ಬಟಾಣಿ ಮಾರುತ್ತಿದ್ದ ಈತನೆಂದರೆ…ಹುಡುಗಿಯರಿಗೆ ಪಂಚ ಪ್ರಾಣ. ಯಾಕೆಂದು ಗೊತ್ತಾ..?

ಸಿನಿಮಾ ರಂಗವೇ ಬಹಳ ವಿಚಿತ್ರವಾದದ್ದು. ಅಂದ ಇದ್ದರೇನೇ ಸ್ಟಾರ್ಡಮ್ ಬರುತ್ತದೆಂದು ಬಹಳಷ್ಟು ಜನ ಬಾವಿಸುತ್ತಾರೆ. ಆದರೆ ಅದು ನಿಜವಲ್ಲವೆಂದರೆ ಯಾರೂ ನಂಬಲಾರರು. ಇಲ್ಲಿ ಅಂದ ಮುಖ್ಯವಲ್ಲ. ಜನರ ಮನಸ್ಸನ್ನು ಆಕರ್ಷಿಸುವುದೇ ಮುಖ್ಯ ವೆಂದು ಋಜುವಾತು ಮಾಡಿದವರು ಅನೇಕರು ನಮ್ಮ ಚಿತ್ರ ರಂಗದಲ್ಲಿದ್ದಾರೆ.ಇತ್ತೀಚಿನ ದಿನಗಳಲ್ಲಿ ಟಾಲೀವುಡ್ ನಲ್ಲಿ ಒಳ್ಳೆಯ ಹೆಸರು ಗಳಿಸಿರುವ ಸಂಪೂರ್ಣೇಷ್ ಇದಕ್ಕೆ ಒಂದು ಉತ್ತಮ ಉದಾಹರಣೆ. ನೋಡಲು ಹಾಸ್ಯ ನಟನಂತೆ ಕಾಣುತ್ತಿದ್ದರೂ ,ಆತನೊಬ್ಬ ಹೀರೋ. ಆತನಿಗೆ ಅಸಂಖ್ಯಾತ ಬೆಂಬಲಿಗರು ಸಹ ಇದ್ದಾರೆ.

ಅದೇ ರೀತಿ ಹಾಸ್ಯ ನಟರಾಗಿ ಚಿತ್ರರಂಗ ಪ್ರವೇಶಿಸಿ ನಂತರದ ದಿನಗಳಲ್ಲಿ ಹೀರೋ ಆದವರು ಬಹಳಷ್ಟಿದ್ದಾರೆ. ಈಗ ನಾವು ಹೇಳಲು ಹೊರಟಿರುವುದು ಅಂತಹ ನಟನ ಬಗ್ಗೆಯೇ. ಈತನನ್ನು ನೋಡಿದರೆ ರಾತ್ರಿ ಕನಸಿನಲ್ಲಿ ಬರುವಂತಹ ರೂಪವಿದ್ದರೂ , ಈತನ ಬಗ್ಗೆ ಹುಡುಗಿಯರು ಹುಚ್ಚರಾಗಿದ್ದಾರೆ. ಈತ ಯಾರು? ಈತನ ಚರಿತ್ರೆಯೇನು ? ಎಂಬುವುದನ್ನು ತಿಳಿಯೋಣ ಬನ್ನಿ….

ಪ್ರಾರಂಭದಲ್ಲಿ ಬಟಾಣಿಗಳನ್ನು ಮಾರಿ, ಬಂದ ಹಣದಿಂದ ಜೀವನ ಸಾಗಿಸುತ್ತಿದ್ದ , ನೋಡಲು ಕುರೂಪಿ ಯಾಗಿದ್ದ ಒಬ್ಬ ಯುವಕ ಇಂದು ಬಾಂಗ್ಲಾ ದೇಶದ ಚಿತ್ರ ರಂಗದಲ್ಲಿ ದಾಖಲೆ ಮೊತ್ತದ ಸಂಭಾವನೆ ಪಡೆಯುತ್ತಿರುವ, ಚಿತ್ರ ರಂಗ ಪ್ರವೇಶಿಸಿದ ಕೆಲವು ವರ್ಷಗಳಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ನಮ್ಮ ಕಥಾನಾಯಕನೇ…’ಅಲೋಮ್ ಗೋಗ್ರಾ’.


