ತಂದೆತಾಯಿಯಿಂದ ದೂರವಾದ ಮಕ್ಕಳಿಗೆ ತಾಯಿ ಪ್ರೀತಿ ನೀಡುವ ‘ತಾಯಿಮನೆ’…!

ಹೌದು ತಂದೆತಾಯಿಯಿಂದ ದೂರವಾದ ಅನಾಥ ಮಕ್ಕಳಿಗೆ ಉಚಿತವಾಗಿ ಆಟ, ಪಾಠ, ಊಟದ ಜೊತೆಗೆ ಆಶ್ರಯವನ್ನು ನೀಡುತ್ತಿದೆ ತಾಯಿಮನೆ. ಒಬ್ಬ ಹುಡುಗನಿಂದ ಆರಂಭವಾದ ತಾಯಿಮನೆಯಲ್ಲಿ ಇಂದು ಆರು ಜನ HIV ಮಕ್ಕಳು ಸೇರಿದಂತೆ 25 ಕ್ಕೂ ಹೆಚ್ಚು ಮಕ್ಕಳಿದ್ದಾರೆ. 2009 ರಲ್ಲಿ ಸುದರ್ಶನ್ ಎಂಬ ಯುವಕನಿಗೆ ಆಕಸ್ಮಿಕವಾಗಿ ಪರಿಚವಾದ ತಂದೆತಾಯಿಯಿಲ್ಲದ ಒಂಬತ್ತನೆಯ ತರಗತಿ ಓದುತ್ತಿದ್ದ ಪೇಪರ್ ಹಾಕುವ ಹುಡುಗನೊಂದಿಗೆ ಪ್ರಾರಂಭವಾದ ತಾಯಿಮನೆ ಸಂಸ್ಥೆ ಇಂದು ಅನೇಕ ಬಡ ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಅಂದು ಪರಿಚಯವಾದ ಹುಡುಗ ಇಂದು ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾನೆ‌.

ತಾಯಿಮನೆ ಸಂಸ್ಥೆ ಶಿವಮೊಗ್ಗದಲ್ಲಿದ್ದು, ಅಲ್ಲಿರುವ ಮಕ್ಕಳಿಗೆ ಶಿಕ್ಷಣದ ಜೊತೆಗೆ ಯೋಗ, ಕಂಪ್ಯೂಟರ್ ಶಿಕ್ಷಣ ಇತ್ಯಾದಿ ಅನೇಕ ವಿಷಯಗಳನ್ನು ಕಲಿಸಿಕೊಡಲಾಗುತ್ತದೆ. ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವಿದ್ದು ಮಕ್ಕಳ ಜ್ಞಾನದ ದಾಹವನ್ನು ನೀಗಿಸುತ್ತಿದೆ. ಸಂಸ್ಥೆಯ ಆವರಣದಲ್ಲಿ ಅಡುಗೆ ಬೇಕಾಗುವ ತರಕಾರಿಗಳನ್ನು ಮಕ್ಕಳೇ ಬೆಳೆಸುತ್ತಾರೆ. ಇತರೆ ಅವಶ್ಯಕತೆ ಇರುವ ತರಕಾರಿಗಳನ್ನು ವ್ಯಾಪಾರಿಗಳು ಉಚಿತವಾಗಿ ನೀಡುತ್ತಾರೆ.

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸುದರ್ಶನ್ ರವರು ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆಯದೇ ಸ್ನೇಹಿತರು ಹಾಗೂ ಸಂಬಂಧಿಕರ ನೆರವಿನಿಂದ ತಾಯಿಮನೆ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇಂದು ಹಣ ಮಾಡುವ ಉದ್ದೇಶದಿಂದ ಸಮಜಸೇವೆ ಹೆಸರಿನಲ್ಲಿ ಸಂಸ್ಥೆಗಳನ್ನು ಸ್ಥಾಪಿಸುವ ಜನರ ನಡುವೆ ಸುದರ್ಶನರವರ ನಿಸ್ವಾರ್ಥ ಸೇವೆ ಶ್ಲಾಘನೀಯವಾದದು.


Click Here To Download Kannada AP2TG App From PlayStore!

Share this post

scroll to top