ಆ ಹುತಾತ್ಮ ಯೋಧ ಸಾವಿಗೂ ಮೊದಲೇ ತನ್ನ ಫೇಸ್‌ಬುಕ್‍ನಲ್ಲಿ ಬರೆದ ವಾಕ್ಯಗಳು. ಈಗ ಎಲ್ಲರ ಕಣ್ಣ ಒದ್ದೆಯಾಗಿಸುತ್ತಿವೆ!!

“ನೀನು ಎಂದಾದರೂ ಊಹಿಸಿದ್ದಾ? ಸಾವು ಬಿಗಿದಪ್ಪಿದ ಸಮಯ…ನಿನ್ನವರು ನಿನಗಾಗಿ ಮಾಡುತ್ತಿರುವ ರೋದನೆ…ಅಂತ್ಯಕ್ರಿಯೆಗೆ ದೇಹವನ್ನು ಸಿದ್ಧಗೊಳಿಸುತ್ತಿರುವ ಕ್ಷಣಗಳು…ಸಮಾಧಿಯಲ್ಲಿ ಇರಿಸುತ್ತಿರುವ ಕ್ಷಣಗಳು…. ಆ ಬಳಿಕ ಆ ಮೊದಲ ರಾತ್ರಿ ಅಂಧಕಾರದೊಳಕ್ಕೆ, ಒಂಟಿಯಾಗಿ ಸಮಾಧಿಯಲ್ಲಿದ್ದರೆ ಹೇಗಿರುತ್ತದೋ..”

-ಮನುಷ್ಯ ಸಾವಿನ ಮಾತನಾಡಬೇಕೆಂದರೆ ಭಯಪಡುತ್ತಾನೆ. ಆದರೆ ಅದನ್ನು ಮೊದಲೇ ಊಹಿಸಿದ್ದರೋ ಏನೋ! ಆ ಪೊಲೀಸ್ ಅಮರವೀರನು ಮಾತ್ರ ಮೂರು ವರ್ಷಗಲ ಹಿಂದೆಯೇ ಈ ರೀತಿ ಕಾವ್ಯದ ಮೂಲಕ ವರ್ಣಿಸಿದ್ದ. ದಕ್ಷಿಣ ಕಾಶ್ಮೀರದ ಅಚಾಬಲ್ ಉಗ್ರದಾಳಿಯಲ್ಲಿ ಶುಕ್ರವಾರವಷ್ಟೇ ಪ್ರಾಣ ಕಳೆದುಕೊಂಡ ಪೊಲೀಸ್ ಅಧ್ದಿಕಾರಿ ಫಿರೋಜ್ ಅಹ್ಮದ್ (32) 2013ರಲ್ಲಿ ಫೇಸ್‍ಬುಕ್‌ನಲ್ಲಿ ಬರೆದುಕೊಂಡ ವಾಕ್ಯಗಳಿವು. ಇದೀಗ ಎಲ್ಲರ ಕಣ್ಣನ್ನೂ ಮಂಜಾಗಿಸುತ್ತಿವೆ.

ಲಷ್ಕರ್-ಇ-ತೋಯ್ಬಾ ಉಗ್ರರ ಆಕಸ್ಮಿಕ ದಾಳಿಯಲ್ಲಿ ಎಸ್‌ಐ ಫಿರೋಜ್ ಸೇರಿದಂತೆ ಆರು ಮಂದಿ ಪೊಲೀಸರು ಹುತಾತ್ಮರಾದರು. ಪುಲ್ವಾಮಾ ಜಿಲ್ಲೆಯ ಡೋಗ್ರಿಪೋರಾಲ್‌ನಲ್ಲಿ ಶುಕ್ರವಾರ ರಾತ್ರಿ ಫಿರೋಜ್ ಅಂತ್ಯಕ್ರಿಯೆಗಳು ನೆರವೇರಿದವು. ಆತನ ಪತ್ನಿ…ಆರು, ಏಳು ವರ್ಷಗಳ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಇವರ ಜತೆಗೆ ಅವರ ತಂದೆತಾಯಿ, ಸ್ನೇಹಿತರು ಹೃದಯ ಹೊಡೆಯುವಂತೆ ರೋದಿಸುತ್ತಿದ್ದಾರೆ. ಆ ಗ್ರಾಮದವರೆಲ್ಲಾ ಕಣ್ಣೀರಿನೊಂದಿಗೆ ಫಿರೋಜ್‍ರನ್ನು ಬೀಳ್ಕೊಟ್ಟರು.

ಆತ ಬರೆದುಕೊಂಡಿದ್ದ ಆ “ಒಂಟಿ ರಾತ್ರಿ” ಬಗ್ಗೆ ನೆನಪಿಸಿಕೊಂಡು ಎಲ್ಲರೂ ಕಣ್ಣೀರಾಗುತ್ತಿದ್ದಾರೆ. “ಎಲ್ಲರನ್ನೂ ಪ್ರೀತಿಸಿ, ಗೌರವಿಸಿದ ನೀನು ನಮ್ಮ ಹೃದಯದಲ್ಲಿ ಚಿರಸ್ಥಾಯಿಯಾಗಿ ನಿಲ್ಲುತ್ತೀಯ…ಉಗ್ರರ ಅಮಾನುಷ್ಯ ಕೃತ್ಯಕ್ಕೆ ಶಿಕ್ಷೆ ತಪ್ಪಿದ್ದಲ್ಲ…ಪ್ರಾಣ ಕಳೆದುಕೊಂಡವರಿಗೆಲ್ಲಾ ಭಾವಪೂರ್ಣ ಶ್ರದ್ಧಾಂಜಲಿ” ಎಂದು ದಕ್ಷಿಣ ಕಾಶ್ಮೀರ್ ಡಿಐಜಿ ಸ್ವಯಂಪ್ರಕಾಶ್ ಪಾಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಫಿರೋಜ್ ಎಷ್ಟೆಲ್ಲಾ ಶಾಂತಿಪ್ರಿಯ ಎನ್ನುವುದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ವಾಕ್ಯಗಳೇ ಇದಕ್ಕೆ ನಿದರ್ಶನ. ಅಂತಹ ಯೋಧನಿಗೊಂದು ಸಲಾಂ.