ಪೊಲೀಸರನ್ನು ನೋಡಿದ ಕೂಡಲೆ ಎಟಿಎಂ‌ಗೆ ನುಗ್ಗಿದರು ಆ ಇಬ್ಬರು ಹುಡುಗಿಯರು.. ಯಾಕೆ ಗೊತ್ತಾ..?

ಡ್ರಂಕ್ ಅಂಡ್ ಡ್ರೈವ್ ಕೇಸಿನಲ್ಲಿ ಸಿಕ್ಕಿಬೀಳುತ್ತೇನೆ ಎಂದು ಗೊತ್ತಿದ್ದರೂ ಹೆಗೋ ಒಂದು ರೀತಿ ತಪ್ಪಿಸಿಕೊಳ್ಳಬಹುದು ಬಿಡು ಎಂಬಂತೆ ಲೈಟ್ ಆಗಿ ತೆಗೆದುಕೊಳ್ಳುತ್ತಾರೆ ಕೆಲವರು. ಆದರೆ ಕೊನೆಗೆ ಸಿಕ್ಕಿಬಿದ್ದು ದಂಡ ಕಟ್ಟುವುದೋ, ಕೋರ್ಟ್‌ಗೆ ಹಾಜರಾಗುವಂತಹ ಪರಿಸ್ಥಿತಿ ಬರುತ್ತದೆ. ಆದರೂ ಎದುರಾಗಿ ಪೊಲೀಸರಿದ್ದರೂ ಸಹ ಧೈರ್ಯವಾಗಿ ಅಷ್ಟು ಕೆಲಸ ಮಾಡಿದರು ನೋಡಿ.. ಅವರು ಕುಡಿದಿದ್ದಕ್ಕೆ ಬೈದರೂ ಪರ್ವಾಗಿಲ್ಲ… ಅಷ್ಟು ಕಿಕ್‌ನಲ್ಲೂ ತಪ್ಪಿಸಿಕೊಳ್ಳಬೇಕೆಂದು ಅವರ ಮೈಂಡ್ ಶಾರ್ಪ್ ಆಗಿ ಕೆಲಸ ಮಾಡಿತು ನೋಡಿ.. ಇಷ್ಟಕ್ಕೂ ಯಾರವರು… ಏನು ಮಾಡಿದರು ಎನ್ನುತ್ತೀರಾ… ಇನ್ನೇಕೆ ತಡ ಮುಂದೆ ಓದಿ…

ಹೈದರಾಬಾದಿನ ಜೂಬ್ಲಿ ಹಿಲ್ಸ್ ರಸ್ತೆ ನಂಬರ್ 45ರಲ್ಲಿ ಎಂದಿನಂತೆ ರಾತ್ರಿ ಸಮಯದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಅಷ್ಟರಲ್ಲಿ ಒಂದು ಐಶಾರಾಮಿ ಕಾರು ಆ ರಸ್ತೆಗೆ ಬಂತು. ಕಪ್ಪು ಟೀ ಶರ್ಟ್ ಧರಿಸಿದ ಓರ್ವ ಯುವತಿ ಫುಲ್ ಮದ್ಯಪಾನ ಮಾಡಿದ್ದು, ಸ್ವಲ್ಪ ಕಡಿಮೆ ಕುಡಿದ ತನ್ನ ಇನ್ನೊಬ್ಬ ಸ್ನೇಹಿತೆಯೊಂದಿಗೆ ಆ ಕಾರಿನಲ್ಲಿ ಬರುತ್ತಿದ್ದರು. ಜೂಬ್ಲಿ ಹಿಲ್ಸ್‌ನಲ್ಲಿ ಡ್ರಂಕನ್ ಡ್ರೈವ್ ತನಿಖೆ ನಡೆಸುತ್ತಿರುವ ಪೊಲೀಸರನ್ನು ದೂರದಿಂದಲೇ ಗಮನಿಸಿದರು ಇಬ್ಬರೂ, ಕೂಡಲೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿ, ಕೆಳಗೆ ಇಳಿದು… ಪೊಲೀಸರು ಬರುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಎಟಿಎಂ‌ ಒಳಗೆ ಹೋದರು. ಎಟಿಎಂ‌ಗೆ ಹೋಗುವ ಮೊದಲೇ ಸ್ನೇಹಿತನೊಬ್ಬನಿಗೆ ಕರೆ ಮಾಡಿ ಅಲ್ಲಿಗೆ ಬರಲು ಹೇಳಿದರು.

ಕಾರಿನಿಂದ ಯಾರೋ ಇಳಿದ ಸಂಗತಿಯನ್ನು ಪೊಲೀಸರು ಗಮನಿಸಿದರು. ಅಷ್ಟೇ ಅಲ್ಲದೆ ಬ್ಲಾಕ್ ಟೀ ಶರ್ಟ್ ಧರಿಸಿದ ಹುಡುಗಿ ಕಾರು ಓಡಿಸುತ್ತಿದ್ದೆಳೆಂದು ಗಮನಿಸಿದರು. ಇಷ್ಟಕ್ಕೂ ಎಟಿಎಂ ಒಳಗೆ ಯಾಕೆ ನುಗ್ಗಿದರು ಎಂಬುದು ತಾನೆ… ತಮ್ಮ ಬಟ್ಟೆಯನ್ನು ಬದಲಾಯಿಸಿಕೊಳ್ಳಲು. ಯಾಕೆಂದರೆ ಫುಲ್ ಆಗಿ ಟೈಟ್ ಆದ ಯುವತಿ ಸಿಕ್ಕಿಬಿದ್ದರೆ ಪೊಲೀಸರು ಸುಮ್ಮನೆ ಬಿಡುತ್ತಾರಾ? ಕರೆ ಮಾಡಿದ ಗೆಳೆಯ ಬರವುದಕ್ಕೂ ನಿಮಿಷದ ಮೊದಲು ಇವರಿಬ್ಬರೂ ಎಟಿಎಂನಿಂದ ಹೊರಗೆ ಬಂದರು. ಇವರನ್ನು ನೋಡಿದ ಪೊಲೀಸರು, ಕಾರನ್ನು ರಸ್ತೆಯಲ್ಲಿ ಯಾಕೆ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸುತ್ತಿದ್ದಂತೆ, ಇವರ ಸ್ನೇಹಿತ ಬಂದು ಕಾರು ತನ್ನದೆಂದು ಹೇಳಿದ. ಆತನಿಗೆ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆ ಮಾಡಿದರು, ಬಿಎಸಿ ಜೀರೋ ತೋರಿಸಿತು. ಮಾಡುವುದೇನು ಇಲ್ಲದೆ ರಾಂಗ್ ಪಾರ್ಕಿಂಗ್ ಎಂದು ಫೈನ್ ಹಾಕಿ ಪೊಲೀಸರು ಕಳುಹಿಸಿದರು.


Click Here To Download Kannada AP2TG App From PlayStore!