ನೀವು ಮಾಡುತ್ತಿರುವ ಕೆಲಸ ನಿಮಗೆ ಇಷ್ಟವಾಗುತ್ತಿಲ್ಲವೇ? ಹಾಗಾದರೆ ಇವರು ಮಾಡುತ್ತಿರುವ ಕೆಲಸದ ಬಗ್ಗೆ ಕೇಳಿ.!

ಈ ಫೋಟೊ ದಲ್ಲಿರುವ ವ್ಯಕ್ತಿಯ ಹೆಸರು ಶಿವನ್.ತಮಿಳುನಾಡಿನಲ್ಲಿ ಅಂಚೆ ಪೇದೆಯಾಗಿ ಕೆಲಸಮಾಡುತ್ತಿದ್ದಾರೆ.ಇವರು ಪತ್ರಗಳನ್ನು ಬಟವಾಡೆಮಾಡುವ ಸಲುವಾಗಿ ಪ್ರತಿ ದಿನವೂ ಒಂದು ದೊಡ್ಡ ಸಾಹಸವನ್ನೇ ಮಾಡಬೇಕಾಗಿದೆ. ಪ್ರಾಣಕ್ಕೆ ಅಪಾಯವೆಂದು ಗೊತ್ತಿದ್ದರೂ. ಅದು ತನ್ನ ಭಾಧ್ಯತೆಯೆಂದು ತಿಳಿದು ತನ್ನ ಉದ್ಯೋಗ ಧರ್ಮವನ್ನು ನಿರ್ವಹಿಸುತ್ತಿದ್ದಾರೆ. ಶಿವನ್,ಕೂನೂರ್ ಗ್ರಾಮದಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.ಆದರೆ. . . .ಈ ಊರಿಗೆ 15 ಕಿಲೋಮೀಟರ್ ದೂರದಲ್ಲಿರುವ ಮರಪ್ಪಲಮ್,ಬುಲಿರಿಯಾರ್ ಎಂಬ ಬೆಟ್ಟ ಪ್ರದೇಶದಲ್ಲಿ ಎಸ್ಟೇಟ್ ಗಳಿವೆ.ಕೆಲವು ಕಾರ್ಮಿಕರು ಅಲ್ಲಿಯೇ ಸ್ಥಿರವಾಗಿ ವಾಸಿಸುತ್ತಿದ್ದು,ಅಲ್ಲಿರುವ ಟೀ ಹಾಗು ಕಾಫೀ ಎಸ್ಟೇಟ್ ಗಳ್ಲಿ ಕೆಲಸ ಮಾಡುತ್ತಿದ್ದಾರೆ.ಆ ಎರಡೂ ಗ್ರಾಮಗಳು ಶಿವನ್ ನ ಪರಿಧಿಗೆ ಬರುತ್ತವೆ.

ಇದರಿಂದಾಗಿ.ಆ ಗ್ರಾಮಸ್ತರಿಗೆ ಬರುವ ಪತ್ರಗಳು,ಪಿಂಚಣಿಯನ್ನು 15 ಕಿಲೋಮಿಟರ್ ದೂರ ಪ್ರಯಾಣಿಸಿ ಬಟವಾಡೆ ಮಾಡುತ್ತಾರೆ ಶಿವನ್.ಆದರೆ,ಆ ಗ್ರಾಮಗಳಿಗೆ ಹೋಗಲು ವಾಹನ ಸೌಕರ್ಯವಿಲ್ಲ.ಕೇವಲ ಕಾಲ್ನಡಿಗೆಯಿಂದ ಬೆಟ್ಟ,ಅಡವಿಗಳ ಮೂಲಕ ಸಾಗುತ್ತಾ,ಆನೆ,ಕರಡಿ,ಹಾವು ಮೊದಲಾದ ಪ್ರಾಣಿಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳುತ್ತಾ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಶಿವನ್.ಒಂದು ಸಲ ತಾನು ಪಿಂಚಣಿಯನ್ನು ನೀಡಬೇಕಾಗಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು,ಸ್ವಂತ ಹಣದಲ್ಲೇ ಆಸ್ಪತ್ರೆಗೆ ತೆರಳಿ ಕೊಡಬೇಕಾದ ಪಿಂಚಣಿ ಹಣವನ್ನು ಕೊಟ್ಟುಬಂದರಂತೆ.ತಮಗಾಗಿ ಇಷ್ಟು ದೂರ ಬಂದು ಪತ್ರಗಳನ್ನು ಬಟವಾಡೆ ಮಾಡುತ್ತಿರುವುದಕ್ಕೆ,ಟೀ ಕುಡಿಯಿರೆಂದು ಆ ಬೆಟ್ಟ ಪ್ರದೇಶಗಳ ಜನರು ಕೇಳಿಕೊಂಡರೂ, ವಿನಯವಾಗಿ ತಿರಸ್ಕರಿಸಿದ್ದಾರಂತೆ. ಕೇವಲ ಕುಡಿಯಲು ನೀರನ್ನು ಮಾತ್ರ ಕೇಳಿ,ಕುಡಿದನಂತರ ಹಿಂತಿರುಗುತ್ತಿದ್ದರಂತೆ.