‘ಅಲೋಮ್ಗೋಗ್ರಾ’ ನ ಮೂಲ ಹೆಸರು ‘ಅಶ್ರಫುಲ್ ಅಲೋಮ್ ಸಯೀದ್’ ಮೂಲತ: ಬಾಂಗ್ಲಾ ದೇಶದವನು. ಕಡು ಬಡತನದ ಕುಟುಂಬದಿಂದ ಬಂದ ಈತ ತಾನು ಒಬ್ಬ ಹೀರೋ ಆಗುತ್ತೇನೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಬಟಾಣಿಗಳನ್ನು ಮಾರುತ್ತಿದ್ದ ಈತ ನಂತರದ ದಿನಗಳಲ್ಲಿ ಸಿಡಿ ವ್ಯಾಪಾರ ಮಾಡತೊಡಗಿದ. ಜೀವನ ನಡೆಸಲು ಸಂಪಾದನೆ ಸಾಲದಾದಾಗ, ಸ್ಯಾಟಲೈಟ್ ಟಿವಿ ಕನೆಕ್ಷನ್ ಗುತ್ತಿಗೆ ಪಡೆದ. ಸಂಗೀತ ವೆಂದರೆ ಈತನಿಗೆ ಬಹಳ ಇಷ್ಟ 2008 ರಲ್ಲಿ ಒಂದು ಆಲ್ಬಂ ಪ್ರೊಡ್ಯೂಸ್ ಮಾಡಿದ. ಈ ಸಿಡಿ ಅತೀ ಕಡಿಮೆ ಸಮಯದಲ್ಲಿ ವೈರಲ್ ಆಗಿ ಒಳ್ಳಯ ಹೆಸರನ್ನು ತಂದುಕೊಟ್ಟಿತು . ಈತನಿಗೆ ಸಿನಿಮಾದಲ್ಲಿ ನಟಿಸಲು ಆಹ್ವಾನ ಬಂದರೂ , ಈತನ ರೂಪವನ್ನು ಹೀಯಾಳಿಸಿ ಯಾವ ನಟೀಮಣಿಯೂ ಈತನೊಂದಿಗೆ ನಟಿಸಲು ಒಪ್ಪಲಿಲ್ಲ.

ತನ್ನದೇ ನಿರ್ಮಾಣದಲ್ಲಿ ‘ಪ್ರೈವೇಟ್ ಸಾಂಗ್ಸ್’ ಆಲ್ಬಮ್ ಒಂದನ್ನು ತಯಾರಿಸಿ ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ. ಈ ಹಾಡುಗಳನ್ನು ನೋಡಿದ ಯುವ ಜನಾಂಗ ಹುಚ್ಚೆದ್ದು ಕುಣಿಯಲಾರಂಭಿಸಿತು. ರಾತ್ರೋ ರಾತ್ರಿ ಸಹಸ್ರಾರು ಮಂದಿ ಹುಡುಗಿಯರು ಈತನ ಅಭಿಮಾನಿಗಳಾದರು. ಹಣ ಮತ್ತು ಹೆಸರು ಇದ್ದರೇನೇ ಯಾರಾದರೂ ನಮ್ಮ ಬಳಿ ಸುಳಿಯುತ್ತಾರೆ. ಸಮಾಜದಲ್ಲಿ ಒಳ್ಳೆಯ ಸ್ಥಾನ ಸಿಗುತ್ತದೆ ಹಾಗೂ ಎಲ್ಲರೂ ಮೆಚ್ಚುತ್ತಾರಲ್ಲವೇ? ಅದೇ ರೀತಿ ಅಲೋಮ್ ಗೆ ಹಣ, ಹೆಸರು ಬಂದ ನಂತರ ಆತನೊಂದಿಗೆ ನಟಿಸಲು  ನಟೀಮಣಿಗಳು ನಾ ಮುಂದು, ತಾಮುಂದು ಎಂದು ಬರಲಾರಂಭಿಸಿದರು. ಪ್ರಸ್ತುತ ಈತ 500 ಹಾಡುಗಳನ್ನು ನಿರ್ಮಿಸಿದ್ದು, ಭಾರತದಲ್ಲಿ ಶಾರೂಕ್ ಖಾನ್ ಪದೆಡ ಬಿರುದು’KING OF ROMANCE  ‘ ನ್ನು ಬಾಂಗ್ಲಾ ದೇಶದಲ್ಲಿ ಅಲೂಮ್ ಗೋಗ್ರಾ ಪಡೆದಿದ್ದಾನೆ. ಈತನ ವಾರ್ಷಿಕ ಸಂಪಾದನೆ 9 ಕೋಟಿಗಳಿಗೆ ತಲುಪಿದೆ . ಸಿನಿಮಾ ಗಳಲ್ಲಿ ನಟಿಸಲು ಪ್ರತಿಭೆ ಮುಖ್ಯವೆಂದು ಆಲೋಮ್ ಗೋಗ್ರಾ ನಿರೂಪಿಸಿದ್ದಾರೆ. ಪ್ರತಿಭೆ ಒಂದಿದ್ದರೆ ಸಾಕು ಹಣ , ಜನ ನಮ್ಮ ಹಿಂದೆ ಬರುತ್ತಾರೆ .

 


Click Here To Download Kannada AP2TG App From PlayStore!