ಮೂರು ವರ್ಷವಾದರೂ…ಪುಟ್ಟ ಮಗುವಿಗೆ ಜನ್ಮಕೊಟ್ಟ ಪೋಲಿಸ್ ಆಫೀಸರ್ ಹೆಂಡತಿ.. ಅದು ಹೇಗೆ? ತಿಳಿಯಿರಿ

ಹೇಗೋ ಏನೋ ಈ ವಿಚಿತ್ರ!! ಮೂರು ವರ್ಷದ ನಂತರ ಇದು ಹೇಗೆ ಸಾಧ್ಯ ಅಂದು ಕೊಳ್ಳುತ್ತಿದ್ದೀರಾ? ಹಾಗಾದರೆ ಇದನ್ನು ನೋಡಿ!!2014ರಲ್ಲಿ ನ್ಯೂಯಾರ್ಕ್ ಪೋಲಿಸ್ ಡಿಪಾರ್ಟ್’ಮೆಂಟ್ ಅಧಿಕಾರಿ ಹತ್ಯೆ ಆದನು. 2017ರಲ್ಲಿ ಅಂದರೆ ಎರಡುವರೆ ವರ್ಷದ ನಂತರ ಹೆಂಡತಿ, ಆತನ ಮಗುವಿಗೆ ತಾಯಿಯಾದಳು. ಈ ಘಟನೆ ನ್ಯೂಯಾರ್ಕ್’ನಲ್ಲಿ ಕಾಣಿಸಿಕೊಂಡಿದೆ. ಪ್ರಪಂಚ ವೈದ್ಯಶಾಸ್ತ್ರದಲ್ಲಿ ಈ ಘಟನೆ ಅದ್ಭುತವನ್ನು ಸೃಷ್ಟಿಸಿದೆ. ಅದು ಹೇಗೋ ತಿಳಿದುಕೊಳ್ಳಲು ಈ ವೀಡಿಯೋವನ್ನು ನೀವು ನೋಡ ಬೇಕಾದದ್ದೇ..

ಇನ್ನೂ ವಿವರಗಳಿಗೆ ಹೋದರೆ..ಡಿಸೆಂಬರ್ 2014ನಲ್ಲಿ ನ್ಯೂಯಾರ್ಕ್ ಪೋಲೀಸ್ ಅಧಿಕಾರಿ ವೆಂಜಿಯಾಸ್ ಲಿಯೂ, ಆತನ ಸಹ ಅಧಿಕಾರಿ ರಫಾಲೆ ರಾಮೋಸ್’ನ ಜೊತೆಗೆ ಸೇರಿ ಪೆಟ್ರೋಲಿಂಗ್ ಕಾರಿನಲ್ಲಿ ಪ್ರಯಾಣಿಸುತ್ತಿರ ಬೇಕಾದರೆ ಲಿಯೂ ಹತ್ಯೆಯಾದನು. ರಫಾಲೆ ಕೂಡ ಕೊಲೆಗಡುಕರ ಕೈಯಲ್ಲಿ ಬಲಿಯಾದನು. ಮೊದಲ ಏಷಿಯನ್ ಅಮೇರಿಕನ್ ಪೋಲಿಸ್ ಆಫೀಸರ್ ಆಗಿ ನಿಂತನು ಲಿಯೊ… ಈ ಕ್ರಮದಲ್ಲಿ ಲಿಯೂ ಮೃತದೇಹವು ಆಸ್ಪತ್ರೆಯಲ್ಲಿ ಇರುವ ಸಮಯದಲ್ಲಿ ಆತನ ವೀರ್ಯಾಣುಗಳನ್ನು ತೆಗೆದು ಭದ್ರ ಪಡಿಸಬೇಕೆಂದು ಹೆಂಡತಿ ಪಿಯಾಕ್ಸಿಯಾಚೆನ್ ವೈದ್ಯರನ್ನು ಕೋರಿದಳು.

