“ಎಸ್‌ಬಿಐ” ಲೋಗೋವನ್ನು ಆ ರೀತಿ ಯಾಕೆ ಡಿಸೈನ್ ಮಾಡಿದ್ದಾರೆ ಗೊತ್ತಾ? ಹಿಂದಿರುವ ಕಾರಣ, ಅಡಗಿರುವ ಅರ್ಥ ಇದೆ…!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ… ನಮ್ಮ ದೇಶದಲ್ಲೇ ಅತ್ಯಂತ ಹಳೆಯದಾದ, ಜನಪ್ರಿಯ ಬ್ಯಾಂಕ್ ಇದು. ಅಷ್ಟೆಲ್ಲಾ ಜನಪ್ರಿಯತೆ ಈ ಬ್ಯಾಂಕ್‌ಗೆ ಬರಲು ಕಾರಣ ಜನರ ನಂಬಿಕೆ. ಇದೇ ಬ್ಯಾಂಕನ್ನು ಕಾಪಾಡುತ್ತಿದೆ. ಆದರೆ ಆಗಾಗ ಈ ಬ್ಯಾಂಕ್ ಸುದ್ದಿಯಲ್ಲಿ ನಿಲ್ಲುತ್ತಲೇ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬ್ಯಾಂಕ್ ಬಗ್ಗೆ, ಅದರಲ್ಲಿನ ಉದ್ಯೋಗಿಗಳ ಬಗ್ಗೆ, ಇತರೆ ಸಂಗತಿಗಳ ಬಗ್ಗೆ ಜೋಕ್ ಮಾಡುತ್ತಾ ಟ್ರೋಲ್ ಮಾಡುತ್ತಲೇ ಇರುತ್ತಾರೆ. ಆದರೆ ಇದೆಲ್ಲಾ ಸರಿ.. ಈಗ ಮತ್ತೆ ಎಸ್‍ಬಿಐ ಬಗ್ಗೆ ಯಾವುದಾದರೂ ಸುದ್ದಿ ಆ ರೀತಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಿದೆಯೇ ಎಂದರೆ…ಊಹುಂ.. ಅದಲ್ಲ..ಈಗ ಹೇಳಲಿರುವ ಸಂಗತಿ ಬೇರೆ. ಇಷ್ಟಕ್ಕೂ ಅದೇನೆಂದರೆ…

ನೀವು ಎಂದಾದರೂ ಎಸ್‌ಬಿಐ ಲೋಗೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಬಹಳಷ್ಟು ಸಲ ಅದನ್ನು ನೋಡಿರುತ್ತೀರಿ ಆದರೆ ಸರಿಯಾಗಿ ಗಮನಿಸಿರಲ್ಲ. ಗಮನಿಸಿದ್ದರೂ, ಗಮನಿಸದಿದ್ದರೂ ಈಗ ಅದರ ಅರ್ಥ ಏನು, ಇಷ್ಟಕ್ಕೂ ಆ ರೀತಿ ಲೋಗೊ ಯಾಕೆ ಡಿಸೈನ್ ಮಾಡಿದರು ಎಂಬುದನ್ನು ತಿಳಿದುಕೊಳ್ಳೋಣ.

ಇದುವರೆಗೆ ಎಸ್‍ಬಿಐ ಲೋಗೋ ಯಾಕೆ ಆ ರೀತಿ ವಿನ್ಯಾಸದಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ಕೆಲವರು ಹಲವು ವಿವರಣೆಗಳನ್ನು ನೀಡಿದರು. ಅದೇನೆಂದರೆ… ಎಸ್‌ಬಿಐ ಲೋಗೋದಲ್ಲಿರುವ ನೀಲಿ ಬಣ್ಣ ಏಕತೆಗೆ ಚಿಹ್ನೆ ಎಂದು, ಬಿಳಿ ಬಣ್ಣ ಕಾಮನ್ ಮ್ಯಾನ್‌ಗೆ ಚಿಹ್ನೆ ಎಂದು ಕೆಲವು ಹೇಳುತ್ತಿದ್ದಾರೆ. ಇನ್ನು ಈ ಲೋಗೋ ಬಗ್ಗೆ ಇನ್ನೂ ಕೆಲವರು ಏನೆಲ್ಲ ವಿವರಣೆ ನೀಡಿದರೆಂದರೆ.. ಬ್ಲೂ ಸರ್ಕಲ್‌ನಲ್ಲಿ ಇರುವುದು ಕೀ ಹೋಲ್ ಸೂಚಿಸುತ್ತದೆಂದು, ಅದು ಸೇಫ್ಟಿಗೆ, ಸೆಕ್ಯುರಿಟಿಗೆ ಸಿಂಬಲ್ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಲೋಗೋವನ್ನು ಕಂಕಾರಿಯಾ ಸರೋವರದ ಆಕಾರದಲ್ಲಿ ತಯಾರಿಸಿದ್ದಾರೆನ್ನುತ್ತಾರೆ. ಆದರೆ ಇವು ಯಾವುವೂ ಸರಿಯಾದ ವಿವರಣೆಗಳಲ್ಲ. ಕೊನೆಗೆ ಆ ಲೋಗೋ ಡಿಸೈನ್ ಮಾಡಿದ ಶೇಖರ್ ಕಾಮತ್ ಆ ಲೋಗೋವನ್ನು ಯಾವ ರೀತಿ ತಯಾರಿಸಿದರು ಎಂದು ಹೇಳಿದರು.

