ಯುಗಾದಿ ದಿನ ಈ ಪುಟ್ಟ ಕೆಲಸಗಳನ್ನು ಮಾಡಿ ನೋಡಿ. ಶ್ರೀಮಂತರಾಗುತ್ತೀರ. ಆರೋಗ್ಯ ಸಿದ್ಧಿಸುತ್ತದೆ..!

ಯುಗಾದಿ.. ಹಿಂದೂ ಹೊಸವರ್ಷ ಆರಂಭವಾಗುವ ದಿನ.. ಹಾಗಾಗಿ ವರ್ಷದ ಮೊದಲ ದಿನವಾದ ಕಾರಣ ಇದನ್ನು ನಾವು ಯುಗಾದಿ, ಉಗಾದಿ ಎಂದು ಕರೆಯುತ್ತೇವೆ. ಹಿಂದೂಗಳಿಗೆ ಯುಗಾದಿ ಮುಖ್ಯವಾದ ಹಬ್ಬ. ಯುಗಾದಿ ದಿನ ಬ್ರಹ್ಮ ಸೃಷ್ಟಿಯನ್ನು ಮಾಡಿದ ಎಂದು ಪುರಾಣಗಳು ಹೇಳುತ್ತವೆ. ಪೂರ್ವದಲ್ಲಿ ಒಂದು ಕಾಲದಲ್ಲಿ ಸೋಮಕಾಸುರ ಎಂಬ ರಾಕ್ಷಸನು ಬ್ರಹ್ಮನ ಬಳಿ ಇರುವ ಪುರಾಣಗಳನ್ನು ಕದಿಯುತ್ತಾನೆ. ಆ ವೇದಗಳನ್ನು ತೆಗೆದುಕೊಂಡು ರಾಕ್ಷಸನು ಸಮುದ್ರ ಗರ್ಭದಲ್ಲಿ ಅವಿತುಕೊಳ್ಳುತ್ತಾನೆ. ಈ ಸಂಗತಿ ವಿಷ್ಣುವಿಗೆ ಗೊತ್ತಾಗುತ್ತದೆ. ಹಾಗಾಗಿ ಆತ ಮತ್ಸ್ಯಾವತಾರೆ ಎತ್ತಿ ಆ ರಾಕ್ಷಸನನ್ನು ಸಮುದ್ರಗರ್ಭದಲ್ಲಿ ಹೂತುಹಾಕಿ ವೇದಗಳನ್ನು (ಪುರಾಣಗಳು) ತಂದು ಬ್ರಹ್ಮದೇವರಿಗೆ ನೀಡುತ್ತಾನೆ. ಬಳಿಕ ಬ್ರಹ್ಮನು ಸೃಷ್ಟಿಯನ್ನು ಆರಂಭಿಸುತ್ತಾನೆ. ಆ ರೀತಿ ಬ್ರಹ್ಮ ಸೃಷ್ಟಿಯನ್ನು ಯುಗಾದಿ ದಿನ ಆರಂಭಿಸುತ್ತಾನೆ. ಹಾಗಾಗಿ ಆ ದಿನಕ್ಕೆ ಪುರಾಣಗಳಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಇನ್ನು ನಮಗೆ ಒಂದು ವರ್ಷ ಎಂದರೆ ಅದು ಬ್ರಹ್ಮನಿಗೆ ಒಂದು ದಿನಕ್ಕೆ ಸಮಾನ. ಹಾಗಾಗಿ ಬ್ರಹ್ಮನಿಗೆ ನಿತ್ಯ ಯುಗಾದಿಯಾಗುತ್ತದೆ.. ಎಂದರೆ ಆತ ನಿತ್ಯ ಸೃಷ್ಟಿಸುತ್ತಿದ್ದಾನೆಂದು ಅರ್ಥ.

