ವಿದೇಶಿಯರು ರಾತ್ರಿವೇಳೆ ಅಂಡರ್ ವೇರ್ ಹಾಕಿಕೊಳ್ಳದೆ ನಿದ್ರಿಸುತ್ತಾರೆ….! ಏಕೆಂದು ಗೊತ್ತೆ?

ಈಗ ನಾವು ಹೇಳಹೊರಟಿರುವುದು ನಿಮಗೆ ಸ್ವಲ್ಪ ಇರಿಸು ಮುರಿಸು ಉಂಟುಮಾಡುವಂತಹ ವಿಷಯ. ಆದರೂ ಇದನ್ನು ಹೇಳಲೇಬೇಕು. ಯಾಕೆಂದರೆ,ನಮಗೆ ಆರೋಗ್ಯಕರ ಪ್ರಯೋಜನಗಳು ಇದರಲ್ಲಿ ಅಡಗಿವೆ. ಅಂಡರ್ ವೇರ್ ಕುರಿತಾಗಿ ಹೇಳಲಿದ್ದೇವೆ.’ ‘ಬಿಗುವಾಗಿ ಅಂಡರ್ ವೇರ್ ಧರಿಸುವುದರಿಂದ ನಿಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ…!’ಎಂದು ಇದಕ್ಕೂ ಮೊದಲೇ ಒಂದು ಬರಹವನ್ನು ಬರೆದಿದ್ದೆವು ಅದಕ್ಕೆ ಸಂಬಂಧಿಸಿದ ಮತ್ತೊಂದು ವಿಷಯವನ್ನು ಕುರಿತದ್ದಾಗಿದೆ. ರಾತ್ರಿ ವೇಳೆ ಅಂಡರ್ ವೇರ್ ಹಾಕಿಕೊಳ್ಳದೆ ಮಲಗುವುದರಿಂದ ಆಗುವ ಲಾಭಗಳು ಬಹಳಷ್ಟಿವೆ. ಹೀಗೆ ಮಲಗುವುದೂ ಒಳ್ಳೆಯದಂತೆ. ವಿದೇಶಿಯರು ಈ ರೀತಿ ಮಲಗುತ್ತಾರಂತೆ. ಈ ನಿಟ್ಟಿನಲ್ಲಿ ಅಂಡರ್ ವೇರ್ ಹಾಕಿಕೊಳ್ಳದೆ ಮಲಗುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

1.ಅಂಡರ್ ವೇರ್ ಹಾಕಿಕೊಳ್ಳದೆ ಮಲಗುವುದರಿಂದ ಇಡೀ ಶರೀರಕ್ಕೆ ಗಾಳಿ ಸೋಕುತ್ತದೆ. ಇದರಿಂದಾಗಿ ದೇಹ ಸಹಜ ಉಷ್ಣತೆಗೆ ಸೇರುತ್ತದೆ ಹಾಗು ಶರೀರದ ಕ್ರಿಯೆಗಳು ಸುಗಮವಾಗಿ ನಡೆಯುತ್ತವೆ.
2.ಶರೀರದಲ್ಲಿರುವ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡುತ್ತವೆ.ವೃದ್ಧಾಪ್ಯದ ಲಕ್ಷಣಗಳು ಹತ್ತಿರಕ್ಕೆ ಬರುವುದಿಲ್ಲ. ಇದರಿಂದಾಗಿ ಯಾವಾಗಲೂ ಯುವಕರಂತೆ ಕಾಣುತ್ತೀರ. ಹೀಗೆ ನಿದ್ರಿಸುವುದರಿಂದ ಶರೀರಕ್ಕೆ ವಿಶ್ರಾಂತಿ ದೊರೆಯುತ್ತದೆ.
3. ಜನನಾಂಗಗಳು ತಮ್ಮ ಕೆಲಸಗಳನ್ನು ಸಕ್ರಮವಾಗಿ ನಿರ್ವಹಿಸುತ್ತವೆ. ಮುಖ್ಯವಾಗಿ ಮಹಿಳೆಯರಿಗೆ ಈಸ್ಟ್,ಫಂಗಸ್ ಸೊಂಕುಗಳು ಬರುವುದಿಲ್ಲವಂತೆ. ಪುರುಷರ ಲೈಂಗಿಕ ಸಾಮರ್ಥ್ಯ ಹಾಗೂ ವೀರ್ಯಕಣಗಳ ಸಂಖ್ಯೆ ವೃದ್ಧಿಸುತ್ತದೆ.ವೀರ್ಯ ಕಣಗಳು ಆರೋಗ್ಯವಾಗಿರುತ್ತವೆ.ಇದರಿಂದಾಗಿ ಸಂತಾನ ಸಾಫಲ್ಯತೆ ಹೆಚ್ಚುತ್ತದೆ.

4.ಅಂಡರ್ ವೇರ್ ಹಾಕಿಕೊಳ್ಳದೆ ಮಲಗುವುದರಿಂದ ಶರೀರವು ಸ್ವೇಚ್ಛೆಯಿಂದಿದ್ದು ಮನಸ್ಸು ಪ್ರಶಾಂತವಾಗಿರುತ್ತದೆ.ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ.

5. ಪೂರ್ತಿ ನಗ್ನವಾಗಿ ದಂಪತಿಗಳು ಮಲಗಿದಲ್ಲಿ,ಇಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಾಗಿ ಲೈಂಗಿಕ ಜೀವನ ಸಂತೃಪ್ತಿಕರವಾಗಿರುತ್ತದೆ.

6.ಶರೀರವು ಯಾವಾಗಲೂ ಉತ್ತೇಜಿತವಾಗಿರುತ್ತದೆ, ಉತ್ಸಾಹದಿಂದ ಕೂಡಿರುತ್ತದೆ. ನಿತ್ಯವೂ ಸಂತೋಷದಿಂದ ಇರಬಹುದಂತೆ. ಒತ್ತಡ ಹೆಚ್ಚಿಸುವ ಹಾರ್ಮೋನ್ ಗಳು ಮಾಯವಾಗಿ ಯಾವಾಗಲೂ ಸಂತೋಷ ಸ್ಥಿತಿಯಲ್ಲಿರುತ್ತಾರಂತೆ.


Click Here To Download Kannada AP2TG App From PlayStore!