ಸಿಎಂ ಕೆಸಿಆರ್ ನೀಡಿದ ಎಚ್ಚರಿಕೆಯಿಂದ ಕಲೆಕ್ಟರ್ ಆಮ್ರಪಾಲಿ ಡ್ರೆಸ್ಸಿಂಗ್ ಸ್ಟೈಲ್ ಬದಲಾಯಿತು.

 

15-08-2017 ರಂದು ಜರುಗಿದ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು,ಉದ್ದ ತೋಳು ರವಿಕೆ, ಮೈತುಂಬ ಸೀರೆ ಉಟ್ಟುಕೊಂಡು ಬಂದ ಮಹಿಳೆ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದರಲ್ಲಿ ಅಚ್ಚರಿಪಡುವ ವಿಷಯ ಏನಿದೆ ಅಂತೀರಾ? ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ಮಹಿಳೆಯಾದರೂ ಸೀರೆ ಉಟ್ಟುಕೊಂಡೇ ಬರುತ್ತಾರೆ ಎನ್ನುತ್ತೀರಿ ಅಲ್ಲವೇ? ಈಗ ಅಸಲು ವಿಷಯಕ್ಕೆ ಬರೋಣ…ಯಾವಾಗಲೂ ಪಾಶ್ಚಿಮಾತ್ಯ ಶೈಲಿಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಕಲೆಕ್ಟರ್ ಆಮ್ರಪಾಲಿ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಇತ್ತೀಚೆಗೆ ಕೆಸಿಆರ್ ಅಸಮಾಧಾನ ವ್ಯಕ್ತಪಡಿಸಿದ ಸುದ್ದಿ ಬಂದಿದೆ.

 

 

ಇತ್ತೀಚೆಗೆ ಕೆಸಿಆರ್ ರಾಜ್ಯ ಅಧಿಕಾರಿಗಳು ಹಾಗೂ ಪ್ರತಿನಿಧಿಗಳ ಸಮಾವೇಶವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿ ವರ್ಗದ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು. ಜೀನ್ಸ್ ಪ್ಯಾಂಟ್,ಟೀ ಷರ್ಟ್ ಧರಿಸುವುದರಿಂದ ಪ್ರಜೆಗಳ ಮುಂದೆ ಅಧಿಕಾರಿಗಳು ಅಗೌರವದ ಪಾಲಾಗುತ್ತಾರೆಂಬ ಹೊಸ ಸಿದ್ಧಾಂತವನ್ನು ಮಂಡಿಸಿದರು. ಮಂತ್ರಿಗಳು,ಅಧಿಕಾರಿಗಳು,ಪ್ರತಿನಿಧಿಗಳು ಎಲ್ಲರೂ ಖಾದೀ ಬಟ್ಟೆಗಳನ್ನು ಧರಿಸಬೇಕೆಂದು ಸೂಚನೆ ನೀಡಿದ್ದಾರೆ. ಆದರೆ, ಪ್ರತ್ಯೇಕವಾಗಿ ಕಲೆಕ್ಟರ್ ಆಮ್ರಪಾಲಿಯನ್ನು ಉದ್ಧೇಶಿಸಿ…ಅವರು ದರಿಸುವ ಆಧುನಿಕ ಶೈಲಿಯ ಉಡುಗೆಯ ಬಗ್ಗೆ ವಿಮರ್ಶಿಸಿದ್ದಾರೆಂದು ಎಲ್ಲರೂ ಭಾವಿಸಿದರು. ಈ ನಿಟ್ಟಿನಲ್ಲಿ ಸ್ವಾಂತಂತ್ರ್ಯ ದಿನಾಚರಣೆಯ ಸಂಧರ್ಭದಲ್ಲಿ ಕಲೆಕ್ಟರ್ ಆಮ್ರಪಾಲಿ…ಪಾಶ್ಚಿಮಾತ್ಯ ಶೈಲಿಯ ಉಡುಪುಗಳನ್ನು ಧರಿಸದೆ… ಸೀರೆಯುಟ್ಟು ಬಂದಿದ್ದಾರೆಂದು ಪಿಸುಗುಟ್ಟಿದರು. ಆದರೆ, ಮೀಡಿಯಾದೊಂದಿಗೆ ಯಾವಾಗಲೂ ಮನಬಿಚ್ಚಿ ಮಾತಾಡುತ್ತಿದ್ದ ಕಲೆಕ್ಟರ್ ಆಮ್ರಪಾಲಿ…ಮೀಡಿಯಾ ಮುಂದೆ ಬರಲು ಹೆದರಿದಂತೆ ಕಾಣಿಸಿದರು.

 

 


Click Here To Download Kannada AP2TG App From PlayStore!