ಇವರೆಲ್ಲರೂ ಕಲೆಕ್ಟರ್ ಗಳೇ… ಪ್ರತಿಯೊಂದು ಚಿತ್ರಕ್ಕೂ ಒಂದು ಇತಿಹಾಸವಿದೆ. ತಿಳಿದುಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ.

ಅವರೆಲ್ಲರೂ ಕಲೆಕ್ಟರ್ ಗಳು….ಆಡಳಿತದ ಆಧಾರ ಸ್ಥಂಭಗಳು, ಸರಕಾರ,ಪ್ರಜೆಗಳ ನಡುವೆ ಸೇತುವೆಗಳು. ಪ್ರಜಾಸೇವೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು ಲೋಕ ಸೇವಾ ಆಯೋಗದ ಪರಿಕ್ಷೆಗಳನ್ನು ಎದುರಿಸಿ, ಕಲೆಕ್ಟರ್ಗಳಾಗಿ ಆರಿಸಲ್ಪಟ್ಟು. ಕಪ್ಪು ಚುಕ್ಕೆಯಿಲ್ಲದ ಆಡಳಿತ ನಡೆಸುತ್ತಲೇ ಅಮಾನತುಗಳಿಗೆ ಒಳಪಟ್ಟ ಅಮಾಯಕರು…. ತಾವು ನಂಬಿ ಬಂದ ಸಿದ್ಧಾಂತಕ್ಕೆ ಕಟ್ಟು ಬಿದ್ದು ಪ್ರಾಣಗಳನ್ನೇ ಕಳೆದುಕೊಂಡ 6 ಮಂದಿ ಕಲೆಕ್ಟರ್ಗಳ ಸ್ಪೂರ್ತಿದಾಯಕ ಕತೆ :

1.ದುರ್ಗ ಶಕ್ತಿ ನಾಗಪಾಲ್ :
2013 ರಲ್ಲಿ ಉತ್ತರ ಪ್ರದೇಶದ ಗೌತಮ ಬುದ್ಧ ನಗರ್ ಗೆ ‘ಸಬ್ ಡಿವಿಜಿನಲ್ ಮ್ಯಾಜಿಸ್ಟ್ರೇಟ್’ ಆಗಿ ನೇಮಕಗೊಂಡರು. ನೋಯಿಡ ಪ್ರಾಂತದಲ್ಲಿ ಯಮುನಾ,ಸಿಂದೂ ನದಿಗಳ ಮರಳು ಮಾಫಿಯಾ ಹೆಚ್ಚಾಗಿ ನಡೆಯುತ್ತಿರುವುದನ್ನು ತಿಳಿದು ,ನಿಯಂತ್ರಿಸಲು ಹಲವು ಪ್ರಣಾಳಿಕೆಗಳನ್ನು ಸಿದ್ಧಪಡಿಸಿದರು. ಮರಳು ಮಾಫಿಯಾವನ್ನು ನಿಯಂತ್ರಿಸಿದರು. ಆದರೆ,ಮರಳು ಮಾಫಿಯಾದಲ್ಲಿ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳ ಕೈವಾಡ ಇರುವುದರಿಂದ ,ದುರ್ಗ ಶಕ್ತಿ ಮತ ಕಲಹಗಳಿಗೆ ಕಾರಣರಾದರೆಂದು ಉತ್ತರ ಪ್ರದೇಶ್ ಸರಕಾರ ಅವರನ್ನು ಸಸ್ಪೆಂಡ್ ಮಾಡಿತು. ಇದರಿಂದ ಉತ್ತರ ಪ್ರದೇಶ್ ಸರಕಾರದ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ದಿನ ಪತ್ರಿಕೆಗಳಲ್ಲಿ ದೇಶವಿಡೀ ಚರ್ಚೆಗಳು ನಡೆದವು.

durga-shakti

2,ಡಿ.ಕೆ.ರವಿ :
ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ, ಜಿಲ್ಲಾ ಕಲೆಕ್ಟರಾಗಿ ಕಾರ್ಯ ನಿರ್ವಹಿಸುತ್ತಾ, ಉತ್ತಮ ಸರಕಾರಿ ಅಧಿಕಾರಿಯಾಗಿ ಪ್ರಜೆಗಳಿಂದ ಗುರುತಿಸಲ್ಪಟ್ಟರು. ಐಎಎಸ್ ಆಫೀಸರ್ ಡಿ.ಕೆ.ರವಿ ಯಾವುದೇ ರಾಜಕಿಯ ಒತ್ತಡಗಳಿಗೂ ಮಣಿಯದೆ ತನ್ನ ಕರ್ತವ್ಯ ನಿರ್ವಹಿಸಿದರು. ಮರಳು ಮಾಫಿಯಾವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆದರೂ ಸರಕಾರ ಡಿ.ಕೆ.ರವಿಯ ಕಾರ್ಯದಕ್ಷತೆಯ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿತು. ಅವರ ಪರವಾಗಿ ನಿಂತ ಪ್ರಜೆಗಳು ‘ಬಂದ್’ ಗಳನ್ನೂ ಮಾಡಿದರು, ರಾಜಕೀಯ ಒತ್ತಡಗಳಿಂದ ವಾಣಿಜ್ಯ ತೆರಿಗೆ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆಗೊಂಡರು. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾಫಿಯಾದಿಂದ 120 ಕೋಟಿ ರೂಪಾಯಿಗಳ ತೆರಿಗೆ ವಸೂಲಿ ಮಾಡಿದರು. ರಿಯಲ್ ಎಸ್ಟೇಟ್ ವ್ಯಾಪಾರಿಗಳ ಬೆದರಿಕೆಯಿಂದ ಅವರು ಆತ್ಮ ಹತ್ಯೆಗೆ ಶರಣಾದರೆಂದು ಕತೆ ಹೆಣೆದರು. ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಮಾಣಿಕರಾಗಿದ್ದ ರವಿಯನ್ನು ಹತ್ಯೆಮಾಡಿ ,ಆತ್ಮಹತ್ಯೆ ಮಾಡಿಕೊಂಡರೆಂದು ಸುದ್ದಿ ಮಾಡಿದ್ದಾರೆಂಬ ಅನುಮಾನವಿದೆ.

