ಆಕೆ ಟೀಚರ್ ಆಗಿ ನಿವೃತ್ತರಾದರು. ತಾನು ಕೂಡಿಟ್ಟಿದ್ದ ರೂ. 4 ಕೋಟಿಗಳನ್ನು ಬಡ ವಿದ್ಯಾರ್ಥಿಗಳಿಗಾಗಿ ಕೊಟ್ಟುಬಿಟ್ಟರು.

ಎಷ್ಟು ಸಂಪಾದಿಸುತ್ತಿದ್ದೇವೆ.. ಎಷ್ಟು ಕೂಡಿಟ್ಟಿದ್ದೇವೆ.. ನಮ್ಮ ಮೊಮ್ಮಕ್ಕಳಿಗೆ, ಅವರ ಮೊಮ್ಮಕ್ಕಳಿಗೆ, ಮೊಮ್ಮಗಳಿಗೆ ನಾವು ಸಂಪಾದಿಸಿದ್ದು ಸರಿಹೋಗುತ್ತಾ.. ಎಂದು ಬಹಳಷ್ಟು ಆಲೋಚಿಸುವ ಕಾಲ ಇದು. ಆದರೆ ಸಮಾಜದಲ್ಲಿರುವ ಬಡವರ ಬಗ್ಗೆ ಯಾರೂ ಆಲೋಚಿಸಲ್ಲ. ಆಕೆ ಮಾತ್ರ ಆ ರೀತಿ ಅಲ್ಲ. ತನ್ನ ಜೀವನದಲ್ಲಿ ತಾನು ಸಂಪಾದಿಸಿದ ಸಾಕಷ್ಟು ಹಣವನ್ನು ಸಹ ಬಡ ವಿದ್ಯಾರ್ಥಿಗಳಿಗಾಗಿ ದಾನವಾಗಿ ನೀಡಿದರು. ಅಷ್ಟೇ ಅಲ್ಲ, ಈ ಹಿಂದೆಯೂ ಆಕೆ ಬಡ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಮಾಡಿದ್ದಾರೆ. ಇಷ್ಟಕ್ಕೂ ಯಾರಾಕೆ? ಬಡ ವಿದ್ಯಾರ್ಥಿಗಳಿಗಾಗಿ ಏನು ಮಾಡಿದ್ದಾರೆ ಗೊತ್ತಾ?

ಆಕೆ ಹೆಸರು ಕೆ ಪೊನ್ಮಣಿ ದೇವಿ. ವಯಸ್ಸು 85 ವರ್ಷಗಳು. ಇರುವುದು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ. ಅಲ್ಲೇ ಸ್ಥಳೀಯ ಸರಕಾರಿ ಶಾಲೆಯಲ್ಲಿ 1964ರಲ್ಲಿ ಟೀಚರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಬಳಿಕ ಬಡ್ತಿ ಸಿಕ್ಕಿ ಮುಖ್ಯೋಪಾಧ್ಯಾಯರಾದರು. ಆದರೂ ಬಡ ವಿದ್ಯಾರ್ಥಿಗಳಿಗಾಗಿ ಸೇವೆ ಮಾಡುವುದನ್ನು ಮಾತ್ರ ಮರೆಯಲಿಲ್ಲ. ಹೀಗೇ 32 ವರ್ಷಗಳ ಕಾಲ ಟೀಚರ್ ಆಗಿ 1996ರಲ್ಲಿ ನಿವೃತ್ತಿ ತೆಗೆದುಕೊಂಡರು. ಆದರೂ ಸರಕಾರಿ ಪಾಠಶಾಲೆಗಳಲ್ಲಿ ಓದಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ತನ್ನಿಂದಾದ ಸಹಾಯವನ್ನು ಮಾಡುತ್ತಲೇ ಇದ್ದರು.

2006ರಲ್ಲಿ ತನಗಿದ್ದ ಜಾಗದಲ್ಲಿ 25 ಸೆಂಟ್ ಜಾಗವನ್ನು ಸರಕಾರಿ ಶಾಲೆ ನಿರ್ಮಿಸಲು ದಾನವಾಗಿ ನೀಡರು ಪೊನ್ಮಣಿ. ಅದೇ ರೀತಿ 2015ರಲ್ಲಿ ಸರಕಾರಿ ಪಾಠಶಾಲೆ ರಿಪೇರಿ ಕೆಲಸಕ್ಕಾಗಿ ರೂ.2 ಲಕ್ಷವನ್ನು ದಾನವಾಗಿ ನೀಡಿದರು. ಇನ್ನು ಇತ್ತೀಚೆಗೆ ಈರೋಡ್‌ನಲ್ಲಿ ಇರುವ ಸರಕಾರಿ ಪಾಠಶಾಲೆಯಲ್ಲಿ ನೂತನ ಭವನ ನಿರ್ಮಾಣಕ್ಕಾಗಿ ತಾನು ಜೀವನಪರ್ಯಂತ ಕಷ್ಟಪಟ್ಟು ಕೂಡಿಟ್ಟಿದ್ದ ರೂ. 4 ಕೋಟಿಯನ್ನು ದಾನವಾಗಿ ನೀಡಿದರು. ನಾವೆಲ್ಲಾ ಸತ್ತು ಹೋದರೆ ನಮ್ಮ ಜತೆಗೆ ನಾವು ಸಂಪಾದಿಸಿದ ಹಣ ಬರಲ್ಲ ಅಲ್ಲವೇ, ಹಾಗಾಗಿಯೇ ಇವರು ಆ ಸಿದ್ಧಾಂತವನ್ನು ನಂಬಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ನಿಜವಾಗಿ ಇಂತಹವರು ಸಿಗುವುದು ಬಹಳ ಅಪರೂಪ. ಇವರ ಕೆಲಸವನ್ನು ನಾವು ಅಭಿನಂದಿಸಬೇಕಾದದ್ದೇ. ಏನಂತೀರಾ, ನಿಜ ಅಲ್ಲವೇ..?


Click Here To Download Kannada AP2TG App From PlayStore!