ಈ ಆಲಯದಲ್ಲಿನ ಇಲಿಗಳು ಯಾರ ಕಾಲ ಮೇಲಾದರೂ ಓಡಾಡಿದರೆ ಅವರಿಗೆ ಅದೃಷ್ಟ ಕೂಡಿಬಂದಂತೆ!!

ಆಲಯದಲ್ಲಿ ಎತ್ತ ನೋಡಿದರೂ ಇಲಿಗಳು… ಸಾವಿರ ಸಂಖ್ಯೆಯಲ್ಲಿ ಇಲಿಗಳು… ಗುಂಪು ಗುಂಪಾಗಿ ಇಲಿಗಳು.. ಯಾರ ಕಾಲಿನ ಮೇಲೆ ಆ ಇಲಿಗಳು ಓಡಾಡುತ್ತವೋ ಅವರಿಗೆ ಆ ದೇವಿ ಆಶೀರ್ವಾದ ಇದ್ದಂತೆ, ಅದೃಷ್ಟ ಕೂಡಿಬರುವ ಕಾಲ ಹತ್ತಿರದಲ್ಲೇ ಇದ್ದಂತೆ ಎಂಬುದು ಭಕ್ತರ ನಂಬಿಕೆ. ಇಲಿಗಳು ಇರುವ ಪ್ರಸಾದವನ್ನೇ ಭಕ್ತರಿಗೆ ನೀಡುತ್ತಾರೆ.. ಈ ರೀತಿ ಅದೆಷ್ಟೋ ವಿಚಿತ್ರಗಳುಳ್ಳ ಈ ಆಲಯಕ್ಕೆ ಹೋಗಿಬರೋಣ ಬನ್ನಿ…

1. పాలరాతి గోడలు.. వెండి ద్వారాలు...

ಹಿಂದೂಗಳ ದೇವತೆಯಾದ ದುರ್ಗಾಮಾತೆ ಇನ್ನೊಂದು ಅವತಾರವೇ ಈ ಕರ್ಣಿಮಾತಾ. ಸಿಂಧೂರ ಹಚ್ಚಿದ ಏಕಶಿಲೆಯ ಮೇಲೆ ಚತುರ್ಭುಗಳೊಂದಿಗೆ ದರ್ಶನ ನೀಡುತ್ತಾಳೆ. ಒಂದು ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ರಾಕ್ಷಸನ ತಲೆ ಹಿಡಿದುಕೊಂಡು ಸಿಂಹವಾಹಿನಿಯಾಗಿ ಭಕ್ತರ ಕೈಲಿ ಪೂಜೆಗಳನ್ನು ಸ್ವೀಕರಿಸುತ್ತಾಳೆ ಆ ತಾಯಿ. ಈ ಆಲಯವನ್ನು 15ನೇ ಶತಮಾನದಲ್ಲಿ ಗಂಗಾಸಿಂಗ್ ಎಂಬ ರಾಜ ನಿರ್ಮಿಸಿದ್ದಾಗಿ ಇತಿಹಾಸದ ಆಧಾರಗಳಿವೆ. ಈ ಆಲಯ 20ನೇ ಶತಮಾನದ ಆರಂಭದಲ್ಲಿ ಪುನರ್ಮಿಸಿದರು. ಮೊಘಲರ ಶಿಲ್ಪಕಲಾ ನೈಪುಣ್ಯ ಇಲ್ಲಿನ ಗೋಡೆಗಳ ಮೇಲೆ ಪ್ರತಿಫಲಿಸುತ್ತಿರುತ್ತದೆ. ಆಲಯದ ಮುಂದಿನ ಭಾಗದಲ್ಲಿ ಅಮೃತಶಿಲೆಗಳಿಂದ ಆಕರ್ಷಿಸುತ್ತದೆ. ಬೆಳ್ಳಿಯ ಹೊದಿಕೆ ಹಾಕಿದ ದ್ವಾರಗಳು ಕಣ್ಮನ ಸೆಳೆಯುತ್ತವೆ. ಈ ಆಲಯಕ್ಕೆ ಬೆಳ್ಳಿ ದ್ವಾರಗಳು, ಶಿಲ್ಪಗಳನ್ನು ಹೈದರಾಬಾದಿನ ಕರ್ಣಿ ಆಭರಣ ತಯಾರಕರು ಕೊಟ್ಟಿದ್ದಾಗಿ ಕಥೆಗಳಿವೆ.

