ಬೀದಿಗಳನ್ನು ಸ್ವಚ್ಚಮಾಡುವ ವ್ಯಕ್ತಿಯ ಕನಸನ್ನು ನನಸು ಮಾಡಿದ ಯುವಕ..! ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಂಗಾರದ ನೆಕ್ಲೆಸ್ ಕೊಡಿಸಿದ….!

ಈ ಫೋಟೋದಲ್ಲಿ ಕಾಣಿಸುತ್ತಿರುವ ಮುದುಕ ಸೌದಿಯಲ್ಲಿ ಬೀದಿ ಸ್ವಚ್ಚ ಮಾಡುತ್ತಿರುತ್ತಾನೆ. ಎಷ್ಟು ಕಷ್ಟಪಟ್ಟರೂ ತಿನ್ನುವುದಕ್ಕೆ ಆಗಲಿ, ಕುಡಿಟ್ಟುಕೊಳ್ಳುವುದಕ್ಕೆ ಆಗುವಷ್ಟು ಸಂಪಾದನೆ ಇಲ್ಲ. ಈ ವಯಸ್ಸಿನಲ್ಲೂ ಕಷ್ಟಪಟ್ಟರೆ ಮಾತ್ರ ಮನೆಯವರಿಗೆ ಊಟ ಸಿಗುತಿತ್ತು. ಆದರೂ ಆ ಮುದುಕನಿಗೆ ಪ್ರತಿದಿನ ಒಂದು ಬಂಗಾರದ ಅಂಗಡಿ ಬಹಳ ಆಕರ್ಷಿಸುತ್ತಿತ್ತು. ರಸ್ತೆ ಗೂಡಿಸುತ್ತಾ, ಆ ಅಂಗಡಿ ಬಂದ ತಕ್ಷಣ ಆ ಬಂಗಾರದ ಒಡವೆಗಳ ಕಡೆಯೇ ಕಣ್ಣು ಮುಚ್ಚದೇ ನೋಡುತ್ತಲೆ ಇರುತ್ತಿದ್ದ. ಹೀಗೆ ದಿನಾಲು ಅಲ್ಲಿಗೆ ಬರುವುದು, ಕೆಲಸ ಪೂರ್ತಿ ಆದಮೇಲೆ ಒಡವೆಗಳ ಕಡೆಯೆ ನೋಡುತ್ತಿದ್ದ. ಇದನ್ನೆಲ್ಲ ದೂರದಿಂದ ಒಬ್ಬ ಅರಬ್ ಯುವಕ ಗಮನಿಸಿದ.