ಈ ವರ್ಷ ಮಾರ್ಚ್ 18ನೇ ತಾರೀಖು ಯುಗಾದಿ ಬರುತ್ತದೆ. ಆದರೆ ಆ ದಿನ ನಾವೀಗ ಹೇಳಲಿರುವುದು ಒಂದು ಕೆಲಸವನ್ನು ಮಾತ್ರ ಕಡ್ಡಾಯವಾಗಿ ಮಾಡಿ. ಅದೇನೆಂದರೆ… ನೀರಿನಲ್ಲಿ ಗಂಗಾದೇವಿ, ತೈಲ (ಎಣ್ಣೆ) ಲಕ್ಷ್ಮಿದೇವಿ ಇರುತ್ತಾರೆಂದು ಪುರಾಣಗಳು ಹೇಳುತ್ತವೆ. ಯುಗಾದಿ ದಿನ ಅವರು ಆಯಾ ಪದಾರ್ಥಗಳಲ್ಲಿ ಇರುತ್ತಾರಂತೆ. ಇದರಿಂದ ಯುಗಾದಿ ದಿನ ಬೆಳಗ್ಗೆ ಎಳ್ಳೆಣ್ಣೆ ತೈಲವನ್ನು ದೇಹಕ್ಕೆ ಹಚ್ಚಿಕೊಂಡು ನೀರಿನಲ್ಲಿ ಸ್ನಾನ ಮಾಡಬೇಕು. ತೈಲವನ್ನು ದೇಹಕ್ಕೆಲ್ಲಾ ಹಚ್ಚಿ ಅಭ್ಯಂಗನ ಸ್ನಾನ ಮಾಡಬೇಕು. ಈ ರೀತಿ ಮಾಡಿದವರಿಗೆ ಅಷ್ಟೈಶ್ವರ್ಯಗಳು ಸಿಗುತ್ತವೆ. ಅವರ ಆಯುರಾರೋಗ್ಯ ಚೆನ್ನಾಗಿರುತ್ತದೆ ಎನ್ನುತ್ತವೆ ಪುರಾಣಗಳು. ಆದಕಾರಣ ಆ ದಿನ ಈ ರೀತಿ ಸ್ನಾನ ಮಾಡುವುದನ್ನು ಮಾತ್ರ ಮರೆಯಬೇಡಿ.

ಇನ್ನು ಯುಗಾದಿ ಹಬ್ಬಕ್ಕೆ ಸಂಬಂಧಿಸಿದ ಇನ್ನಷ್ಟ್ಜು ವಿಷಯಗಳನ್ನು ಈಗ ತಿಳಿದುಕೊಳ್ಳೋಣ.

* ಯುಗಾದಿ ಹಬ್ಬ ವಸಂತ ಋತುವಿನಲ್ಲಿ ಬರುತ್ತದೆ. ಸಾಮಾನ್ಯವಾಗಿ ಈ ಕಾಲದಲ್ಲಿ ಅಮ್ಮ ಆಗುವುದು, ಇತರೆ ಸಾಂಕ್ರಾಮಿಕ ಖಾಯಿಲೆಗಳು ಹೆಚ್ಚಾಗಿ ಬರುತ್ತವೆ. ಇದರ ಜತೆಗೆ ಹಲವು ಮಾರಣಾಂತಿಕ ಖಾಯಿಲೆಗಳು ಸಹ ಬರುತ್ತವೆ. ಅನೇಕ ಮಂದಿ ಇದಕ್ಕೆ ಬಲಿಯಾಗುತ್ತಾರೆ. ಆದಕಾರಣ ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಸಮಯವನ್ನು ಯಮದ್ರಂಸ್ಥರು ಎಂದು ಕರೆಯುತ್ತಾರೆ. ಅಂದರೆ ಯಮನು ತನ್ನ ಕೋರೆಗಳನ್ನು ಹೊರಗಾಕಿ ಜನರನ್ನು ನಾಶ ಮಾಡುತ್ತಾನೆ ಎಂದರ್ಥ. ಹಾಗಾಗಿ ಬಹಳಷ್ಟು ಮಂದಿ ರೋಗಗಳಿಗೆ ಬಲಿಯಾಗುತ್ತಾರೆ. ಅದನ್ನು ನಿವಾರಿಸಬೇಕಾದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅದಕ್ಕೆ ಬೇವು ಬೆಲ್ಲ ಒಳ್ಳೆಯದನ್ನು ಮಾಡುತ್ತದೆ.

