‘ಡೊನಾಲ್ಡ್ ಟ್ರಂಪ್’ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇರುತ್ತವೋ ನಿಮಗೆ ಗೊತ್ತೇ ?

ಅಮೆರಿಕಾ ಅಧ್ಯಕ್ಷರಿಗೆ ವಿಶ್ವದ ಯಾವುದೇ ಅಧ್ಯಕ್ಷರಿಗಿರದ ರಕ್ಷಣೆಯಿರುತ್ತದೆ. ಅದೇ ರೀತಿ ರಾಜಭೋಗದ ಸೌಲಭ್ಯಗಳೂ ಇರುತ್ತವೆ.ಎಲ್ಲೇ ಹೋಗಲಿ ಅವರೊಡನಿರುವ ಕಮಾಂಡೋಗಳು,ಶ್ವೇತ ಭವನದಿಂದ ಎಲ್ಲೆಡೆಗೂ ಸಂಪರ್ಕಿಸಲು ಇರುವ ಸ್ಯಾಟಲೈಟ್ ಕಮ್ಯೂನಿಕೇಷನ್ ವ್ಯವಸ್ಥೆ,ಪ್ರತ್ಯೇಕ ಭೋಜನ ವ್ಯವಸ್ಥೆ….. ಹೀಗೆ ಹೇಳುತ್ತಾ ಹೊರಟರೆ ಅಮೆರಿಕಾ ಅಧ್ಯಕ್ಷರಿಗಿರುವ ಪ್ರಾಮುಖ್ಯತೆ ತಿಳಿಯುತ್ತದೆ.ಇಷ್ಟೆಲ್ಲಾ ಸೌಲಭ್ಯಗಳಿರುವ ಅಮೆರಿಕಾ ಅಧ್ಯಕ್ಷರ ಕಾರು ಹೇಗಿರುತ್ತದೆಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ.ಅದರ ಕುರಿತು ತಿಳಿದುಕೊಳ್ಳೊಣ.

trump-beast-1

ಅಮೆರಿಕಾ ಸಂಯುಕ್ತ ಸಂಸ್ಥಾನಗಳ 45 ನೇ ಅಧ್ಯಕ್ಷರಾಗಿ ಪದವಿ ಸ್ವೀಕರಿಸಲಿರುವ ಡೋನಾಲ್ಡ್ ಟ್ರಂಪ್ ಕಾರನ್ನು ಪ್ರಸಿದ್ಧ ಅಟೋಮೊಬೈಲ್ ಕಂಪೆನಿ ‘ಕೆಡಿಲಾಕ್ ಮೋಟಾರ್ಸ್’ ತಯಾರಿಸುತ್ತದೆ.ಬೀಸ್ಟ್ ಎಂದು ಕರೆಯಲ್ಪಡುವ ಕಾರಿನ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆಯಂತೆ. ಆದರೆ,ಇದೊಂದೇ ಕಾರಲ್ಲದೆ ಇಂತಹ 12 ಕಾರುಗಳನ್ನು ಅಮೆರಿಕಾ ಅಧಿಕಾರಿಗಳು ತಯಾರು ಮಾಡಿಸುತ್ತಾರಂತೆ.ಅವುಗಳಲ್ಲಿರುವ ವಿಶೇಷತೆಗಳ ಬಗ್ಗೆ ತಿಳಿಯೋಣ ಬನ್ನಿ…

