ನಿಮ್ಮ ಮೊಬೈಲ್’ನಲ್ಲಿ ಈ ಆ್ಯಪ್ ಇದ್ದರೆ ಸಾಕು, ATM ಕಾರ್ಡ್ ಅನ್ನು ON/OFF ಮಾಡಬಹುದು…!

ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಖಾತೆದಾರರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಅದು ತನ್ನ ಖಾತೆದಾರರ ATM ಕಾರ್ಡ್‍ಗಳನ್ನು SBI Quick ಆ್ಯಪ್ ಬಳಸಿ ಆನ್‍ಲೈನ್ ಮೂಲಕವೇ ON‍/OFF ಮಾಡಬಹುದಾದ ಅವಕಾಶ ನೀಡಿದೆ.

 

ಇತ್ತೀಚಿನ ದಿನಗಳಲ್ಲಿ ಜನರು ಆನ್‍ಲೈನ್‍ ವಹಿವಾಟನ್ನು ಹೆಚ್ಚು ನಡೆಸುತ್ತಿದ್ದು, ಅದಕ್ಕೆ ಸರ್ಕಾರ ಸಹ ಪ್ರೊತ್ಸಾಹ ನೀಡುತ್ತಿದೆ. ಆದರೆ ಇದೇ ಸಮಯದಲ್ಲಿ ಆನ್‍ಲೈನ್‍ ಕಳ್ಳರು ಬ್ಯಾಂಕ್ ಖಾತೆದಾರರ ಹಣಕ್ಕೆ ಕನ್ನ ಹಾಕುವ ಸಾಧ್ಯತೆದ್ದು, ಕೆಲವರು ಆನ್‍ಲೈನ್‍ ವ್ಯವಹಾರ ಮಾಡಲು ಭಯ ಪಡುತ್ತಿದ್ದಾರೆ. ಈ ಹಿಂದೆ ಇಂತಹ ಅನೇಕ ಘಟನೆಗಳು ಸಂಭವಿಸಿದ್ದು, ತಮ್ಮ ಬ್ಯಾಂಕ್ ಅಕೌಂಟ್’ನಲ್ಲಿ ಹಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಎಸ್‍ಬಿಐ ಜಾರಿಗೊಳಿಸಿರುವ ಈ ಯೋಜನೆಯಿಂದ ಖಾತೆದಾರರಿಗೆ ಖುಷಿಯಾಗುವುದು ಗ್ಯಾರಂಟಿ.

ಉದಾಹರಣೆಗೆ ನೀವು ಶಾಪಿಂಗ್ ಮಾಡುವಾಗ ಆನ್‍ಲೈನ್‍ ವ್ಯವಹಾರವನ್ನು ON ಮಾಡಿ ಶಾಪಿಂಗ್ ಮುಗಿದ ತಕ್ಷಣ OFF ಮಾಡಬಹುದಾಗಿದೆ. ಶಾಪಿಂಗ್ ಮತ್ತು ಇತರ ಆನ್‍ಲೈನ್‍ ವ್ಯವಹಾರಗಳಲ್ಲಿ ಖಾತೆದಾರರು ಅಗತ್ಯವಿದ್ದಾಗ ON‍ ಮಾಡಿಕೊಂಡು ವ್ಯವಹಾರ ಮುಗಿದ ತಕ್ಷಣ OFF ಮಾಡಬಹುದಾಗಿದೆ. ಹೀಗೆ ಮಾಡಿದರೆ ಬೇರೆಯವರು ನಿಮ್ಮ ಕಾರ್ಡ್‌ ಮತ್ತು ಖಾತೆಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ.

ಆ್ಯಂಡ್ರಾಯ್ಡ್, ವಿಂಡೋಸ್, ಫೋನ್‍ಗಳಲ್ಲಿ ಬಳಸಬಹುದಾದ SBI Quick ಆ್ಯಪ್ ಅನ್ನು ಈಗಾಗಲೇ ಲಕ್ಷಾಂತರ ಜನ ಬಳಸುತ್ತಿದ್ದಾರೆ. ದೇಸಿ ವ್ಯವಹಾರಗಳು ಮಾತ್ರವಲ್ಲದೆ ಅಂತಾರಾಷ್ಟ್ರೀಯ ವ್ಯವಹಾರಗಳ ಮೇಲೂ ಈ ಆ್ಯಪ್ ಬಳಸಿ ನಿಯಂತ್ರಣ ಸಾಧಿಸಬಹುದು. ಇದರಿಂದ ಅಂತಾರಾಷ್ಟ್ರೀಯ ಸೈಬರ್ ಕಳ್ಳರೂ ನಿಮ್ಮ ಖಾತೆಗಳಿಗೆ ಕನ್ನ ಹಾಕಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ನೋಟು ರದ್ದು ಮಾಡಿದ ಬಳಿಕ ಜನತೆ ನಗದು ಕೊರತೆ ಅನುಭವಿಸುತ್ತಿದ್ದು, ಸಾಧ್ಯವಾದಷ್ಟು ಆನ್‍ಲೈನ್‍ ವ್ಯವಹಾರದ ಕಡೆ ಮುಖ ತಿರುಗಿಸುವುದು ಅನಿವಾರ್ಯವಾಗಿದೆ. ಆದರೆ ಸೈಬರ್ ಕಳ್ಳತನದ ಭಯ ಖಾತೆದಾರರನ್ನು ಕಾಡುತ್ತಿತ್ತು. ಇದೀಗ ಎಸ್‍ಬಿಐ ಹೊಸ ತಾಂತ್ರಿಕ ಅವಕಾಶವನ್ನು ನೀಡಿರುವುದರಿಂದ ಖಾತೆದಾರರು ನೆಮ್ಮದಿಯಿಂದ ಆನ್‍ಲೈನ್ ವ್ಯವಹಾರ ನಡೆಸಬಹುದಾಗಿದೆ.


Click Here To Download Kannada AP2TG App From PlayStore!

Share this post

scroll to top