* ಯುಗಾದಿ ಬೇವು ಬೆಲ್ಲ ದಿವ್ಯವಾದ ಔಷಧ ಎಂದು ಪುರಾಣಗಳು ಹೇಳುತ್ತವೆ. ಇದನ್ನು ಯುಗಾದಿಯಿಂದ ಬಳಿಕ ಬರುವ ಶ್ರೀರಾಮನವವಿ ಹಬ್ಬದ ವರೆಗೂ ಅಥವಾ ಚೈತ್ರ ಹುಣ್ಣಿಮೆವರೆಗೂ ಪ್ರತಿ ದಿನ ತಿನ್ನಬೇಕಂತೆ. ಒಟ್ಟು 15ದಿನಗಳ ಕಾಲ ಬೇವು ಬೆಲ್ಲ ತಿನ್ನಬೇಕೆಂದು ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆಂದು ರೋಗಗಳಿಂದ ಮುಕ್ತಿ ಸಿಗುತ್ತದೆ. ಇದರಲ್ಲಿನ ಬೇವು ಹೊಟ್ಟೆಯಲ್ಲಿನ ಜಂತುಹುಳುಗಳನ್ನು ನಾಶ ಮಾಡುತ್ತದೆ. ಗಾಳಿ ಸೋಕುವ, ಅಮ್ಮ ಆಗುವಂತಹ ಸಮಸ್ಯೆಗಳು ಬರಲ್ಲ. ಅದೇ ರೀತಿ ಮಾವಿನ ಎಲೆ ಆಂಟಿ ವೈರಲ್ ಗುಣಗಳನ್ನು ಹೊಂದಿರುತ್ತದೆ. ಇದರಿಂದ ಜ್ವರ ಬರಲ್ಲ. ವಾತ, ಪಿತ್ತ, ಕಫ ಸಮಪ್ರಮಾಣವಾಗಿ ಇರುತ್ತವೆ. ಇದರಿಂದ ಯಾವುದೇ ಸಮಸ್ಯೆ ಬರದಂತೆ ಇರುತ್ತದೆ.

* ಯುಗಾದಿ ದಿನ ಮೇಲೆ ತಿಳಿಸಿದ ರೀತಿಯಲ್ಲಿ ಎಳ್ಳೆಣ್ಣೆಯಿಂದ ಅಭ್ಯಂಗನ ಸ್ನಾನ ಮಾಡಿದರೆ ದೇಹದಲ್ಲಿ ಇರುವ ವಿಷ ಪದಾರ್ಥಗಳು ಹೊರಗೆ ಹೋಗುತ್ತವೆ.

* ಯುಗಾದಿ ದಿನ ಮನೆಯ ದ್ವಾರಗಳನ್ನು ಮಾವಿನ ಎಲೆಗಳಿಂದ, ಚೆಂಡು ಹೂಗಳ ತೋರಣದಿಂದ ಕಟ್ಟುತ್ತಾರೆ. ಚೆಂಡುಹೂಗಳು, ಮಾವಿನ ಎಲೆಗಳು ಇರುವ ಆಂಟಿ ಸೆಪ್ಟಿಕ್, ಆಂಟಿ ಬಯೋಟಿಕ್ ಗುಣಗಳು ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುತ್ತವೆ. ಹೊರಗಿನಿಂದ ಬರುವ ರೋಗಕಾರಕ ಕ್ರಿಮಿಗಳನ್ನು ಮನೆಯ ಒಳಗೆ ಬಿಡಲ್ಲ.


Click Here To Download Kannada AP2TG App From PlayStore!