DK-ravi

 

3.ಅಶೋಕ್ ಖೇಮ್ಕಾ :
23 ವರ್ಷಗಳಲ್ಲಿ 45 ಸಲ ವರ್ಗಾವಣೆ, ದುರ್ಮಾರ್ಗರ ಪಾಲಿಗೆ ಸಿಂಹ ಸ್ವಪ್ನರಾಗಿದ್ದರು. ಅಧಿಕಾರಿಗಳು,ರಾಜಕೀಯ ನಾಯಕರುಗಳನ್ನು ಗಣನೆಗೆ ತೆಗೆದುಕೊಳ್ಳದೆ ತನ್ನ ಕರ್ತವ್ಯ ನಿರ್ವಹಣೆಯೇ ಮುಖ್ಯ. ಆವರು ಎಂತಹ ಅಧಿಕಾರಿಯೆಂದು ತಿಳಿಸಲು ಇಷ್ಟು ಪರಿಚಯ ಸಾಕು. ಅವರೇ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ .ಕಾಂಗ್ರೆಸ್ ಅಧಿನೇತ ಸೋನಿಯಾ ಗಾಂಧೀ ಅಳಿಯ, ವಾಧ್ರಾ ಭೂ ವ್ಯವಹಾರವನ್ನು ಬಯಲಿಗೆಳೆದ ಅಶೋಕ್ ಖೇಮ್ಕಾ ಅದಾಗಲೇ ಕರ್ತವ್ಯ ನಿರ್ವಹಣೆಯಲ್ಲಿ 45 ಸಲ ವರ್ಗಾವಣೆಗೊಂದಿದ್ದರು. ವಾಧ್ರಾ ಭೂ ವ್ಯವಹಾರವನ್ನು ಬಯಲಿಗೆಳೆದ ನಂತರ ಅವರನ್ನು ಹರ್ಯಾಣ ಸರಕಾರ ಪುರಾತತ್ವ ಶಾಖೆಯ ಡೈರೆಕ್ಟರ್ ಆಗಿ ವರ್ಗಾಯಿಸಿತು. ಸಾರಿಗೆ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಖೇಮ್ಕಾರನ್ನು ಕೇವಲ 128 ದಿನಗಳಲ್ಲೇ ಪುರಾತತ್ವ ಶಾಖೆಗೆ ವರ್ಗಾವಣೆ ಮಾಡಿತು.

ashok-khemka

4.ಯಶ್ವಂತ್ ಸೋನಾವಾನೇ :
ಮಹಾರಾಷ್ಟ್ರದ ಮಾಲೇಗಾವ್ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಾ, ಸಜಿವ ದಹನಕ್ಕೆ ಈಡಾದರು ಐಎಎಸ್ ಅಧಿಕಾರಿ ಯಶ್ವಂತ್ ಸೋನಾವನೇ. ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕುತ್ತಾ ಪ್ರಜೆಗಳ ಅಚ್ಚು ಮೆಚ್ಚಿನ ಅಧಿಕಾರಿಯಾಗಿ ಗುರುತಿಸಿಕೊಂಡರು. ಕೇವಲ ಒಂದೇ ಒಂದು ವಾರದಲ್ಲಿ ಆಯಿಲ್ ಮಾಫಿಯಾವನ್ನು ಮಟ್ಟಹಾಕಲು 200 ದಾಳಿಗಳನ್ನು,180 ಮೊಕದ್ದಮೆಗಳನ್ನು ಹೂಡಿದರು. ನಾಸಿಕ್ ಜಿಲ್ಲೆಯ ಪೋಪಟ್ ಷಿಂಡೇ ಎನ್ನುವ ಮಾಫಿಯಾ ವ್ಯಕ್ತಿ ಯಶ್ವಂತ್ ನನ್ನು ತನ್ನ ಬಂಧುಗಳ ಸಹಕಾರದೊಂದಿಗೆ ಸಜೀವವಾಗಿ ದಹನ ಮಾಡಿದನು. ಗಾಯಗಳಿಂದ ಪಾರಾದರೂ ತದನಂತರ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು ಯಶ್ವಂತ್.

