ಇಬ್ಬರು ಯುವಕರು ಆಕೆ ಕೊರಳಲ್ಲಿನ ಸರ ಕಸಿದು ಓಡಿಹೋದರು..! ಬಳಿಕ ಆಕೆ ಮಾಡಿದ ಕೆಲಸ ಗೊತ್ತಾದರೆ ಹ್ಯಾಟ್ಸಾಪ್ ಅಂತೀರ..!

ಯಮನೊಂದಿಗೆ ಹೋರಾಡಿ ತನ್ನ ಗಂಡನ ಪ್ರಾಣವನ್ನು ರಕ್ಷಿಸಿದ ಸತಿಸಾವಿತ್ರಿ ನೆನಪಿದೆಯಲ್ಲವೇ. ಹಿಂದೂ ಪುರಾಣಗಳಲ್ಲಿ ಮಹಾ ಪತಿವ್ರತೆ. ಈಗಲೂ ಅದೆಷ್ಟೋ ಮಂದಿ ಮಹಿಳೆಯರಿಗೆ ಸ್ಫೂರ್ತಿ. ಸಾವಿತ್ರಿಯಂತೆಯೇ ತಮ್ಮ ಮಾಂಗಲ್ಯವನ್ನು ನೆನೆದೆ ಮಂಗಳಸೂತ್ರವನ್ನು ಕದ್ದ ಕಳ್ಳರ ಬೆನ್ನತ್ತಿದರು. ಅವರೊಂದಿಗೆ ಹೋರಾಡಿ ಕೊನೆಗೆ ತನ್ನ ತಾಳಿಯನ್ನು ದಕ್ಕಿಸಿಕೊಂಡರು ಇಂದಿನ ಸಾವಿತ್ರಿ. ಸೌಮ್ಯಾ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಈ ನ್ಯೂಸ್‌ನಿಂದಾಗಿ ರಾತ್ರೋರಾತ್ರಿ ಅವರು ಸ್ಟಾರ್ ಆದರು. ಇಷ್ಟಕ್ಕೂ ಯಾರು ಈ ಸೌಮ್ಯಾ. ಘಟನೆಯ ವಿವರಗಳು.

ಕೇರಳದಲ್ಲಿನ ಕೊಲ್ಲಂ ಜಿಲ್ಲೆ, ತೆವಲಕ್ಕಾರ ಪಟ್ಟಣಕ್ಕೆ ಸೇರಿದ ಸೌಮ್ಯ ವಯಸ್ಸು 28 ವರ್ಷ. ಗಂಡ ಟೈಲರ್. ಇಬ್ಬರು ಮಕ್ಕಳು ಶೋಭನಾ, ಸೋನಾ. ಸೇಲ್ಸ್ ಗರ್ಲ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಮನೆ, ಕುಟುಂಬ, ಉದ್ಯೋಗ ಇವು ಮೂರೇ ಮೂರು ತನ್ನ ಲೋಕ. ವಾರದ ಹಿಂದೆ ತಾನೊಬ್ಬ ಸಾಮಾನ್ಯ ಮಧ್ಯಮ ವರ್ಗದ ಗೃಹಿಣಿ. ಆದರೆ ಈಗ ಕೊಲ್ಲಂ ಜಿಲ್ಲೆಯಲ್ಲಿ ತಾನೊಬ್ಬ ಸೆಲೆಬ್ರಿಟಿ. ಸಿನಿಮಾ ತಾರೆಗಳಿಗಿಂತಲೂ ಹೆಚ್ಚು ಕ್ರೇಜ್ ಅವರಿಗೆ ಸಿಕ್ಕಿದೆ. ಕಣ್ಣು ಮೀಟಿ ರಾತ್ರೋರಾತ್ರಿ ಸ್ಟಾರ್ ಆದ ಪ್ರಿಯಾ ಪ್ರಕಾಶ್ ವಾರಿಯರ್‌ಗಿಂತಲೂ ಈ ವಾರಿಯರ್ ಈಗ ತುಂಬಾ ಫೇಮಸ್ ಆಗಿದ್ದಾರೆ. ಇಷ್ಟಕ್ಕೂ ಆಕೆ ಮಾಡಿದ್ದೇನು? ಸಿನಿಮಾ ಶೂಟಿಂಗ್‌ನಂತೆ ಚೇಸ್ ಮಾಡಿದರು. ಸರಗಳ್ಳನನ್ನು ಬೆನ್ನತ್ತಿ ಹಿಡಿದು ಅವರಿಗೆ ನಾಲ್ಕು ಬಾರಿಸಿ ಮಂಗಳಸೂತ್ರವನ್ನು ದಕ್ಕಿಸಿಕೊಂಡಿದ್ದಾರೆ.

