ಯಾರಾದರೂ ಸಾವನ್ನಪ್ಪಿದ ಸುದ್ದಿ ತಿಳಿದರೆ RIP ಎಂದು ಕಾಮೆಂಟ್ ಮಾಡುತ್ತೆವೆ. ಹಾಗೆ ಕಾಮೆಂಟ್ ಮಾಡಬಾರೆಂದು ನಿಮಗೆ ಗೊತ್ತಾ…?

ಒಬ್ಬ ವ್ಯಕ್ತಿ ಮರಣಹೊಂದಿದ ಸುದ್ದಿ Facebook ಅಥವಾ twitter ನಂತಹ ಸಾಮಾಜಿಕ ತಾಣಗಳಲ್ಲಿ ಕಂಡ ತಕ್ಷಣ RIP ಎಂದು ಕಾಮೆಂಟ್ ಮಾಡುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿದೆ. ಆದರೆ ಯಾವುದೇ ಕಾರಣಕ್ಕೂ ಆ ಪದವನ್ನು ಬಳಸಬಾರದಂತೆ. RIP ಎಂದರೆ Rest in peace ಎಂದು. ಆತ್ಮ ಪ್ರಶಾಂತವಾಗಿ ವಿಶ್ರಾಂತಿ ಪಡೆಯಲಿ ಎಂಬುದು ಈ RIP ನ ಅರ್ಥ.

ಹಾಗೆ ನೋಡಿದರೆ ನಮ್ಮ ಸನಾತನ ಧರ್ಮದ ಪ್ರಕಾರ ಆತ್ಮಕ್ಕೆ ಸಾವು ಎಂಬುದಿಲ್ಲ. ಆತ್ಮಗೆ ಆಯಾಸವೆಂಬುದು ಆಗುವುದಿಲ್ಲ. ಅಂತಹದರಲ್ಲಿ ವಿಶ್ರಾಂತಿ ಎಲ್ಲಿರುತ್ತದೆ..? ಹಾಗೆಯೇ ಮರಣಾನಂತರ ಜೀವಿಯ ಪಾಪಪುಣ್ಯದ ಆಧಾರದ ಮೇಲೆ, ನಂತರದ ಜನ್ಮ ಹೊಂದುವುದೋ ಅಥವಾ ಸ್ವರ್ಗ ಇಲ್ಲವೇ ನರಕಕ್ಕೆ ಹೋಗುವುದೋ ಅಥವಾ ಮೋಕ್ಷ ಪಡೆಯುವುದೋ ಎಂದಿರುತ್ತದೆ. ಮೋಕ್ಷ ಸಿಗುವ ತನಕ ಇದು ಒಂದು ಚಕ್ರದಂತೆ ಸುತ್ತುತ್ತಿರುತ್ತದೆ. ಇದು ನಮ್ಮ ನಿರೀಕ್ಷೆಯಂತೆ ಇರುವುದಿಲ್ಲ.

RIP ಎಂಬುದು ಪಾಶ್ಚಿಮಾತ್ಯವಾಗಿದ್ದು, ನಮ್ಮ ಸನಾತನ ಧರ್ಮದಲ್ಲಿ ಹೀಗೆ ಹೇಳುವುದು ತಪ್ಪು. ಮರಣಹೊಂದಿದ ವ್ಯಕ್ತಿಗೆ ಮುಕ್ತಿ ದೊರೆಯಬೇಕೆಂದೋ, ಇಲ್ಲವೇ ಸ್ವರ್ಗಕ್ಕೆ ಹೋಗಬೇಕೆಂದು ಪ್ರಾರ್ಥನೆ ಮಾಡಬೇಕೆ ಹೊರತು, RIP ಎಂದು ಪ್ರಾರ್ಥಿಸವುದು ಸನಾತನ ಧರ್ಮಕ್ಕೆ ವಿರುದ್ಧವಾದುದು ಎಂಬುದನ್ನು ನೆನಪಿಡಿ. ಸ್ವರ್ಗ ಪ್ರಾಪ್ತಿರಸ್ತು ಎಂದು ಬಯಸಬೇಕು ಹೊರತು RIP ಹಾಕಬಾರದಂತೆ. ಇನ್ನುಮುಂದೆಯಾದರೂ ಹಾಗೆ ಕಾಮೆಂಟ್ ಮಾಡಬೇಡಿ.


Click Here To Download Kannada AP2TG App From PlayStore!

Share this post

scroll to top