trump-beast-2

 • ಅಮೆರಿಕಾ ಅಧ್ಯಕ್ಷರು ಪ್ರಯಾಣಿಸಲಿರುವ ‘ಬೀಸ್ಟ್’ ಕಾರು ಅತ್ಯಂತ ಆಧುನಿಕ ಸಾಂಕೇತಿಕ ಪರಿಜ್ಞಾನವನ್ನು ಉಪಯೋಗಿಸಿ,ಹಿಂದೆಂದೂ ಇರದ ರಕ್ಷಣಾ ಸೌಲಭ್ಯಗಳನ್ನು ಈ ಕಾರಿನಲ್ಲಿ ಅಳವಡಿಸಿರುತ್ತಾರೆ. ಮುಂದಿನ ಭಾಗದಲ್ಲಿ ಅತ್ಯಾಧುನಿಕ ಕ್ಯಾಡಿಲಾಕ್ ಎಸ್ಕಲೇಟಡ್ ಎಸ್ ಯು ವಿ ಶ್ರೇಣಿಯ ರೀತಿಯಲ್ಲಿ ರೂಪಿಸುತಿದ್ದಾರೆ.
 • ಕಾರಿನ ಮುಂದಿನ ಕೆಳಭಾಗದಲ್ಲಿ ವಾಯು ಗೋಳಗಳು,ನೈಟ್ ವಿಷನ್ ಕೆಮರಾಗಳನ್ನು ಏರ್ಪಡಿಸಿರುತ್ತಾರೆ.ರಾತ್ರಿ ಸಮಯದಲ್ಲೂ ರಸ್ತೆಯನ್ನು ನೋಡಲು ನೈಟ್ ವಿಷನ್ ಕೆಮರಾಗಳು ಉಪಯೋಗಕ್ಕೆ ಬರುತ್ತವೆ.ಅಧ್ಯಕ್ಷರ ರಕ್ಷಣೆಗಾಗಿ ಅಗತ್ಯವಿದ್ದಲ್ಲಿ ವಾಯು ಗೋಳಗಳನ್ನು ಪ್ರಯೋಗಿಸುತ್ತಾರೆ.
 • 6.60 ಲೀಟರ್ ಗಳ ಡ್ಯುರಾಮಾಕ್ಸ್ ಇಂಜಿನನ್ನು ಅಳವಡಿಸಲಾಗಿರುತ್ತದೆ. ಇದು ಗರಿಷ್ಠ ಅಶ್ವ ಶಕ್ತಿಯಲ್ಲಿ ಕಾರು ಓಡುವಂತೆ ಮಾಡುತ್ತದೆ.
 • ರಸ್ತೆ ಬದಿಯಲ್ಲಿಸ್ಪೋಟಿಸುವ ಅತ್ಯಂತ ಶಕ್ತಿಯುತವಾದ ಬಾಂಬ್ ಗಳಿಂದ ರಕ್ಷಣೆ ಪಡೆಯಲು ಕಾರನ್ನು 125 ಮಿ.ಮೀ.ದಪ್ಪದಿಂದ ತಯಾರಿಸುತ್ತಾರೆ.
 • ಚಾಲಕನನಲ್ಲದೆ ಬೀಸ್ಟ್ ನಲ್ಲಿ 2,3,2 ರಂತೆ ಒಟ್ಟು ಏಳು ಜನ ಕುಳಿತುಕೊಳ್ಳುವ ಆಸನಗಳಿರುತ್ತವೆ.
 • ಶಕ್ತಿಯುತವಾತ ರಾಸಾಯನಿಕ ದಾಳಿಗಳಿಂದ ರಕ್ಷಿಸಿ ಕೊಳ್ಳುವ ವ್ಯವಸ್ಥೆಯೂ ಈ ಕಾರಿನಲ್ಲಿದೆ.ಒಂದು ವೇಳೆ ರಾಸಾಯನಿಕ ದಾಳಿ ನಡೆದಲ್ಲಿ ಅಧ್ಯಕ್ಷರು ಕಾರಿನಲ್ಲಿದ್ದುಕೊಂಡೇ
 • ಆಮ್ಲ ಜನಕವನ್ನು ಸೇವಿಸಲು ಪ್ರತ್ಯೇಕವಾದ ಟ್ಯಾಂಕ್ ಗಳಿರುತ್ತವೆ.
 • ಶಕ್ತಿಯುತವಾದ ಬುಲೆಟ್ ಗಳ ದಾಳಿಯಿಂದ ರಕ್ಷಣೆಪಡೆಯಲು 200 ಮಿ.ಮೀ ದಪ್ಪದ ಬಾಗಿಲುಗಳನ್ನು ರೂಪಿಸುತ್ತಿದ್ದಾರೆ.
 • ಇಂಧನ ಟ್ಯಾಂಕಿನ ಮೇಲ್ಭಾಗದಲ್ಲಿ ನೊರೆಯಂತಹ ಪದಾರ್ಥವನ್ನು ತುಂಬಿರುತ್ತಾರೆ.ಇದರಿಂದಾಗಿ ಇಂಧನ ಟ್ಯಾಂಕ್ ಸ್ಪೋಟಗೊಂಡರೂ ಅಪಾಯವಾಗುವುದಿಲ್ಲ.
 • ಬೀಸ್ಟ್ ಕಾರಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಕೆವ್ಲಾರ್ ರನ್ ಫ್ಲಾಟ್ ಟೈರುಗಳನ್ನು ಅಳವಡಿಸಿದ್ದಾರೆ.
 • ಒಂದು ವೇಳೆ ಅಪಘಾತ ಸಂಭವಿಸಿದಲ್ಲಿ,ಒಡನೆಯೇ ಪ್ರಥಮ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಿಗಳೊಂದಿಗೆ ಅಧ್ಯಕ್ಷರ ಬ್ಲಡ್ ಗ್ರೂಪಿನ 2 ಯುನಿಟ್ ರಕ್ತವನ್ನು ಸದಾಕಾಲ ದೊರೆಯುವಂತೆ ಇರಿಸಿರುತ್ತಾರೆ.
 • ಬೀಸ್ಟ್ ಕಾರಿನ ತೂಕ 6800 ಕೆಜಿ ಗಳಿಮದ 9000 ಕೆಜಿಗಳ ವರೆಗೂ ಇರುತ್ತದೆ.ಗಂಟೆಗೆ ಗರಿಷ್ಠ100 ಕಿ.ಮೀ.ವೇಗದಲ್ಲಿ ಚಲಿಸುತ್ತದೆ.34 ಲೀಟರ್ ಗಳ ಇಂಧನವನ್ನು ತುಂಬಿಸಿದರೆ 100 ಕಿ.ಮೀ ಚಲಿಸುತ್ತದೆ.
 • ಬೀಸ್ಟ್ ಕಾರು ತಯಾರಿಸಲು ಇದುವರೆಗೆ 102.96 ಕೋಟಿಗಳವೆರೆಗೂ ನೀಡಿದ್ದಾರೆ.
  ಮುಂಬರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ಸ್ವೀಕರಿಸುವ ದಿನದಂದು ಈ ಕಾರಿನಲ್ಲಿ ಬರುತ್ತಾರೆಂದು ತಿಳಿದು ಬಂದಿದೆ.

Click Here To Download Kannada AP2TG App From PlayStore!

Share this post

scroll to top