ಉದ್ಯೋಗದಿಂದ ಸಂಜೆ ತನ್ನ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸೌಮ್ಯರನ್ನು ಬೈಕ್ ಒಂದು ಹಿಂಬಾಲಿಸಿತು. ಬೈಕ್‍ನಲ್ಲಿ ಇಬ್ಬರು ಯುವಕರು ಆಕೆ ಪಕ್ಕದಲ್ಲೇ ಗಾಡಿ ಓಡಿಸುತ್ತಾ ಆಕೆ ಕೊರಳಲ್ಲಿನ ತಾಳಿಸರ ಕಸಿದರು. ಏನು ನಡೆಯಿತು ಎಂದು ಗೊತ್ತಾಗದೆ ನಿಂತುಕೊಂಡ ಸೌಮ್ಯ ಕೂಡಲೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಚೇತರಿಸಿಕೊಂಡರು. ದಾರಿಯಲ್ಲಿ ಹೋಗುತ್ತಿದ್ದವರಿಗೆ ಏನು ನಡೆಯುತ್ತಿದೆಯೇ ಗೊತ್ತಾಗುವಂತೆ “ಕಳ್ಳ ಕಳ್ಳ ಹಿಡಿದುಕೊಳ್ಳಿ..” ಎಂದು ಅರಚುತ್ತಾ ಸ್ಕೂಟಿಯಲ್ಲೇ ಸರಗಳರನ್ನು ಬೆನ್ನತ್ತಿದರು. ಸುಮಾರು ಮೂರುವರೆ ಕಿ.ಮೀ ದೂರ ಬೆನ್ನತ್ತಿದರು ಅವರ ಬೈಕನ್ನು ಓವರ್ ಟೇಕ್ ಮಾಡಿ ಅವರ ಎದುರಾಗಿ ಬಂದಳು. ಆ ವೇಗದಲ್ಲೇ ಅವರ ಸ್ಕೂಟಿ ಬೈಕನ್ನು ಡಿಕ್ಕಿ ಹೊಡೆಯಿತು. ಓಡಿಬಂದವರು ಏನು ನಡೆಯುತ್ತಿದೆ ಎಂದು ಅರ್ಥವಾಗದೆ ಯುವಕರನ್ನು ಹಿಡಿದುಕೊಂಡರು. ಸೌಮ್ಯ ಅವರ ಮುಖಕ್ಕೆ ಮುಷ್ಠಿಯಲ್ಲಿ ನಾಲ್ಕು ಬಿಗಿದರು. ಚೈನ್ ಇದ್ದವ ತಪ್ಪಿಸಿಕೊಂಡು ಓಡಿಹೋದ. ಅಷ್ಟರಲ್ಲಿ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಅವರು ಸಹ ಆಗಮಿಸಿದರು. ಓಡಿಹೋದ ಕಳ್ಳನನ್ನು ನಿಮಿಷಗಳಲ್ಲಿ ಹಿಡಿದರು.

ಭಾರತೀಯ ನಾರಿಯರಿಗೆ ತಾಳಿ ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತೇ ಇದೆ. “ನನಗೆ ತಾಳಿ ತುಂಬಾ ಪವಿತ್ರವಾದದ್ದು. ಅದನ್ನು ಕಸಿದುಕೊಂಡು ಓಡಿದರೆ ನೋಡುತ್ತಾ ಸುಮ್ಮನಿರಲ್ಲ? ಅದಿಲ್ಲದೆ ಮನೆಗೆ ಹೋಗಲ್ಲ” ಎಂದುಕೊಂಡೆ. ಹೇಗಾದರೂ ಮಾಡಿ ಅವರನ್ನು ಹಿಡಿದು ತಾಳಿಯೊಂದಿಗೆ ಮನೆಗೆ ಹೋಗಬೇಕೆಂಬ ಉದ್ದೇಶದಿಂದ ಅವರ ಬೆನ್ನತ್ತಿದೆ. ಭಯಬೀಳದೆ ಅವರ ಬೆನ್ನತ್ತಿ ತಾಳಿಯನ್ನು ದಕ್ಕಿಸಿಕೊಂಡೆ ಎಂದಿದ್ದಾರೆ ಸೌಮ್ಯಾ. ಸರಗಳ್ಳರ ಬಗ್ಗೆ ಇದುವರೆಗೆ ಅದೆಷ್ಟೋ ಕಥೆಗಳನ್ನು ಕೇಳಿದ್ದೇವಾದರೂ. ಸರಗಳ್ಳರ ಬೆನ್ನುಮುರಿದ ಸೌಮ್ಯಾ ಕಥೆ ಈಗ ಎಲ್ಲರಿಗೂ ಸ್ಫೂರ್ತಿ.


Click Here To Download Kannada AP2TG App From PlayStore!