yashwanth

5.ಷಣ್ಮುಗನ್ ಮಂಜುನಾಥ್ :
ಐಐಎಂ ಗ್ರಾಜುಯೇಟ್ ಆದ ಷಣ್ಮುಗನ್ ಮಂಜುನಾಥ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆಯುವಲ್ಲಿ ತೀವ್ರ ಹೋರಾಟ ನಡೆಸಿದರು. ಐಎಎಸ್ ಅಧಿಕಾರಿ ಸೋನಾವಾನೇ ರೀತಿ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಲಖಿಂಪೂರ್ ನಲ್ಲಿ ಒಂದು ಪೆಟ್ರೋಲ್ ಬಂಕನ್ನು ಮುಟ್ಟುಗೋಲು ಹಾಕಿಕೊಂಡಿದ್ದಕ್ಕಾಗಿ ಅವರನ್ನು ಗುಂಡಿಟ್ಟು ಕೊಂದರು. ಕಲಬೆರಕೆ ಪೆಟ್ರೋಲನ್ನು ಮಾರುತ್ತಿದ್ದ ಕಾರಣ ವಶಪಡಿಸಿಕೊಂಡ ಒಂದು ತಿಂಗಳ ನಂತರ ಅಲ್ಲಿಗೆ ನೋಡಲು ಬಂದ ಷಣ್ಮುಗನ್ ರನ್ನು ಗುಂಡಿಟ್ಟು ಕೊಂದರು. ಅವರ ಶರೀರದಲ್ಲಿ ಒಟ್ಟು 6 ಗುಂಡುಗಳಿದ್ದವು. ಕರ್ತವ್ಯನಿರತನಾಗಿದ್ದಾಗ ಪ್ರಾಣ ಬಿಟ್ಟ ಷಣ್ಮುಗನ್ ಹೆಸರಿನಲ್ಲಿ ಐಐಎಂ ವಿದ್ಯಾರ್ಥಿಗಳು ಒಂದು ಟ್ರಸ್ಟ್ ತೆರೆದು ಪ್ರಜೆಗಳ ಸೇವೆ ಮಾಡುತ್ತಿದ್ದಾರೆ. ಷಣ್ಮುಗನ್ ಮಾಡಿದ ಕೆಲಸದ ನೆನಪಿಗಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆ2.6 ಕೋಟಿ ರೂಪಾಯಿಗಳನ್ನು ಆತನ ಕುಟುಂಬಕ್ಕೆ ನೀಡಿತು.
shanmugan

 

6.ಮುಗ್ಧಾ ಸಿನ್ಹಾ :
ರಾಜಸ್ಥಾನದ ಜುಂಜೂರು ಜಿಲ್ಲೆಗೆ ಪ್ರಥಮ ಮಹಿಳಾ ಕಲೆಕ್ಟರಾಗಿ ಅಧಿಕಾರ ವಹಿಸಿಕೊಂಡವರು ಮುಗ್ಧಾ ಸಿನ್ಹಾ. ಅಧಿಕಾರ ವಹಿಸಿಕೊಂಡ ತಕ್ಷಣ ಅಲ್ಲಿಯ ಸ್ಥಳೀಯ ಮಾಫಿಯಾದ ಮೇಲೆ ಕಣ್ಣಿಟ್ಟು ಜಯ ಸಾಧಿಸಿದರು. ಅತ್ಯಲ್ಪ ಕಾಲದಲ್ಲೇ ಜನಸೇವಕಿಯೆಂದು ಪ್ರಖ್ಯಾತಿಗಳಿಸಿದರು. ಒಳ್ಳೆಯ ಕೆಲಸ ಮಾಡುತ್ತಿದ್ದರೂ, ರಾಜಕೀಯ ನೇತಾರರನ್ನು ಎದುರಿಸುವ ಅಧಿಕಾರಿಗಳಿಗೆ ವರ್ಗಾವಣೆ ಕಟ್ಟಿಟ್ಟ ಬುತ್ತಿ. ರಾಜಕೀಯ ಒತ್ತಡಗಳಿಗೆ ಮಣಿದು ಗಂಗಾ ನಗರ್ ಜಿಲ್ಲೆಯ ಕಲೆಕ್ಟರಾಗಿ ವರ್ಗಾವಣೆಗೊಂಡರು. ನನಗಾಗಿಯಾಗಲಿ,ರಾಜಕಿಯ ನಾಯಕರಿಗಾಗಲೀ ಸೇವೆ ಮಾಡಲು ನಾನಿಲ್ಲಿಗೆ ಬಂದಿಲ್ಲ. ಕೇವಲ ಪ್ರಜೆಗಳ ಸೇವೆಯನ್ನು ಮಾತ್ರ ಮಾಡಲು ಬಂದಿದ್ದೇನೆಂದು ಅವರು ಹೇಳಿದರು.

 mugdha


Click Here To Download Kannada AP2TG App From PlayStore!

Share this post

scroll to top