ಮದುವೆಗೆ ಮಾಡುವ ಖರ್ಚಿನಲ್ಲಿ 108 ಜನ ಬಡವರಿಗೆ ಮನೆ ಕಟ್ಟಿಸಿಕೊಟ್ಟ ಮದುಮಗಳು..!

ತನ್ನ ಮದುವೆಯನ್ನು ಸಾಧಾರಣವಾಗಿ ಮಾಡಿಕೊಂಡು, ಮದುವೆಗೆ ಆಗುವ ಖರ್ಚಿನಲ್ಲಿ 108 ಬಡ ಕುಟುಂಬಗಳಿಗೆ ಡಬಲ್ ಬೆಡ್ ರೂಮ್ ಮನೆ ಕಟ್ಟಿಸಿದ್ದಾಳೆ ಮದುಮಗಳು.

ಮಹಾರಾಷ್ಟ್ರದ ಶ್ರೇಯ ಮುನೋದ್’ರವರದು ಶ್ರೀಮಂತ ಕುಟುಂಬ. ಆಕೆ ಗಂಡನ ಮನೆಯವರು ಸಹ ಶ್ರೀಮಂತ ಕುಟುಂಬ…! ಇದರಿಂದ ತನ್ನ ಮದುವೆ ಆ ಬಡಕುಟುಂಬಗಳು ಜೀವನ ಪೂರ್ತಿ ನೆನಪಿಟ್ಟುಕೊಳ್ಳುವ ಹಾಗೆ ಮಾಡಿದ್ದಾಳೆ ಶ್ರೇಯ. ತನ್ನ ಮದುವೆಗೆ ಮಾಡಬೇಕಾದ ಖರ್ಚು ಮಾಡಬೇಕಾದ ಹಣದಲ್ಲಿ 108 ಮನೆಗಳನ್ನು ಪ್ರಾರಂಭಿಸಿದಳು. ಅದರಲ್ಲಿ 90 ಮನೆಗಳನ್ನು ತನ್ನ ಮದುವೆಯ ಸಮಯದ ವೇಳೆಗೆ ಪೂರ್ಣಗೊಂಡವು.

ಗುರುತಿಸಿದ ಬಡವರನ್ನು ತನ್ನ ಮದುವೆಗೆ ವಿಶೇಷ ಅಥಿತಿಗಳನ್ನಾಗಿ ಆಹ್ವಾನಿಸಿ ಹೊಸ ಮನೆಯ ಬೀಗದ ಕೀಯನ್ನು ಅವರ ಕೈಗೆ ಕೊಟ್ಟಳು ಶ್ರೇಯ. ಉಳಿದ 18 ಮನೆಗಳನ್ನು ಸಹ ಶೀಘ್ರದಲ್ಲೇ ಪೂರ್ಣಗೊಳಿಸಿ ಅವನ್ನು ಸಹ ಬಡವರಿಗೆ ನೀಡಲಿದ್ದಾಳೆ ಈ ನವವಧು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಗ್ರಾಂಡ್ ಆಗಿ ಮದುವೆಯಾಗುವ ಇಂದಿನ ದಿನಗಳಲ್ಲಿ… ಶ್ರೇಯ ಆಲೋಚನೆ ನಿಜಕ್ಕೂ ಶ್ಲಾಘನೀಯ. ಈಕೆಯ ನಿರ್ಧಾರವನ್ನು ಗಂಡ ಸಹ… ಅತ್ತೆಮನೆಯವರು ಸ್ವಾಗತಿಸಿದ್ದಾರೆ. ಮನೆಗಳನ್ನು ಕೊಡುಗೆಯಾಗಿ ಪಡೆದವರು ನೂತನ ವಧುವರರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಸನ್ಮಾನಿಸಿದರು.

ಜನಾರ್ಧನ ರೆಡ್ಡಿ ಮಗಳ ಮದುವೆಗಿಂತ ಶ್ರೇಯ ಮದುವೆ ನನಗೆ ತುಂಬಾ ಇಷ್ಟವಾಯಿತು. ರಾಜ ವೈಭೋಗದ ಕೋಟಿ ಕೋಟಿ ಹಣ ಖರ್ಚು ಮಾಡಿದ ಜನಾರ್ಧನ ರೆಡ್ಡಿ ಹೀಗೆ ಯೋಚಿಸಿದ್ದರೆ ಕಡಿಮೆಯೆಂದರೂ 5000 ಮನೆಗಳನ್ನು ನಿರ್ಮಾಣ ಮಾಡಿ ಬಡವರಿಗೆ ಕೊಡಬಹುದಿತ್ತು.

#HatsOff….ಶ್ರೇಯ


Click Here To Download Kannada AP2TG App From PlayStore!

Share this post

scroll to top