಕೊಬ್ಬು ಕರಗುತ್ತದೆ. ಇದರಿಂದ ತೂಕ ಬೇಗ ಕಡಿಮೆಯಾಗುವ ಸಾಧ್ಯತೆಗಳಿವೆ.

11. ಸರಿಯಾಗಿ ಪ್ರಾಕ್ಟೀಸ್ ಮಾಡಿದರೆ ಹಿಮ್ಮುಖವಾಗಿ ನಡೆಯುವುದಷ್ಟೆ ಅಲ್ಲ, ಹಿಮ್ಮುಖವಾಗಿ ರನ್ನಿಂಗ್ ಸಹ ಮಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಲಾಭ ಇರುತ್ತದೆ ಎಂದು ಸಂಶೋಧನೆಗಳು ಹೇಳುತ್ತಿವೆ.

12. ಚೀನಾದಲ್ಲಿ ಪುರಾತನ ಕಾಲದಲ್ಲಿ ಈ ರೀತಿ ಹಿಮ್ಮುಖವಾಗಿ ನಡೆಯುತ್ತಿದ್ದರು. ಇದರಿಂದ ಬಹಳಷ್ಟು ಮಂದಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಿದ್ದರಂತೆ. ಈಗ ಜಪಾನ್, ಯೂರೋಪ್ ದೇಶಗಳಲ್ಲಿ ಈ ಟ್ರೆಂಡ್ ಹೆಚ್ಚಾಗಿ ಇದೆ.


Click Here To Download Kannada AP2TG App From PlayStore!