ಜಗತ್ತಿನಲ್ಲೇ ಅತ್ಯಂತ ದುಬಾರಿ ವೋಡ್ಕಾ ಬಾಟಲ್ ಕದ್ದ ಕಳ್ಳರು! ಅದರ ಬೆಲೆ ಗೊತ್ತಿದ್ದೇ…ಕಳ್ಳಲು ಕದ್ದೊಯ್ದರು!

ಈ ಫೋಟೋದಲ್ಲಿ ಕಾಣಿಸುತ್ತಿರುವುದು ಏನು ಅಂತ ಥಟ್ ಅಂತ ಕಂಡುಹಿಡಿಯುವುದು ಕಷ್ಟ. ಅದೊಂದು ವೋಡ್ಕಾ ಬಾಟಲ್. ಜಗತ್ತಿನಲ್ಲೇ ಅತ್ಯಂತ ಬೆಲೆಬಾಳುವ ವೋಡ್ಕಾ ಬಾಟಲ್ ಅದು. ಅದರ ಬೆಲೆ ನಮ್ಮ ದೇಶದ ಕರೆನ್ಸಿಯಲ್ಲಾದರೆ 8 ಕೋಟಿ 25 ಲಕ್ಷ ರೂಪಾಯಿಗಳು.

ಈ ಬಾಟಲ್ ಡೆನ್ಮಾರ್ಕ್ ರಾಜಧಾನಿ ಕೋಪೆನ್ ಹೆಗೆನ್‍ನಲ್ಲಿ ಇರುವ ಕೇಫ್ 33 ಎಂಬ ರೆಸ್ಟೋರೆಂಟ್‌ನಲ್ಲಿ ಇಷ್ಟು ದಿನ ಕಾಣಿಸುತ್ತಿತ್ತು. ಈಗದು ಮಾಯವಾಗಿದೆ. ಬುಧವಾರ ಅಪರಿಚಿತರು ಈ ಬಾಟಲನ್ನು ಕದ್ದಿದ್ದಾರೆ. ಈ ಬಗ್ಗೆ ಕೋಪೆನ್ ಹೆಗೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಕ್ಕೂ ಈ ಬಾಟಲ್ ಯಾಕಿಷ್ಟು ದುಬಾರಿ ಎಂಬ ಅನುಮಾನ ಬಂತೆ?

ಇದರ ತೂಕ ಮೂರು ಕೆಜಿ. ಬಂಗಾರದಲ್ಲಿ ತಯಾರಿಸಿದ್ದಾರೆ. ಅಷ್ಟೇ ಪ್ರಮಾಣದ ಬೆಳ್ಳಿಯನ್ನೂ ಸಹ ಬಳಸಲಾಗಿದೆ. ಇದರ ಸುತ್ತಲೂ ವಜ್ರಗಳನ್ನು ಹುದುಗಿಸಲಾಗಿದೆ. ಈ ವೋಡ್ಕಾ ಬಾಟಲ್ ರಷ್ಯಾ ಮೂಲದ ಡಾರ್ಟ್ಜ್ ಮೋಟೋರ್ಜ್ ತಯಾರಿಸಿದೆ. ಕೇಫ್ 33 ಬಾರ್‌ಗೆ ಒಂದು ವಿಶೇಷತೆ ಇದೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ವೋಡ್ಕಾ ಕಲೆಕ್ಷನ್ ಸೆಂಟರ್ ಆಗಿ ಅದಕ್ಕೆ ಹೆಸರಿದೆ.


Click Here To Download Kannada AP2TG App From PlayStore!