40 ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿರುವ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶರು..!

ರಕ್ತದಾನದಿಂದ ಎಷ್ಟು ಉಪಯೋಗ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ರಕ್ತದಾನದಿಂದ ಜೀವವನ್ನು ಉಳಿಸಬಹುದು. ರಕ್ತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದಾನ ಮಾಡುವುದರಿಂದ ಎಷ್ಟೋ ಉಪಯೋಗವಾಗುತ್ತದೆ. ಅವರ ಪ್ರಾಣವನ್ನು ಕಾಪಾಡುತ್ತದೆ. ಆದರೆ ನಮ್ಮ ಸಮಾಜದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಬಹುದು. ಯಾರಾದರೂ ತಮ್ಮ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರಿಗೆ ಅವಶ್ಯಕತೆ ಇದ್ದರೆ ಮಾತ್ರ ರಕ್ತದಾನ ಮಾಡುತ್ತಾರೆ. ಯಾರೋ ಕೆಲವರು ಇದಕ್ಕೆ ಭಿನ್ನವಾಗಿ ಯೋಚಿಸುತ್ತಾರೆ. ಅಂತಹ ಕೆಲವರಲ್ಲಿ ಅವರು ಒಬ್ಬರು. ಆದರೆ ಅವರು ಸಾಧಾರಣ ವ್ಯಕ್ತಿಯಲ್ಲ. ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ. ಅಂತಹ ಅತ್ಯುನ್ನತ ಪದವಿಯಲ್ಲಿದ್ದು ಸಹ ರಕ್ತದಾನ ಮಾಡುವುದನ್ನು ನಿಲ್ಲಿಸಿಲ್ಲ.

ಆತನ ಹೆಸರು ಜಗದೀಶ್ ಸಿಂಗ್ ಖೇಹರ್. ಇತ್ತೀಚಿನ ಅವರು ಸುಪ್ರೀಂ ಕೋರ್ಟ್’ನ ಮುಖ್ಯನ್ಯಾಯಾಧೀಶರಾಗಿ ಆಯ್ಕೆಯಾದರು. 2017 ಅಗಸ್ಟ್ 28ರವರೆಗೆ ಅವರು ಆ ಸ್ಥಾನದಲ್ಲಿ ಇರಲಿದ್ದಾರೆ. ಜಗದೀಶ್ ಸಿಂಗ್ ನ್ಯಾಯಮೂರ್ತಿಯಾಗಿ ಜನರಿಗೆ ನ್ಯಾಯ ಒದಗಿಸುವುದಷ್ಟೇ ಅಲ್ಲ, ಸಾಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಆವರು ರಕ್ತದಾನ ಮಾಡುತ್ತಾ ಬಂದಿದ್ದಾರೆ ‌ ಅದು ಸಹ ಪ್ರತಿ 3 ಮೂರು ತಿಂಗಳಿಗೊಮ್ಮೆ ಎಂಬುದು ವಿಶೇಷ. ಮೂರು ತಿಂಗಳಾದರೆ ಸಾಕು. ಎಂತಹ ಪರಿಸ್ಥಿತಿಯಲ್ಲೂ ತಪ್ಪದೇ ರಕ್ತದಾನ ಮಾಡುತ್ತಾರೆ. ಅವರು ಸಾಮಾನ್ಯವಾಗಿ ನ್ಯೂಡೆಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ರಕ್ತದಾನ ಮಾಡುತ್ತಾರೆ.

ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಪ್ರತಿಯೊಬ‌್ಬರು ತಮ್ಮ ಕನಿಷ್ಠ ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದೆಂದು ಜಗದೀಶ್ ಸಿಂಗ್ ಹೇಳುತ್ತಾರೆ. ಇವರಿಗೆ ವಯಸ್ಸಾದರೂ ಸಹ ರಕ್ತದಾನ ಮಾಡುವುದನ್ನು ನಿಲ್ಲಿಸಿಲ್ಲ. ಗ್ರೇಟ್ ಅಲ್ವಾ..! ಇವರನ್ನು ಎಲ್ಲರೂ ಆದರ್ಶವಾಗಿ ತೆಗೆದುಕೊಂಡರೆ ಎಷ್ಟೋ ಜನರ ಬದುಕಿನಲ್ಲಿ ಬೆಳಕು ತಂದವರಾಗುತ್ತವೆ. ಅಂತಹ ಮನಸ್ಸು ಎಲ್ಲರಲ್ಲೂ ಬರುತ್ತಾ..‌.? ನೋಡೋಣ..! ಇನ್ನೊಂದು ವಿಷಯ… ಜಗದೀಶ್ ಸಿಂಗ್ ಹಾಗೆ ರಕ್ತದಾನ ಮಾಡುವುದನ್ನು ಯಾರಿಗೂ ತಿಳಿಸಿರಲಿಲ್ಲ. ಇತ್ತೀಚಿಗೆ ಈ ವಿಷಯ ಬಹಿರಂಗವಾಗಿದೆ. ಹ್ಯಾಟ್ಸಪ್ ಸಾರ್…


Click Here To Download Kannada AP2TG App From PlayStore!

Share this post

scroll to top