ಅವರಿಗಾಗುತ್ತಿರುವ ಕಷ್ಟದ ಕುರಿತು ಒಬ್ಬ ಪತ್ರಕರ್ತರು ಕೇಳಿದಾಗ,ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ.ಇದಕ್ಕಾಗಿ ನನಗೆ ಸರಕಾರ ತಿಂಗಳಿಗೆ 12 ಸಾವಿರ ಸಂಬಳ ನೀಡುತ್ತಿದೆ.ಇನ್ನೆರಡು ವರ್ಷಗಳಲ್ಲಿ ನಿವೃತ್ತಿಹೊಂದಲಿದ್ದೇನೆ.ಅಲ್ಲಿಯವರೆಗೂ ನಾನು ಪ್ರಜೆಗಳ ಸೇವೆ ಮಾಡುತ್ತಲೇ ಇರುತ್ತೇನೆ ಎಂದು ಉತ್ತರಿಸಿದರು.ಅಡವಿಯಲ್ಲಿ ಹೋಗುವಾಗ ನಿಮಗೆ ಭಯವಾಗುವುದಿಲ್ಲವೇ ? ಎಂಬ ಪ್ರಶ್ನೆಗೆ,ಪ್ರಾರಂಭದಲ್ಲಿ ನನಗೆ ಭಯವಾಗುತ್ತಿತ್ತು.ಆನೆಗಳು ಘೀಂಕಾರ,ಕಣ್ಣುಗಳ ಮುಂದೆಯೇ ಹೋಗುವ ಕರಡಿ,ಹಾವುಗಳು. . . ಆದರೆ,…ಒಂದು ವರ್ಷದ ನಂತರ ಅವುಗಳು ಯಾವ ಸಮಯದಲ್ಲಿ ತಿರುಗಾಡುತ್ತವೆಂಬುದನ್ನು ಅರಿತುಕೊಂಡು,ನಾನು ಹೋಗುವ ಸಮಯವನ್ನು ಬದಲಾಯಿಸಿಕೊಂಡು ಪತ್ರಗಳನ್ನು ವಿತರಿಸುತ್ತಿದ್ದೇನೆ ಎಂದು ಶಿವನ್ ಉತ್ತರಿಸಿದರಂತೆ.

ವಿದ್ಯಾರ್ಥಿಗಳಿಗೆ ಬಂದ ಹಾಲ್ ಟಿಕೆಟ್ ಗಳನ್ನು,ಕೆಲಸದ ಆಫರ್ ಲೆಟರ್ ಗಳನ್ನು ಬಟವಾಡೆ ಮಾಡದೆ… ಎಷ್ಟೋ ಜನ ಉದ್ಯೋಗದಿಂದ ವಂಚಿತರಾಗುವಂತೆ ಮಾಡುವ ಪೋಸ್ಟ್ ಮ್ಯಾನ್ ಗಳಿಗೂ ,ತನ್ನ ಪ್ರಾಣಕ್ಕೆ ಬಂದೊದಗಬಹುದಾದ ಅಪಾಯವನ್ನೂ ಲೆಕ್ಕಿಸದೆ ನಿಷ್ಠೆಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವ ಶಿವನ್ ಗೂ ಅಜ ಗಜಾಂತರ ವ್ಯತ್ಯಾಸವಿದೆ.
ಶಿವನ್ ರವರೇ, . . ನಿಮ್ಮ ಕರ್ತವ್ಯವನ್ನು ಸಮರ್ಪಣಾಭಾವದಿಂದ ನಿರ್ವಹಿಸುತ್ತಿರುವ ನಿಮಗೆ ಹ್ಯಾಟ್ಸ್ ಆಫ್


Click Here To Download Kannada AP2TG App From PlayStore!

Share this post

scroll to top