2. మొఘలుల శిల్పకళానైపుణ్యం

ಈ ಆಲಯದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಇಲಿಗಳಿವೆ. ಈ ಇಲಿಗಳನ್ನು ಕಬ್ಬಾಲು ಎಂದು ಕರೆಯುತ್ತಾರೆ. ಈ ಇಲಿಗಳನ್ನು ದೈವತ್ವದ ಇಲಿಗಳಾಗಿ ಆ ಗ್ರಾಮಸ್ಥರು ಪೂಜಿಸುತ್ತಾರೆ. ಭಕ್ತರು ಬರುತ್ತಿದ್ದರೂ ಅವು ನಿರ್ಭೀತಿಯಿಂದ ಸ್ವತಂತ್ರವಾಗಿ ಓಡಾಡಿಕೊಂಡಿರುತ್ತವೆ. ಭಕ್ತರ ಪಾದಗಳ ಮೇಲೆ ಓಡಾಡುತ್ತಿರುತ್ತವೆ. ಭಕ್ತರು ಇಟ್ಟ ನೈವೇದ್ಯ, ಹಾಲು, ಮೊಸರು, ಹಣ್ಣುಗಳು, ಸಿಹಿಯನ್ನು ಭಕ್ಷಿಸುತ್ತವೆ.

3. ఈ ఆలయంలో దాదాపు 20వేలకు పైగా ఎలుకలున్నాయి..

ಕರ್ಣಿ ಮಾತೆ ಬಾಲ್ಯದಿಂದ ದುರ್ಗಾಮಾತೆಯ ಆರಾಧಕಿ. ಈಕೆ 150 ವರ್ಷ ಜೀವಿಸಿದ್ದರಂತೆ. ಹುಟ್ಟಿನಿಂದಲೇ ಈಕೆಗೆ ಅತೀಂದ್ರಿಯ ಶಕ್ತಿಗಳು ಇದ್ದವಂತೆ. ತನಗಿದ್ದ ಶಕ್ತಿಯಿಂದ ಬಡವರು, ಭಕ್ತರ ಸಮಸ್ಯೆಗಳನ್ನು ಪರಿಷ್ಕರಿಸುತ್ತಿದ್ದರೆಂಬುದು ಪ್ರತೀತಿ. ಹಾಗಾಗಿ ಆಕೆಯನ್ನು ಜನ ದೇವತೆಯಂತೆ ಆರಾಧಿಸಲು ಪ್ರಾರಂಭಿಸಿದರು. ಒಂದು ದಿನ ಆಕೆ ಆಕಸ್ಮಿಕವಾಗಿ ತನ್ನ ಮನೆಯಲ್ಲೇ ಅದೃಶ್ಯವಾದಳು. ಯಾರಿಗೂ ಕಾಣಿಸಲಿಲ್ಲ. ಆಕೆಗೆ ಅಲ್ಲಿಯೇ ಆಲಯ ನಿರ್ಮಿಸಿ, ಅಂದಿನಿಂದ ಪೂಜೆ ಮಾಡಲಾಗುತ್ತಿದೆ. ಸ್ವಲ್ಪ ಸಮಯಕ್ಕೆ ಆಕೆ ಭಕ್ತರೊಂದಿಗೆ ಮಾತನಾಡುತ್ತಾ ತನ್ನ ವಂಶಸ್ಥರೆಲ್ಲಾ ಮೃತಪಡುತ್ತಾರೆಂದು, ಅವರೆಲ್ಲಾ ಇಲಿಗಳಾಗಿ ಜನಿಸಿ ಇಲ್ಲೇ ಇರುತ್ತಾರೆಂದು, ಅವರಿಗೆ ಅನ್ನ ಪಾನೀಯಗಳನ್ನು ಸಮರ್ಪಿಸಿ ಧನ್ಯರಾಗಿ ಎದು ಹೇಳಿದಳು. ಆ ಸಮಯದಲ್ಲಿ ಕರ್ಣಿಮಾತಾ ವಂಶದಲ್ಲಿ ಸುಮಾರು 600 ಕುಟುಂಬಗಳು ಇದ್ದವಂತೆ. ಮಾತೆ ಹೇಳಿದ ರೀತಿಯಲ್ಲಿ ಸ್ವಲ್ಪ ದಿನಕ್ಕೆ ಆ ಕುಟುಂಬಿಕರೆಲ್ಲಾ ಮರಣಿಸಿದ್ದು, ಆ ಬಳಿಕ ಈ ಆಲಯದಲ್ಲಿ ಇಲಿಗಳು ಗುಂಪು ಗುಂಪಾಗಿ ಬರುವುದನ್ನು ನೋಡಿ ಅವರೆಲ್ಲಾ ಕರ್ಣಿಮಾತಾ ವಂಶಸ್ಥರೇ ಇಲಿಗಳಾಗಿ ಬದಲಾಗಿದ್ದಾರೆಂದು ಭಾವಿಸಿದರು. ಅಂದಿನಿಂದ ಈ ಇಲಿಗಳನ್ನು ಕರ್ಣಿಮಾತಾ ಸಮಾನವಾಗಿ ಪೂಜಿಸಲು ಆರಂಭಿಸಿದರು.

