ಪಾಕಿಸ್ತಾನದಲ್ಲಿ ಕ್ರಿಕೆಟ್ ನೋಡುತ್ತಾ…ಭಾರತ ಗೆಲ್ಲಬೇಕೆಂದು ಶಿಳ್ಳೆ ಹೊಡೆಯುತ್ತಾನೆ ಆ ಬಾಲಕ.! ಏಕೆಂದು ನಿಮಗೆ ಗೊತ್ತೆ.?

ದ್ವೇಷ,ಅಸೂಯೆ,ಕುತಂತ್ರ,ಮೋಸ,ಈರ್ಷ್ಯೆ…ಇವೆಲ್ಲವೂ ದೊಡ್ಡವರಲ್ಲೇ ಇರುತ್ತವೆ.ಚಿಕ್ಕವರಲ್ಲಿ ಇರುವುದಿಲ್ಲ. ಪರಿಶುದ್ಧ ಮನಸ್ಸಿನ,ಪಾಪ ಪುಣ್ಯಗಳನ್ನರಿಯದ ಅಮಾಯಕ ಮಕ್ಕಳನ್ನು ದೇವರ ಸಮಾನವೆಂದು ಹೇಳುತ್ತಾರೆ. ಹೌದು ಇದೆಲ್ಲವೂ ಸತ್ಯ. ಅಕ್ಕ ಪಕ್ಕದ ಮನೆಗಳಲ್ಲಿರುವ ದೊಡ್ಡವರಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು. ಜಗಳಗಳಾಗಬಹುದು. ಆದರೆ, ಇವೆಲ್ಲವೂ ಚಿಕ್ಕ ಮಕ್ಕಳಲ್ಲಿ ಬರಲು ಸಾಧ್ಯವಿಲ್ಲ.ಅವರು ಯಾವಾಗಲೂ ಒಟ್ಟಾಗಿಯೇ ಇರುತ್ತಾರೆ. ಒಟ್ಟಾಗಿ ಆಡಿ ನಲಿಯುತ್ತಾರೆ,ಒಟ್ಟಾಗಿಯೇ ಬೆಳೆಯುತ್ತಾರೆ. ಮಕ್ಕಳೇ ಹಾಗೆ. ಯಾವುದೇ ಪ್ರದೇಶದವರಾದರೂ ಹೀಗೆಯೇ ಇರುತ್ತಾರೆ.ಅದು ಬೇರೆ ರಾಜ್ಯವಾಗಬಹುದು ಅಥವಾ ರಾಷ್ಟ್ರವಾಗಬಹುದು. ಇದಕ್ಕೆ ಒಂದು ಉತ್ತಮ ಉದಾಹರಣೆ ಈ ಬಾಲಕ.

ಚಿತ್ರದಲ್ಲಿ ನೋಡುತ್ತಿದ್ದೀರಲ್ಲಾ. ಈ ಬಾಲಕ ಪಾಕಿಸ್ತಾನದವನು. ಬಹಳ ವರ್ಷ ಗಳ ಹಿಂದೆ ಈತನ ತಂದೆ ತಾಯಿಗಳು ಭಾರತಕ್ಕೆ ಬಂದು,ಪುಣೆಯಲ್ಲಿ ನೆಲೆನಿಂತರು. ನಮ್ಮಲ್ಲಿ ಹೈದರಾಬಾದ್ ಇರುವ ಹಾಗೆ ಪಾಕಿಸ್ತಾನದಲ್ಲೂ ಹೈದರಾಬಾದ್ ಹೆಸರಿನ ಪಟ್ಟಣವಿದೆ. ಈ ಬಾಲಕನ ಕುಟುಂಬದವರು ಅದೇ ಪಟ್ಟಣದಲ್ಲಿದ್ದಾರೆ. ಆದರೆ,ಈತನ ತಂದೆ ತಾಯಿಗಳು ಭಾರತಕ್ಕೆ ಬಂದಾಗಿನಿಂದಲೂ ಪ್ರತಿ ವರ್ಷ ಬೇಸಿಗೆಯಲ್ಲಿ ಅವರೆಲ್ಲರೂ ಕೂಡಿ ಪಾಕಿಸ್ತಾನ ದಲ್ಲಿರುವ ಹೈದರಾಬಾದ್ ಪಟ್ಟಣಕ್ಕೆ ಹೋಗುತ್ತಾರೆ. ಅಲ್ಲಿ ಆ ಬಾಲಕನ ಬಂಧು ಬಳಗವೂ ಇದೆ.ಅವರ ಮಕ್ಕಳೆಲ್ಲರೂ ಈ ಬಾಲಕನಿಗೆ ಸಹೋದರಿ,ಸಹೋದರರಾಗುತ್ತಾರೆ.

ಈ ರೀತಿ ಅವರೆಲ್ಲರೂ ಅಲ್ಲಿಗೆ ಹೋಗಿದ್ದಾಗ ಭಾರತ,ಪಾಕಿಸ್ತಾನ್ ತಂಡಗಳ ನಡುವೆ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಿರುತ್ತವೆ. ಅವುಗಳನ್ನು ಅವರು ನೋಡಿ ಆನಂದಿಸುತ್ತಾರೆ.ಹೇಗೆಂದರೆ, ಹುಡುಗನ ಕಡೆಯವರು ಒಂದು ತಂಡ, ಮಿಕ್ಕೆಲ್ಲರೂ ಮತ್ತೊಂಡು ತಂಡದ ಕಡೆ ಇರುತ್ತಾರೆ. ಟೀವಿ ನೋಡುವಾಗಲೂ ಸಹ ಎರಡು ತಂಡಗಳವರು ಬೇರೆಬೇರೆಯಾಗೇ ಕುಳಿತುಕೊಳ್ಳುತ್ತಾರೆ. ಒಬ್ಬೊಬ್ಬರು ಒಂದೊಂದು ತಂಡವನ್ನು ಆರಿಸಿಕೊಂಡು, ಪ್ರೋತ್ಸಾಹಿಸುತ್ತಾ ,ಶಿಳ್ಳೆ ಹೊಡೆಯುತ್ತಾರೆ.ವಿಕೆಟ್ ಬಿದ್ದಾಗ,ಸಿಕ್ಸ್,ಫೋರ್ ಹೊಡೆದಾಗ ಕೇಕೆ ಹಾಕಿ ಕುಣಿಯುತ್ತಾರೆ. ಹೀಗೆ ಅವರೆಲ್ಲರೂ ಬೇಧಭಾವ ಮರೆತು ಆನಂದಿಸುತ್ತಾರೆ. ಈ ಬಾಲಕ ಈಗ ಇದೇ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೊಡನೆಯೂ ಹಂಚಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಬಾಲಕನ ವಿಷಯ ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಆಗಿ ಬದಲಾಗಿದೆ. ಅದಕ್ಕೇ ಅಲ್ಲವೇ ಆಗಲೇ ಹೇಳಿದ್ದು ಮಕ್ಕಳ ಮನಸ್ಸಿನಲ್ಲಿ ಕಲ್ಮಷವಿರುವುದಿಲ್ಲವೆಂದು. ಅಂತಹುದು ದೊಡ್ಡವರಲ್ಲೇ ಇರುತ್ತದೆ. ದೊಡ್ಡವರೂ ಸಹ ಮಕ್ಕಳಂತಾದರೆ? ಅವರ ಮನಸ್ಸುಗಳೂ ಹಾಗೆ ಬದಲಾದರೆ ಒಳ್ಳೆಯದಲ್ಲವೇ?


Click Here To Download Kannada AP2TG App From PlayStore!

Share this post

scroll to top