ಎಸ್‌ಬಿಐ ಲೋಗೋವನ್ನು 1970ರಲ್ಲಿ ಶೇಖರ್ ಕಾಮತ್ ವಿನ್ಯಾಸ ಮಾಡಿದರು. ಇವರು ಅಹಮದಾಬಾದ್‌ನಲ್ಲಿ ಇರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್ ಹಳೆ ವಿದ್ಯಾರ್ಥಿ. ಲೋಗೋವನ್ನು ಅವರು ಆ ರೀತಿ ಯಾಕೆ ಡಿಸೈನ್ ಮಾಡಿದರೆಂದರೆ…ಆಗ ಬ್ಯಾಂಕ್‌ಗಳಲ್ಲಿ ಕ್ಯಾಶ್ ತೆಗೆದುಕೊಳ್ಳಬೇಕೆಂದರೂ, ಹಾಕಬೇಕೆಂದರೂ ಟೋಕನ್ ಸಿಸ್ಟಂ ಇತ್ತಂತೆ. ಆ ಟೋಕನ್‌ಗಳು ಪ್ಲಾಸ್ಟಿಕ್ ಕಾಯಿನ್ ತರಹ ಇದ್ದವು. ಅವು ಮಧ್ಯದಲ್ಲಿ ರಂಧ್ರವನ್ನು ಒಳಗೊಂಡಿದ್ದವು. ಆ ಪ್ಲಾಸ್ಟಿಕ್ ಕಾಯಿನ್ ರೀತಿಯಲ್ಲೇ ನೀಲಿ ಬಣ್ಣದ ವೃತ್ತ ಎಳೆದರು. ಅದರಲ್ಲಿ ಬಿಳಿ ಬಣ್ಣ ಯಾಕೆಂದರೆ.. ಆಗ ಕೇವಲ ಒಬ್ಬ ಸಿಂಗಲ್ ಬ್ಯಾಂಕ್ ಮ್ಯಾನೇಜರ್ ಎಲ್ಲಾ ಊರುಗಳಲ್ಲೂ ಬ್ಯಾಂಕ್ ಕೆಲಸ ಮಾಡುತ್ತಿದ್ದರು. ಹಾಗಾಗಿ ಆ ವ್ಯಕ್ತಿಯನ್ನು ಸೂಚಿಸುವಂತೆ ಲೋಗೋ ಮಧ್ಯದಲ್ಲಿ ಬಿಳಿ ಬಣ್ಣ ಭಾಗ ಇಟ್ಟರು. ಇನ್ನು ವೃತ್ತಕ್ಕೆ ಹಾಕಿರುವುದು ಇಂಡಿಯನ್ ಸನ್ನಿ ಬ್ಲೂ ಸ್ಕೈ ಕಲರ್. ಆ ರೀತಿ ಎಸ್‌ಬಿಐ ಲೋಗೋ ಡಿಸೈನ್ ಮಾಡಿದರು. ಇನ್ನು ಈ ಲೋಗೋವನ್ನು ಸಿಂಪಲ್ ಆಗಿ ಯಾರು ಬೇಕಾದರೂ ಡಿಸೈನ್ ಮಾಡಬಹುದು. ಹಾಗಾಗಿ ಈ ಲೋಗೋ ತುಂಬಾ ಜನಪ್ರಿಯವಾಯಿತು. ಅಂದಿನಿಂದ ಈ ಲೋಗೋವನ್ನು ಎಸ್‌ಬಿಐ ಬಳಸುತ್ತಿದೆ. ಇದಿಷ್ಟು ಲೋಗೋ ಹಿಂದಿನ ಕಥೆ..!


Click Here To Download Kannada AP2TG App From PlayStore!