ಹೃದಯಾಘಾತದಿಂದ ಮೋಹಕ ತಾರೆ ಶ್ರೀದೇವಿ ನಿಧನ

ಭಾರತೀಯ ಚಿತ್ರರಂಗದ ಖ್ಯಾತ ತಾರೆ ಶ್ರೀದೇವಿ ನಿಧನರಾಗಿದ್ದಾರೆ. ದುಬೈನಲ್ಲಿನ ತನ್ನ ಸೋದರಳಿಯನ ವಿವಾಹ ಕಾರ್ಯಕ್ರಮಕ್ಕೆ ಅವರು ಹಾಜರಾಗಿದ್ದರು. ಶನಿವಾರ ಮಧ್ಯರಾತ್ರಿ ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರ ನಿಧನ ಸುದ್ದಿ ಕೇಳಿದ ಸಿನಿ ಜಗತ್ತು ಒಮ್ಮೆಲೆ ಆಘಾತಕ್ಕೊಳಗಾಗಿದೆ.

ಆಗಸ್ಟ್ 13ರಂದು 1963ರಲ್ಲಿ ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿ 1967ರಲಿ ಕನ್ದನ್ ಕರುಣಾಯ್ (1967) ಸಿನಿಮಾದ ಮೂಲಕ ಬಾಲನಟಿಯಾಗಿ ಸಿನಿರಂಗಕ್ಕೆ ಅಡಿಯಿಟ್ಟರು. ಆ ರೀತಿ ವೃತ್ತಿ ಬದುಕು ಆರಂಭಿಸಿದ ಅವರು ಅನತಿಕಾಲದಲ್ಲೇ ತೆಲುಗು, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

watch video  :

ಶ್ರೀದೇವಿ ಪಾರ್ಥಿವ ಶರೀರವನ್ನು ಸದ್ಯದಲ್ಲಿಯೇ ಭಾರತಕ್ಕೆ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಹೀರೋಗಳ ಪ್ರಭಾವ ಹೊಂದಿದ್ದ ಭಾರತೀಯ ಚಿತ್ರರಂಗವನ್ನು ಶ್ರೀದೇವಿ ತಮ್ಮ ಮೋಹನ ನೋಟ, ಅತ್ಯದ್ಭುತ ನಟನೆ, ನೃತ್ಯದಿಂದ ಹಿಡಿತದಲ್ಲಿ ತೆಗೆದುಕೊಂಡು ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದ್ದರು. ಶ್ರೀದೇವಿಯ ಮೋಹಕ ನಗೆಗೆ ಮನ ಸೋಲದವರೇ ಇಲ್ಲ.

ಐದು ವರ್ಷವಿದ್ದಾಗಲೇ ಚಿತ್ರರಂಗಕ್ಕೆ ಧುಮುಕಿದ್ದ ಶ್ರೀದೇವಿ ಹಲವಾರು ದಶಕಗಳ ಸೂಪರ್‌ ಸ್ಟಾರ್‌ ಆಗಿ ಮೆರೆದಿದ್ದರು. ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದ ಶ್ರೀದೇವಿ ನಿಧನಕ್ಕೆ ಬಾಲಿವುಡ್‌ ಅಲ್ಲದೇ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.


Click Here To Download Kannada AP2TG App From PlayStore!