4. కథలకు నెలవు కర్ణిమాత

ಇನ್ನೊಂದು ಕಥೆಯೂ ಪ್ರಚಲಿತದಲ್ಲಿದೆ. 20 ಸಾವಿರ ಮಂದಿ ಶಕ್ತಿಶಾಲಿಯಾದ ಸೈನ್ಯ ಒಂದಾನೊಂದು ಯುದ್ಧದಲ್ಲಿ ಸೋತು ಹೋಗಿ, ಓಡಿ ಹೋಗಿ ದೇಶ್ನೋಕ್ ಗ್ರಾಮಕ್ಕೆ ತಲುಪಿತು. ಆ ಪ್ರದೇಶಕ್ಕೆ ಬಂದ ಬಳಿಕ ಯುದ್ದದಿಂದ ಓಡಿಹೋಗುವುದು ಮಹಾಪಾಪ ಎಂದು ಅದಕ್ಕಿಂತಲೂ ಮರಣಿಸುವುದೇ ಉತ್ತಮ ಎಂದು ತಿಳಿದುಕೊಂಡ ಅವರು ತಮಗೆ ತಾವೇ ಮರಣ ಶಿಕ್ಷೆ ವಿಧಿಸಿಕೊಂಡರು. ಕರ್ಣಿಮಾತೆ ಆತ್ಮಹತ್ಯೆ ದೋಷ ಹೋಗಲು ಈ ಆಲಯದಲ್ಲಿ ಇಲಿಗಳಾಗಿ ಇರಬೇಕೆಂದು ಹೇಳಿದರಂತೆ. ಸೈನಿಕರೆಲ್ಲಾ ಕರ್ಣಿ ಮಾತೆಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿ ಅಲ್ಲೇ ಇದ್ದು ಬಿಟ್ಟರಂತೆ. ಆ ರೀತಿ ಮಾನವರೇ ಇಲಿಗಳಾಗಿ ಪುನರ್ಜನ್ಮ ಪಡೆದದ್ದಾಗಿ ಹೇಳುತ್ತಾರೆ. ಇಲ್ಲಿನ ಇಲಿಗಳ ಹಿಕ್ಕೆ, ಮತ್ತವುಗಳಿಂದ ಯಾವುದೇ ವಾಸನೆ ಬಾರದೆ ಇರುವುದು ವಿಚಿತ್ರ. ಇಲ್ಲಿನ ಭಕ್ತರಿಗೆ ಇಲಿಗಳು ಓಡಾಡಿದ ಪ್ರಸಾದವನ್ನೇ ನೀಡುತ್ತಾರೆ.

