ಸೊಳ್ಳೆಗಳನ್ನು ಓಡಿಸಲು ಇನ್ಮೇಲೆ ಆಲ್ಔಟ್ ಅನ್ನು ಕೊಂಡುಕೊಳ್ಳುವ ಅವಶ್ಯಕತೆಯಿಲ್ಲ…. ಹಳೇ ಆಲ್ಔಟ್ ರೀಫಿಲ್ ಇದ್ದರೆ ಸಾಕು..!

ಡೆಂಗ್ಯೂ, ಚಿಕನ್’ಗುನ್ಯಾ, ಮಲೇರಿಯಾಗಳಂತಹ ಅಪಾಯಕಾರಿಯಾದ ರೋಗಗಳಿಗೆ ಕಾರಣ ಈ ಸೊಳ್ಳೆಗಳು. ಇವುಗಳ ಕಾಟ ತಡೆಯಲಾರದೆ ತುಂಬಾ ಜನರು ರಾತ್ರಿ ವೇಳೆ ಜೆಟ್ ಕಾಯಿಲ್ಸ್’ಗಳನ್ನು ಹಚ್ಚುವುದೋ..?ಆಲ್ಔಟ್, ಗುಡ್ ನೈಟ್ ನಂತಹ ಮಸ್ಕಿಟೊ ರೀಫಿಲ್ ಗಳನ್ನು ಬಳಸುವುದೊ… ಮಾಡುತ್ತಿರುತ್ತಾರೆ. ಆದರೆ ತುಂಬಾ ಜನರಿಗೆ ಇದರ ಹೊಗೆ, ವಾಸನೆಯಿಂದ ಉಸಿರಾಡುವುದಕ್ಕೆ ಕಷ್ಟಕರವಾಗುವಂತಹ ಸಮಸ್ಯೆಗಳು ಕಂಡು ಬರುತ್ತವೆ. ಕೆಲವು ಜನರಿಗೆ ಪ್ರತಿಸರಿ ಅಷ್ಟೊಂದು ಹಣಕೊಟ್ಟು ಅವುಗಳನ್ನು ಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಆದರೆ ನೀವು ಇನ್ನು ಮುಂದೆ  All Out, Good Knight, Jet Coilsಗಳನ್ನು ಕೊಂಡುಕೊಳ್ಳದೆ… ನಿಮ್ಮ ಮನೆ ಮೂಲೆಗಳಲ್ಲಿ ಇರುವ ಸೊಳ್ಳೆಗಳನ್ನು ಹೊಡೆದೋಡಿಸಬಹುದು. ಇದಕ್ಕಾಗಿ ಆಲ್ ಔಟ್, ಗುಡ್ ನೈಟ್ ಗಳ ಹಳೇ ರೀಫಿಲ್ ಇದ್ದರೆ ಸಾಕು….!

ಸೊಳ್ಳೆಗಳ ನಿವಾರಕವನ್ನು ಹೇಗೆ ತಯಾರಿಸಿಕೊಳ್ಳಬೇಕು….?

Step-1: ಹಳೆಯ ಆಲ್ ಔಟ್, ಗುಡ್ ನೈಟ್ ಗಳ  ರೀಫಿಲ್ ತೆಗೆದು ಕೊಂಡು ಅವುಗಳ ಮುಚ್ಚಳಿಕೆ ತೆಗೆಯಬೇಕು

Step-2: ಹಾಗೆ  ಖಾಲಿಯಾಗಿರುವ ರೀಫಿಲ್’ನಲ್ಲಿ  ಮೂರು- ನಾಲ್ಕು ಪೂಜೆಗೆ ಉಪಯೋಗಿಸುವ ಕರ್ಪೂರದ ಗುಳಿಗೆಗಳನ್ನು ಹಾಕಿ, ಅವು ಮುಳುಗುವಂತೆ ಬೇವಿನ ಎಣ್ಣೆಯನ್ನು ಹಾಕುವುದು. [ಬೇವಿನ ಎಣ್ಣೆ ಎಲ್ಲ ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ]

Step-3: ರೀಫಿಲ್’ನಿಂದ ತೆಗೆದ ಮುಚ್ಚಳವನ್ನು  ಮತ್ತೆ ಮುಚ್ಚಬೇಕು.

Step-4 ಸಾಮಾನ್ಯ ರೀಫಿಲ್’ಗಳನ್ನು ಹೇಗೆ ಬಳಸುತ್ತೇವೋ ಹಾಗೆ ಇವುಗಳನ್ನು ಸಹ ಮಿಶನ್’ನಲ್ಲಿ ಫಿಕ್ಸ್ ಮಾಡಿ ಸ್ವಿಚ್ ಆನ್ ಮಾಡಿದರೆ  ಸಾಕು.

ನಾವು ಸ್ವಂತವಾಗಿ ತಯಾರಿಸಿಕೊಂಡಂತಹ ಸೊಳ್ಳೆಗಳ ನಿವಾರಕಗಳಿಂದ ಉಂಟಾಗುವ ಲಾಭಗಳು:

  • ೧೦೦%  ಪರಿಸರ ಸ್ನೇಹಿ. ಯಾವುದೇ ಕೆಮಿಕಲ್ಸ್ ಗಳನ್ನು ಸೇರಿಸಿಲ್ಲವಾದ್ದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
  • ಕರ್ಪೂರದ ವಾಸನೆಯಿಂದ ಉಸಿರಾಟ ಸಮಸ್ಯೆ ನಿವಾರಣೆಯಾಗುತ್ತದೆ.
  • ಬೇವಿನ ಎಣ್ಣೆಯ ವಾಸನೆಯಿಂದ ಶರೀರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
  • ಕೃತಕ ಸೊಳ್ಳೆ ನಿವಾರಕಗಳಿಂದ  ಉಸಿರಾಟಕ್ಕೆ ಸಂಬಂಧಿಸಿದ ರೋಗಗಳು ಬರುವ ಅವಕಾಶವಿರುತ್ತದೆ. ಆದರೆ ನಾವು ತಯಾರಿಸಿದ ನಿವಾರಕದಿಂದ ಎಂತಹ ಕಾಯಿಲೆಗಳು ಬರುವುದಿಲ್ಲ. ಅದರಲ್ಲೂ ಚಿಕ್ಕ ಮಕ್ಕಳು ಇರುವ ಮನೆಗಳಲ್ಲೂ ಬಳಸಬಹುದು.

Click Here To Download Kannada AP2TG App From PlayStore!

Share this post

scroll to top