ಆಕೆ ಗುಡಿಗೆ ಹೋದಳು… ಅಲ್ಲಿ ” ಕಸದ ಬುಟ್ಟಿ” ಯನ್ನು ನೋಡಿ ದೇವರೆಂದು ಪೂಜಿಸಿದಳು…! ಕೊನೆಗೆ ಏನಾಯಿತು?

ತಾಂತ್ರಿಕವಾಗಿ ಭಾರತ ಮುಂಚೂಣಿಯಲ್ಲಿದೆಯೆಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ಆದರೆ, ವಾಸ್ತವ ಬೇರೆಯಾಗಿಯೇ ಇದೆ. ಮೂಢನಂಬಿಕೆಗಳು ನಮ್ಮನ್ನು ಇನ್ನೂ ಪೀಡಿಸುತ್ತಿವೆ. ಈಗ ನಾವು ಹೇಳಲು ಹೊರಟಿರುವುದು ಇದಕ್ಕೆ ಸಂಬಂಧಿಸಿದ ವಿಷಯವೇ. ಇದನ್ನು ಮೂಢನಂಬಿಕೆಯೆಂದು ಕರೆಯಬೇಕೊ ಅಥವಾ ತಿಳುವಳಿಕೆಯ ಕೊರತೆ ಎನ್ನಬೇಕೋ ನೀವೇ ಹೇಳಬೇಕು. ಯಾಕೆಂದರೆ, ದೇವರ ವಿಗ್ರಹಕ್ಕೂ ,ಬೊಂಬೆಗೂ ವ್ಯತ್ಯಾಸ ತಿಳಿಯದ ಮಹಿಳೆಯೊಬ್ಬಳು, ಪ್ರಾಣಿರೂಪದ ಬೊಂಬೆಗೆ ಪೂಜೆ ಮಾಡಿದ್ದಾಳೆ. ಆ ಸಮಯದಲ್ಲಿ ತೆಗೆದ ವೀಡಿಯೊ ವೈರಲ್ ಆಗಿದೆ.

ಬಿಹಾರದ ಒಂದು ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಒಂದು ಡಸ್ಟ್ ಬಿನ್ ಇರಿಸಿದರು. ಅದು ಕಾಂಗರೂ ಬೊಂಬೆಯ ರೂಪದ ಡಸ್ಟ್ ಬಿನ್ ಆಗಿತ್ತು. ಆದರೆ. ಅದು ಕಸ ಹಾಕಲು ಇರಿಸಿದ ಡಸ್ಟ್ ಬಿನ್ ಎಂದು ತಿಳಿಯದ ಕೆಲವು ಮಹಿಳೆಯರು ದೇವರೆಂದು ಭಾವಿಸಿದರು. ಒಡನೆಯೇ ಪೂಜೆ ಮಾಡಲು ಪ್ರಾರಂಭಿಸಿದರು. ಹೀಗೆ ಕೆಲವು ಮಹಿಳೆಯರು ಆ ಕಾಂಗರೂ ಬೊಂಬೆ (ಡಸ್ಟ್ ಬಿನ್) ಗೆ ಪೂಜೆ ಮಾಡಿದರು. ಇದನ್ನು ನೋಡಿದವರು ಯಾರೋ ಇದನ್ನು ಚಿತ್ರಿಕರಿಸಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ವೀಡಿಯೊ ಈಗ ವೈರಲ್ ಆಗಿದೆ. ಇದನ್ನು ನೋಡಿದ ನೆಟಿಜೆನ್ ಗಳು ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಮಾಯಕ ಮಹಿಳೆಯರು ದೇವರಿಗೂ, ಪ್ರಾಣಿಗೂ ವ್ಯತ್ಯಾಸ ತಿಳಿಯದೆ ಪೂಜೆ ಮಾಡುತ್ತಿದ್ದಾರೆೆ ಎಂದು ಕೆಲವರೆಂದರೆ… ಇಂತಹ ಮೂಢನಂಬಿಕೆಯ ಭಕ್ತರು ಇರುವುದರಿಂದಲೇ ರಾಜಕೀಯ ನಾಯಕರು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ಏನೇ ಆಗಲಿ ಇಂತಹ ಮುಗ್ಧ ಭಕ್ತರು ಇದ್ದಾರೆಂದರೆ…ಅಚ್ಚರಿಯಾಗುತ್ತದೆ.

WATCH VIDEO HERE :

 


Click Here To Download Kannada AP2TG App From PlayStore!