5. ఆలయం వద్ద దాదాపు 20 వేల ఎలుకలు తిరుగాడుతుండటం వెనక మరో జానపద కథ కూడా వినిపిస్తుంది.

ಸಾವಿರಾರು ಕಪ್ಪು ಇಲಿಗಳ ನಡುವೆ ಕೆಲವು ಬಿಳಿ ಇಲಿಗಳು ಕಾಣಿಸುವುದರ ಹಿಂದೆಯೂ ಒಂದು ಕತೆ ಇದೆ. ಕರ್ಣಿಮಾತೆಗೆ ಮೂವರು ಮಕ್ಕಳು ಜನಿಸಿ ಮೃತಪಟ್ಟರು. ಹಾಗಾಗಿ ಆಕೆ ತನ್ನ ಗಂಡನಿಗೆ ಸ್ವಂತ ತಂಗಿಯನ್ನೇ ಕೊಟ್ಟು ಮದುವೆ ಮಾಡಿದರು. ಅವರ ಮಗ ಒಂದು ಸಲ ಆಟವಾಡಿಕೊಳ್ಳುತ್ತಾ ಕಪಿಲ್ ಸರೋವರದಲ್ಲಿ ಬಿದ್ದು ಮೃತಪಟ್ಟ. ಕರ್ಣಿಮಾತೆ ಆ ಮಗುವಿಗೆ ಪ್ರಾಣ ನೀಡಬೇಕೆಂದು ಯಮನನ್ನು ಬೇಡಿಕೊಂಡಳು. ಯಮನು ಆಕೆಯ ಪ್ರಾರ್ಥನೆಗೆ ಕರಗಲಿಲ್ಲ. ಕರ್ಣಿಮಾತೆ ದುರ್ಗಾದೇವಿ ಅನುಗ್ರಹದಿಂದ ಆ ಮಗನನ್ನು ಬದುಕಿಸಿಕೊಂಡಳು. ಅಷ್ಟೇ ಅಲ್ಲ ಆ ಕುಮಾರನ ಜತೆ ಆಕೆಯ ಉಳಿದ ಮೂವರು ಮಕ್ಕಳೂ ಮತ್ತೆ ಬದುಕಿದರು. ಈ ಆಲಯದಲ್ಲಿ ಕಾಣಿಸುವ ನಾಲ್ಕು ಬಿಳಿ ಇಲಿಗಳು ಕರ್ಣಿಮಾತೆ ಮಕ್ಕಳಂತೆ. ಆ ನಾಲ್ಕು ಇಲಿಗಳು ಕಾಣಿಸಿದವರಿಗೆ ಕರ್ಣಿ ಮಾತೆ ಸಂಪೂರ್ಣ ಆಶೀರ್ವಾದ ಲಭಿಸಿದಂತೆ ಎಂಬುದು ಭಕ್ತರ ನಂಬಿಕೆ. ಈ ಆಲಯದಲ್ಲಿ ಅಕಸ್ಮಾತ್ ಆಗಿ ಯಾರಿಂದಲಾದಲಾದರೂ ಇಲಿ ಸತ್ತರೆ ಅವರು ಅಷ್ಟೇ ತೂಕ ಇರುವ ಬೆಳ್ಳಿ ಇಲಿಯನ್ನು ಆಲಯಕ್ಕೆ ನೀಡಿ ದೋಷವನ್ನು ನಿವಾರಿಸಿಕೊಳ್ಳಬಹುದು.

6. తెల్లని ఎలుకలు దేవతాస్వరూపాలు...

7. వెండి ఎలుక


Click Here To Download Kannada AP2TG App From PlayStore!