ಶಾಕಿಂಗ್! ಹತ್ತು ಪುಟಗಳ ಸೂಸೈಡ್ ನೋಟ್! 7 ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಪತಿಯೂ ನೇಣಿಗೆ ಶರಣಾಗಲು ಕಾರಣವಾದರೂ ಏನು?

 7ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಪತಿಯೂ ಸಹ ನೇಣಿಗೆ ಶರಣಾದ.ಆತ್ಮಹತ್ಯೆಯ ಮುನ್ನ 10  ಪುಟಗಳ ಸೂಸೈಡ್ ನೋಟ್ ನೋಡಿದ ತಾಯಿಗೆ ದಿಕ್ಕೇ ತೋಚದಂತಾಗಿದೆ. ಘಟನೆ ಪಂಜಾಬ್ ಪ್ರಾಂತದ ಲುಧಿಯಾನಾ ಜಿಲ್ಲೆಯ ಡಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ರವಿವಾರ ಮುಂಜಾನೆ 6 ಗಂಟೆಯ ಸುಮಾರಿಗೆ ತಾಯಿ ಮನೆಯಲ್ಲಿ ಕಸ ಗುಡಿಸುವಾಗ ಇಬ್ಬರ ಶವಗಳು ನೇತಾಡುವದು ಕಣ್ಣಿಗೆ ಬಿದ್ದಿದೆ.ಸ್ಥಳದಿಂದ ಮೃತರ ಹತ್ತು ಪುಟಗಳ ಸುಸೈಡ್  ನೋಟ್ ಪೊಲೀಸರಿಗೆ ದೊರೆತಿದೆ.ನೋಟ್ ಪ್ರಕಾರ ಮೃತನ ಸಹೋದರಿಗೆ ಅರೆಸ್ಟ್ ಮಾಡಲಾಗಿದೆ.

  • ವರದಿ ವಿವರ.

 ಮೃತರು ಗುರುದೀಪ್ ಸಿಂಗ್ ಹಾಗೂ ಅವನ ಪತ್ನಿ ಹರ್ಮಿತ ಕೌರ್ ಎಂದು ಗುರುತಿಸಲಾಗಿದೆ.ಇವರಿಬ್ಬರ ಮದುವೆ 19 ಜ.2017 ರಲ್ಲಿ ನಡೆದಿತ್ತು.ಗುರುದೀಪ್ ಸಿಂಗ್ ಟ್ರಕ್ ಡ್ರೈವರ್ ನಾಗಿ ಕೆಲಸ ಮಾಡುತ್ತಿದ್ದ.ಇನ್ನೊಬ್ಬ ಸಹೋದರ ವಿದೇಶದಲ್ಲಿದ್ದಾನೆ.ಇಬ್ಬರು ಸಹೋದರಿಯರ ಮದುವೆಯೂ ಮೊದಲೇ ಆಗಿತ್ತು.ಅದರಲ್ಲಿ ಒಬ್ಬಳು ಮಂದೀಪ್ ಹೆಸರಿನ ಸಹೋದರಿಯ ವಿಚ್ಚೇದನವಾಗಿ ತನ್ನ 8 ವರುಷದ ಮಗನ ಜೊತೆಗೆ ತವರುಮನೆಯಲ್ಲಿಯೇ ಇರುವದಕ್ಕಾಗಿ ಬಂದಿದ್ದಳು.ಆದರೆ ಇಲ್ಲಿ ಅವಳ ಅನೈತಿಕ ಸಂಬಂಧ ರಾಜಕೋಟನ ಒಬ್ಬ ಯುವಕನ ಜೊತೆಗೆ ನಡೆದಿತ್ತು.ಸಹೋದರಿಯ ಅನೈತಿಕ ಸಂಬಂಧ ಹಾಗೂ ಆ ಯುವಕನು ಯಾವಾಗಲೂ ಮನೆಗೆ ಬರುವದು ಇಂಥ ಕಾರಣಗಳಿಂದ ರೋಸಿ ಹೋಗಿ ದಂಪತಿಗಳಿಬ್ಬರು ಒಂದೇ ಹುಕ್ಕಿಗೆ ಹಾಗೂ ಒಂದೇ ಹಗ್ಗಿನಿಂದ ನೇಣು ಬಿಗಿದುಕೊಂಡು ಅಸುನೀಗಿದ್ದಾರೆ.

ತಮ್ಮ 10 ಪುಟಗಳ ಸುಸೈಡ್ ನೋಟ್ ನಲ್ಲಿಯೂ ಸಹ ಇದೆ ವಿಷಯವಾಗಿ ತಾವು ಹತ್ಯೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.ಅಷ್ಟೇ ಅಲ್ಲ ಈ ಸಂಬಂಧವಾಗಿ ಸಹೋದರಿಯ ಜೊತೆ ಎಷ್ಟೇ ಮಾತನಾಡಿದರೂ ಪ್ರಯೋಜನವಾಗಲಿಲ್ಲ.ಇಂಥ ತಂಗಿಯ ಕುಕೃತ್ಯದಿಂದ ಊರಲ್ಲಿ ನನಗೆ ಮುಖವೆತ್ತಿ ತಿರುಗಾಡುವಂತೆ ಅನಿಸುತ್ತಿರಲ್ಲಿಲ್ಲ.ಮತ್ತು ಇದು ನನ್ನ ಹೆಂಡತಿ, ನೆರೆಯವರಿಗೆ ಸರಿ ಬರದ ಕಾರಣ ಎಷ್ಟೋ ಸಲ ಮನೆಯಲ್ಲಿ ಜಗಳ ಸಹವಾಗುತ್ತಿತ್ತು.ಸಮಾಜದಲ್ಲಿ ಇನ್ನಷ್ಟು ಅವಮಾನ ಸಹಿಸಲು ನನ್ನ ಮನಸ್ಸು ಒಪ್ಪಲಿಲ್ಲ.ಆದರಿಂದ ಈ ಕೊನೆಯ ಹೆಜ್ಜೆಯನ್ನಿಟ್ಟೆ.


Click Here To Download Kannada AP2TG App From PlayStore!