ಶನಿ ಬಿಡುವ ದಿನ, ನಿಮ್ಮ ಮನೆಗೆ ಕಾಗೆ ಬರುತ್ತದೆ. ಆಗ ಇದನ್ನಿಡಿ..!

ಈ ಲೋಕದಲ್ಲಿ,ನ್ಯಾಯ,ನೀತಿಯಿಂದ ವರ್ತಿಸುವವರನ್ನು ಕರುಣಿಸುವ ದೇವರು ಶನೀಶ್ವರನೆಂದು ಹೇಳುತ್ತಿರುತ್ತಾರೆ. ಜಾತಕದಲ್ಲಿ ಶನಿ ಪ್ರಭಾವವಿರುವವರು ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆಂದು ಬಹಳಷ್ಟು ಮಂದಿ ಭಾವಿಸುತ್ತಾರೆ. ಆದರೆ, ಶನಿ ಪ್ರಭಾವದಿಂದ ಕೆಲವರಿಗೆ ಒಳ್ಳೆಯದಾದರೆ, ಕೆಲವರಿಗೆ ಕೆಟ್ಟದಾಗುತ್ತದಂತೆ. ಶನೀಶ್ವರ ಪ್ರತಿಯೊಂದು ರಾಶಿಯಲ್ಲೂ ಎರಡೂವರೆ ವರ್ಷಗಳಕಾಲ ಪಾಲಿಸುತ್ತಾನಂತೆ.

ಬುಧ, ರಾಹು,ಕೇತು ಗ್ರಹಗಳು ಮಿತ್ರರೆಂದು…ಸೂರ್ಯ, ಚಂದ್ರಗ್ರಹಗಳು ಶತೃಗಳೆಂದು ಹೇಳುತ್ತಾರೆ. ಶನಿದೆಶೆ 19 ಸಂವತ್ಸರಗಳ ಕಾಲ ಇರುತ್ತದೆಂದು ಪಂಡಿತರು ಹೇಳುತ್ತಾರೆ. ಶನಿಯ ವಾಹನ ಕಾಗೆ ಹಾಗೂ ಆತನಿಗೆ ಇಷ್ಟವಾದ ಲೋಹ ಕಬ್ಬಿಣವೆಂದು ಹೇಳುತ್ತಾರೆ. ಬಣ್ಣಗಳಲ್ಲಿ ನೀಲಿ ಬಣ್ಣ ಹಾಗೂ ಕರಿ ಎಳ್ಳು ಇಷ್ಟವಂತೆ. ಶನಿಸ್ತ್ರೋತಗಳನ್ನು ಸ್ತುತಿಸಿದವರನ್ನು ಶನಿ ಪೀಡಿಸುವುದಲ್ಲವಂತೆ.

ಶನಿವಾರ, ಶನಿ ದೇವರ ಆಲಯಕ್ಕೆ ಹೋಗಿ ಎಳ್ಳುದೀಪ ಉರಿಸಬೇಕು. ಅದೇ ರೀತಿ ಎಳ್ಳಿನಿಂದ ತಯಾರಿಸಿದ ಅನ್ನವನ್ನು ನೈವೇಧ್ಯವನ್ನಾಗಿಡಬೇಕು. ಬ್ರಾಹ್ಮಣರಿಗೆ ಅಥವಾ ಬಡವರಿಗೆ ಕಪ್ಪು ಬಣ್ಣದ ವಸ್ತ್ರಗಳನ್ನು ದಾನವಾಗಿ ನೀಡಬೇಕು. ಒಂದು ವೇಳೆ ನಿಮಗೆ ಶನಿಹಿಡಿದಿದ್ದಾನೆನಿಸದರೆ… ಪ್ರತೀದಿನ ಒಂದು ಮುದ್ದೆ ಅನ್ನವನ್ನು ಕಾಗೆಗೆ ಇಡಬೇಕು ಹೀಗೆ ಮಾಡಿದಲ್ಲಿ ಶನಿಯ ಕರುಣೆ ನಿಮ್ಮ ಮೇಲಿರುತ್ತದೆ. ಹೀಗೆ ಪ್ರತೀ ದಿನ ಕಾಗೆಗೆ ಅನ್ನ ವಿಡುವುದರಿಂದ ನಿಮ್ಮ ಕೆಲಸಗಳೆಲ್ಲವೂ ನಿರ್ವಿಘ್ನವಾಗಿ ಸಾಗುತ್ತವೆ.


Click Here To Download Kannada AP2TG App From PlayStore!