ಹುಲ್ಲಿನರೊಟ್ಟಿ,ಕಳೆಗಿಡಗಳ ಸಾರು ತಿನ್ನುವ ದೀನಸ್ಥಿತಿ! ದೇವರೇ ಕರುಣಿಸು!!

ತಾವೇ ಕಷ್ಟಪಟ್ಟು ಬೆಳೆದ ದವಸ ,ಧಾನ್ಯಗಳನ್ನು ಮೂರು ಹೊತ್ತು ತೃಪ್ತಿಯಾಗಿ ತಿನ್ನುವ ರೈತರು ಕಷ್ಟಜೀವಿಗಳು. ಬೆಳೆದದ್ದನ್ನು ತಿನ್ನುವುದು ಮಾತ್ರ ಗೊತ್ತಿರುವ ಇವರು ಯಾವುದೇ ರೀತಿಯ ತಂತ್ರಗಾರಿಕೆಯ ಅರಿವಿಲ್ಲದಂತಹ ಮುಗ್ಧರು. ಆದರೆ,ಕಾಲವು ಕರುಣೆ ತೋರದೆ….ಪ್ರಪಂಚಕ್ಕೇ ಅನ್ನವನ್ನು ನೀಡುವ ಅನ್ನಧಾತ ಹಸಿವಿನಿಂದ ನರಳುವ ಪರಿಸ್ಥಿತಿಬಂದಿದೆ.!.ಒಂದು ವೇಳೆ ನಾವೇನಾದರೂ ಉತ್ತರ ಪ್ರದೇಶದ ಬುಂದೇಲ್ ಖಂಡ್ ಶ್ರಮಜೀವಿಗಳ ಪರಿಸ್ಥಿತಿಯನ್ನು ನೋಡಿದರೆ ಹೃದಯ ಒಡೆದು ಹೋಗುತ್ತದೆ. ‘ಅನ್ನಧಾತ’ ಎಂದು ಕರೆಯುವ ನಮ್ಮ ಜನ ನಾಯಕರ ಮಾತುಗಳಿಗೂ ಅಲ್ಲಿ ಕಾಣುವ ವಸ್ತುಸ್ಥಿತಿಗೂ ಅಜಗಜಾಂತರ ವ್ಯತ್ಯಾಸ.

ಉತ್ತರ ಪ್ರದೇಶದ ಬುಂದೇಲ್ ಖಂಡ್ ಹತ್ತಿರದ ಕೆಲವು ಗ್ರಾಮಗಳು ಕಳೆದ ಕೆಲವು ವರ್ಷಗಳಿಂದ ಬರಪೀಡಿತವಾಗಿವೆ. ಕುಡಿಯಲು ನೀರಿಲ್ಲ. ರಾಸುಗಳಿಗೆ ಮೇವಿಲ್ಲ.ಮನುಷ್ಯ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಹುಲ್ಲಿನ ಬೀಜಗಳನ್ನು ಪುಡಿಮಾಡಿ ರೊಟ್ಟಿಗಳನ್ನು ಮಾಡಿ ತಿಂದು ಜೀವನ ಸಾಗಿಸುವ ಪರಿಸ್ಥಿತಿ. ಹುಲ್ಲನ್ನು ‘ಫಿಕಾರ್’ ಎಂದು ಕರೆಯುತ್ತಾರೆ. ರೊಟ್ಟಿಗಳಿಗೆ ‘ಸಮಾಯ್’ ಎಂದು ಕರೆಯಲ್ಪಡುವ ಕಳೆಗಿಡಗಳನ್ನು ಬೇಯಿಸಿ,ಅದಕ್ಕೆ ಸ್ವಲ್ಪ ಉಪ್ಪು ಖಾರ ಬೆರೆಸಿ ಸಾರಿನಂತೆ ಮಾಡಿ ತಿಂದು ಜೀವನ ಸಾಗಿಸುತ್ತಿದ್ದಾರೆ.ಕಳೆದ ಎರಡು ವರ್ಷಗಳಿಂದ ಇಲ್ಲಿ ಬೆಳೆದ ಬೆಳೆಗಳು,ಅಕಾಲ ಮಳೆಯಿಂದಾಗಿ ಕೊಚ್ಚಿಕೊಂಡು ಹೋಗಿ ಬೆಳೆ ಸಂಪೂರ್ಣ ನಾಶವಾಗಿದೆ.

ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕಾದ ಸರಕಾರ ಇವರ ಸಹಾಯಕ್ಕೆ ಬರುತ್ತಿಲ್ಲ.ಪರಿಸ್ಥಿತಿ ಹೀಗಿರುವಾಗ ಇವರಿಗೆ ಯಾರು ದಿಕ್ಕು. ಬೆಳೆ ನಷ್ಟವಾದಾಗ,ಬರಗಾಲ ಬಂದಾಗ ಸರಕಾರ ರೈತರಿಗೆ ಅಲ್ಪ ಸ್ವಲ್ಪ ಪರಿಹಾರ ನೀಡಿ ಕೈತೊಳೆದುಕೊಂಡರೆ ಸಾಕಾಗುವುದಿಲ್ಲ.ಮೊದಲಿಗೆ ಅವರಿಗೆ ಬೇಕಾಗುವ ನಿತ್ಯಾವಸರ ವಸ್ತುಗಳನ್ನು ಸರಕಾರ ಉಚಿತವಾಗಿ ನಡಬೇಕು.
ಎಲ್ಲ ವಿಧಗಳಿಂದಲೂ ನಾವು ನಿಮಗೆ ರಕ್ಷಣೆ ನೀಡುತ್ತೇವೆ, ನಾವು ನಿಮ್ಮೊಂದಿಗಿದ್ದೇವೆ ಎಂಬ ಭರವಸೆ ನೀಡಬೇಕು…ಆಗ,ಭೂಮಿಯನ್ನು ನಂಬಿಕೊಂಡು ಹಸಿದುಕೊಂಡು ಜೀವನ ಸಾಗಿಸುತ್ತಿರುವ ದಿನಗಳು ಕೊನೆಗೊಳ್ಳುತ್ತವೆ.


Click Here To Download Kannada AP2TG App From PlayStore!

Share this post

scroll to top