ಗರ್ಭಿಣಿಯಾಗಿದ್ದಾಗ ಮೃತಪಟ್ಟ ಆಕೆಯನ್ನು ಸಮಾಧಿ ಮಾಡಿದ ನಂತರ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದರೆ ಅಚ್ಚರಿ ಆಗುತ್ತದಲ್ಲವೆ..?

ಈಗ ಆಧುನಿಕ ತಾಂತ್ರಿಕತೆಯ ಸೌಲಭ್ಯ ಇರುವುದರಿಂದ ಪ್ರಾಣಾಪಾಯ ಸ್ಥಿತಿಯಲ್ಲಿರುವವರನ್ನು ಸಹ ಕಾಪಾಡಿಕೊಳ್ಳುವಂತಹ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿವೆ. ಆದರೆ ಈ ಹಿಂದೆ ಕಾಯಿಲೆ ಬಂದರೂ ಸಾವಿಗೀಡಾಗುತ್ತಿದ್ದರು, ಇದೇ ರೀತಿ ಗರ್ಭಿಣಿಯಾಗಿದ್ದ 25 ವರ್ಷದ ಆಕೆ ಮೃತಪಟ್ಟಿಳು. ನಂತರ ಆಕೆಯನ್ನು ಸಮಾಧಿ ಮಾಡಿದರು. ಆಶ್ಚರ್ಯದ ಸಂಗತಿ ಎಂದರೆ ಆಕೆ ಮೃತಪಟ್ಟ ನಂತರ ಸಮಾಧಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.

ಇದು ಸತ್ಯವಾದ ಮಾತು. ಈ ವಿಷಯವನ್ನು ಇಟಲಿಯ ಪುರಾತತ್ವ ಶಾಸ್ತ್ರಜ್ಞರು ಗುರುತಿಸಿದ್ದು, ಈ ಮಧ್ಯೆ ಭೂಮಿಯನ್ನು ಅಗೆಯುತ್ತಿರುವ ಸಮಯದಲ್ಲಿ ಸಿಕ್ಕಿದ ಮಧ್ಯಯುಗ ಕಾಲದ ಯುವತಿಯ ಅಸ್ಥಿಪಂಜರವನ್ನು ಪರಿಶೀಲಿಸಿದ ವಿಜ್ಞಾನಿಗಳು ಈ ವಿಷಯವನ್ನು ತಿಳಿಸಿದ್ದಾರೆ. 25 ವರ್ಷ ವಯಸ್ಸಿನ ಆಕೆ ಮೃತಪಟ್ಟಾಗ 38 ವಾರಗಳ ತುಂಬು ಗರ್ಭಿಣಿ ಆಗಿದ್ದ ಆಕೆಗೆ ಮೆದುಳಿಗೆ ಸಂಬಂಧಿಸಿದ ಖಾಯಿಲೆ ಹರಡಿಕೊಂಡಿದ್ದರಿಂದ ಗತ್ಯಂತರವಿಲ್ಲದೆ ಹೆರಿಗೆ ಮಾಡಿಸಲು ಪ್ರಯತ್ನಿಸಿದ್ದರಿಂದಲೇ ಆಕೆ ಮೃತಪಟ್ಟಿರಬಹುದೆಂದು ತಿಳಿದಿದ್ದಾರೆ.

ಈ ಖಾಯಿಲೆಗೆ ಅಂದಿನ ದಿನಗಳಲ್ಲಿ ಯಾವುದೇ ರೀತಿಯ ಚಿಕಿತ್ಸೆ ಇಲ್ಲದೆ ಹೊಟ್ಟೆಯಲ್ಲಿರುವ ಮಗುವನ್ನಾದರೂ ಕಾಪಾಡುವ ಉದ್ದೇಶದಿಂದ ಡೆಲಿವರಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್ತು ಆಕೆ ಮೃತಪಟ್ಟಿದ್ದು, ಹೂತಿಟ್ಟ ನಂತರ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಬುರುಡೆಗೆ ರಂಧ್ರ ಇರುವುದರಿಂದ ಆಕೆಗೆ ಮೆದುಳಿಗೆ ಸಂಬಂಧಿಸಿದ ಖಾಯಿಲೆ ಇರಬಹುದೆಂದು ಭಾವಿಸಿದ್ದಾರೆ. ಆಕೆಯನ್ನು ಹೂತಿಟ್ಟ ಘಟನೆ ಕ್ರಿಸ್ತ ಪೂರ್ವ 7 ಅಥವಾ 8ನೇ ಶತಮಾನದಲ್ಲಿ ನಡೆದಿರಬಹುದೆಂದು ಭಾವಿಸುತ್ತಿದ್ದಾರೆ. ಈ ವಿಷಯವನ್ನು ಫೆರಾರಾ, ಬೋಲೋಗ್ನಾ ವಿಶ್ವವಿದ್ಯಾಲಯದ ಸಂಶೋಧಕರು ವರ್ಲ್ಡ್ ನ್ಯೂರೋ ಸರ್ಜರಿ ಎಂಬ ಮ್ಯಾಗಜಿನ್ ನಲ್ಲಿ ಪ್ರಕಟಿಸಿದ್ದಾರೆ. ಏನೇ ಆಗಲಿ ಇದು ತುಂಬಾ ಆಶ್ಚರ್ಯಕರ ಸಂಗತಿಯೇ ಅಲ್ಲವೆ…


Click Here To Download Kannada AP2TG App From PlayStore!