ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ.!

ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್ ಅಂದರೆ ಮುಖ ಮನಸ್ಸಿನ ಸೂಚಕ.ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ತಿಳಿದುಕೊಳ್ಳಬಹುದಂತೆ.ಅದೇ ರೀತಿ ನೀವು ಮಾಡುವ ಸಹಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ಹೇಳಬಹುದಂತೆ.ಅದೇ ಗ್ರಾಫಾಲಜಿ.ನಿಮ್ಮ ಸಹಿಯ ಶೈಲಿಯಿಂದ ನಿಮ್ಮ ಮನಸ್ತತ್ವ,ನೀವು ಮಾಡುವ ಕೆಲಸಗಳು,ನಿಮ್ಮ ಮನೋವೃತ್ತಿ ಹೇಗಿರುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಂತೆ.ಇದರ ಕುರಿತಾಗಿ ಎಲ್ಲರಿಗೂ ಅಲ್ಪ ಸ್ವಲ್ಪ ತಿಳಿದೇಯಿರುತ್ತದೆ.ಆದರೆ,ನಾವು ಸಾಮಾನ್ಯವಾಗಿ ಹಲವು ರೀತಿಯಾಗಿ ಸಹಿ ಮಾಡುತ್ತಿರುತ್ತೇವೆ. ಅವುಗಳನ್ನೇ ಆಧಾರವನ್ನಾಗಿರಿಸಿಕೊಂಡು ನಮ್ಮ ವ್ಯಕ್ತಿತ್ವ ಹೇಗಿರುತ್ತದೆಂದು ಪರಿಶೀಲಿಸೋಣ.

ಸಹಿ ಮಾಡಿ ಕೆಳಗೆ ಗೆರೆ ಎಳೆಯುವವರು :ಇಂತಹವರಿಗೆ ವಿಶ್ವಾಸ ಹೆಚ್ಚಾಗಿರುತ್ತದೆ.ಆದರೂ ಸಹ ಇವರು ಕೆಲವು ವಿಷಯಗಳನ್ನು ಕುರುಡಾಗಿ ನಂಬುತ್ತಿರುತ್ತಾರೆ.ನನಗೆ ತಿಳಿದಿರುವುದೇ ಸರಿ ಎನ್ನುವ ವಿಧದವರು.ಮನುಷ್ಯರನ್ನು ಅಷ್ಟು ಬೇಗನೆ ನಂಬಲಾರರು.ನಂಬಿದರೆ ಮಾತ್ರ ಪ್ರಾಣ ಕೊಡಲೂ ತಯಾರಿರುತ್ತಾರೆ.

1

ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ : ಸಮಾಜದಲ್ಲಿ ಗೌರವ,ಮರ್ಯಾದೆಗಳನ್ನು ಗಳಿಸುತ್ತಾರೆ.ಶೇಕಡಾವರು ವಿಶ್ವಾಸ ಅಧಿಕವಿರುತ್ತದೆ.ಎಲ್ಲ ವಿಷಯಗಳಿಗೂ ಮುಂದಿರುತ್ತಾರೆ.ದೈರ್ಯವಂತರು.
desire for attention

ಸಹಿ ಕೆಳಮುಖವಾಗಿದ್ದರೆ : ಸ್ವಾರ್ಥ ಹೆಚ್ಚಾಗಿರುತ್ತದಂತೆ.
auto_simpson

ಸಹಿ ಮೇಲ್ಮುಖವಾಗಿದ್ದರೆ : ನಿಮಗೆ ತೀಕ್ಷ್ಣ ಬುದ್ಧಿಯಿರುತ್ತದೆ.ಧನಾತಕ ವ್ಯಕ್ತಿತ್ವ, ಯಾವುದೆ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುತ್ತಿರ. ಅಭಿವೃದ್ಧಿ ಪಥದಕಡೆ ನಿಮ್ಮ ಪಯಣ.
Sardar_Mohammed_Ibrahim_Khan_Signature

ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ :ಹೆಚ್ಚಾಗಿ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತೀರಿ(ಮಹಾತ್ಮ ಗಾಂಧಿ ಸಹಿಯಲ್ಲಿ ಮೊದಲ ಅಕ್ಷರದ ಗಾತ್ರ ದೊಡ್ಡದಾಗಿತ್ತು)

ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ : ಎಂದೆಂದಿಗೂ ನಿಮಗೆ ಜಯ ಲಭಿಸುತ್ತದೆ.
art

ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ ; ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತೀರಿ.ವರ್ತಮಾನದ ಬಗ್ಗೆ ಗಮನ ಹರಿಸುವುದಿಲ್ಲ.
tracebacksignature-300x124

ಸಹಿಯಲ್ಲಿ ಚುಕ್ಕೆಗಳಿದ್ದರೆ :ನಾನು ಯಾವಾಗಲೂ ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರು.

ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ : ಆರಂಭ ಶೂರತ್ವ ಹೆಚ್ಚಾಗಿರುತ್ತದೆ.ಒಳ್ಳೆಯ ಐಡಿಯಾ ಗಳಿರುತ್ತವೆ.ಆದರೆ,ಆಚರಣೆಗೆ ತರುವುದರಲ್ಲಿ ಮಾತ್ರ ವಿಫಲರಾಗುತ್ತೀರ.
VishyAnand_Signature_CarlsenAnand


Click Here To Download Kannada AP2TG App From PlayStore!

Share this post

scroll to top