ಆ ಮುದುಕನ ಹತ್ತಿರ ಬಂದು ಏನು ನೋಡುತ್ತಿದ್ದಿಯಾ ತಾತಾ..? ಎಂದು ಪ್ರಶ್ನಿಸಿದ ಆ ಯುವಕ, ತಕ್ಷಣ ಹಿಂದಕ್ಕೆ ತಿರುಗಿ ಆ ಮುದುಕ ಏನು ಇಲ್ಲ ಎಂದು ಹೇಳಿ ಹೋಗಲು ಮುಂದಾದ, ಪರವಾಗಿಲ್ಲ ಹೇಳಿ ಏನು ನೋಡುತ್ತಿದ್ದಿರಾ ಆ ಒಡವೆ ಬೇಕಾ..? ಯಾರಿಗೊಸ್ಕರ ನಿಮ್ಮ ಹೆಂಡತಿಗಾ ಎಂದು ಕೇಳಿದ ಅರಬ್ ಯುವಕ, ಇಲ್ಲ ನನ್ನ ಮಗಳಿಗೋಸ್ಕರ. ಅವಳಿಗೆ ಇಷ್ಟು ವರ್ಷಗಳಿಂದ ಏನು ಕೊಡಿಸಲಿಲ್ಲ. ಈ ಬಂಗಾರವನ್ನು ಕೊಡಿಸೋಣ ಎಂದರೂ ಅಷ್ಟು ಹಣ ನನ್ನ ಹತ್ತಿರವಿಲ್ಲ, ನನಗೆ ಒಬ್ಬ ಮಗ ಇದ್ದಿದ್ದರೆ ನನ್ನ ಮಗಳಿಗೆ ಈ ಒಡವೆಯನ್ನು ಕೊಡಿಸುತ್ತಿದ್ದನೇನೋ ಅಂತ ಹೇಳುತ್ತಾ ಕಣ್ಣೀರಿನಿಂದ ಉತ್ತರ ಕೊಟ್ಟ ಆ ಮುದುಕ. ಆದರೆ ಇದನ್ನು ನಾನು ಕೊಡಿಸುತ್ತೇನೆ ನನ್ನ ತಂಗಿಗೆ ಗಿಫ್ಟ್ ಆಗಿ ಈ ಒಡವೆಯನ್ನು ಕೊಡುತ್ತಿದ್ದೇನೆ ತೆಗೆದುಕೊಳ್ಳಿ. ಮನೆಗೆ ಹೋದಮೇಲೆ ಹೇಳಿ.. ನಿಮ್ಮ ಮಗಳಿಗೆ ನಿನಗೂ ಒಬ್ಬ ಅಣ್ಣ ಇದ್ದಾನೆ ಅಂತ. ಆ ಯುವಕ ಅಲ್ಲಿನ ಬಂಗಾರದ ಒಡವೆಯನ್ನು ಕೊಡಿಸಿದ. ಅಷ್ಟೆ ಅಲ್ಲ, ಸ್ವಲ್ಪ ಹಣವನ್ನು ಸಹ ಆ ಮುದುಕನ ಕೈಗೆ ಕೊಟ್ಟು, ಮನೆಗೆ ಹೋಗುವ ಮುನ್ನ ಏನಾದರೂ ಸ್ವಿಟ್ಸ್ ತೆಗೆದುಕೊಂಡು ಹೋಗಿ ಎಂದು ಹೇಳಿದ. ಇದರಿಂದ ಏನು ನಡೆಯುತ್ತಿದೆಯೋ ಅರ್ಥವಾಗದೆ, ಸ್ವಲ್ಪಸಮಯ ಹಾಗೆಯೇ ನಿಂತುಬಿಟ್ಟ ಆ ಮುದುಕ. ಅದರಿಂದ ಹೊರಗಡೆ ಬಂದು ನೋಡುವುದರೊಳಗೆ ಅಲ್ಲಿ ಆ ಯುವಕ ಕಾಣಿಸಲಿಲ್ಲ. ಬಂಗಾರದ ಅಂಗಡಿಯ ಯಜಮಾನನನ್ನು ಕೇಳಿದರೆ, ಈಗ ಹೋದ ಹೇಳಿದರು. ಹೊರಗಡೆ ಬಂದು ಕೂಗಿದರೂ ಏನೂ ಪ್ರಯೋಜನೆ ಇಲ್ಲವಾಯಿತು.

ಮನಸಿನಲ್ಲಿ ಆ ಯುವಕನಿಗೆ ಥ್ಯಾಂಕ್ಸ್ ಹೇಳಿಕೊಂಡ ಆ ಸ್ವಿಪರ್. ಆದರೆ ಇದಕ್ಕೆ ಸಂಬಂಧಿಸಿದ ಫೊಟೊಗಳನ್ನು ಯಾರೋ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಅಫ್ ಲೋಡ್ ಮಾಡಿದ್ದಾರೆ. ನಡೆದ ವಿವರಗಳನ್ನು ಹೇಳಿದರು. ಇದರಿಂದ ಈಗ ಫೊಟೊಗಳು ಆನ್ ಲೈನ್ ನಲ್ಲಿ ವೈರಲ್ ಆಗಿವೆ. ಮಮತೆಯ ಬೆಲೆ ತಿಳಿದ, ಆ ಯುವಕನನ್ನು ಎಲ್ಲರೂ ಅಭಿನಂಧಿಸುತ್ತಿದ್ದಾರೆ.


Click Here To Download Kannada AP2TG App From PlayStore!

Share this post

scroll to top