ಹೆಂಡತಿಯ ಕೋರಿಕೆಯ ಮೇಲೆ ಪೋಲಿಸ್ ಆಫೀಸರ್ ಲಿಯೂ ಮೃತದೇಹದಿಂದ ವೀರ್ಯಾಣುವನ್ನು ಶೇಕರಿಸಿದ ಡಾಕ್ಟರ್’ಗಳು ಅದನ್ನು ಭದ್ರಪಡಿಸಿದರು. ಹೆಚ್ಚು ಕಡಿಮೆ ಒಂದೂವರೆ ವರ್ಷದ ನಂತರ ,ಆಕೆ ಅದೇ ವೀರ್ಯಾಣಿನಿಂದ ಕೃತ್ರಿಮ ಗರ್ಭಧಾರಣೆ ಪದ್ಧತಿಯನ್ನು ಅನುಸರಿಸಿ ಗರ್ಭ ಧರಿಸಿದಳು. ತಾಜಾವಾಗಿ ಮಂಗಳವಾರದ ದಿನ ಅಂದರೆ, ಗಂಡ ತೀರಿಹೋದ ಎರಡೂವರೆ ವರ್ಷದ ನಂತರ , ನ್ಯೂಯಾರ್ಕ್ ಪ್ರೆಸ್ಬಿಟೇರಿಯನ್ ಹಾಸ್ಪಿಟಲ್’ನಲ್ಲಿ ಪುಟ್ಟ ಮಗುವಿಗೆ ಜನ್ಮ ನೀಡಿದಳು.

ಇದಕ್ಕೆ ಲಿಯೂ ತಂದೆ ತಾಯಿಯರು ಮಾತನಾಡುತ್ತಾ, ‘ತನ್ನ ಮಗನನ್ನು ಕಳೆದುಕೊಂಡ ಭಾದೆಯಲ್ಲಿದ್ದ ನಮಗೆ.., ಮೊಮ್ಮಗಳು ಹುಟ್ಟುವುದು ಎಷ್ಟೋ ಸಂತೋಷವನ್ನು ಕೊಟ್ಟಿದೆ’ ಎಂದರು‌. ಲಿಯೂ ಇಲ್ಲದ ಮೂರು ವರ್ಷ ಹೆಚ್ಚು ಭಾದೆಯನ್ನು ಅನುಭವಿಸಿದ್ದೇವೆ..,ತಮ್ಮ ಸೊಸೆ ಪಾಪುವನ್ನು ತಮ್ಮ ಕೈಯಲ್ಲಿ ಇಟ್ಟಿದ್ದಾಳೆಂದು, ಆ ಮಗುವಿನ ಮುಖದಲ್ಲಿ ಲಿಯೂನನ್ನು ನೋಡಿ ಕೊಳ್ಳುತ್ತೇವೆಂದು ಆವೇಧನೆಯನ್ನು ವ್ಯಕ್ತ ಪಡಿಸಿದರು.

ಇದು ಬಿಟ್ಟರೆ ಕಾರ್ಯಗಳಲ್ಲಿ ಇರುವಾಗ ಮರಣಿಸಿದ ಮೊದಲ ಏಷಿಯನ್ ಅಮೇರಿಕನ್ ಪೋಲಿಸ್ ಆಫೀಸರ್ ಆಗಿ ಲಿಯೂ ನಿಂತಿರುವುದು ಗಮನಾರ್ಹ. ಅವರ ಅಂತ್ಯಕ್ರಿಯೆಗೆ ಸಾವಿರಾರು ಜನ ಪೋಲೀಸರು ಹಾಜರಾಗಿದ್ದರು. ತಾಜಾವಾಗಿ ಲಿಯೂ ಮಗಳಿಗೆ ಪೋಲೀಸರ ಟೋಪಿಯನ್ನು ಧರಿಸಿದ ಫೋಟೋಗಳನ್ನು ನ್ಯೂಯಾರ್ಕ್ ಪೋಲಿಸ್ ಶಾಖೆ ಬಿಡುಗಡೆ ಮಾಡಿದೆ. ಜೂನಿಯರ್ ಲಿಯೂ ಹುಟ್ಟಿದಳೆಂದು ಸೋ‌ಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಬಿಡುಗಡೆ ಮಾಡಿದರು. ಈ ಫೋಟೋಗಳು ಈಗ ವೈರಲ್ ಆಗುತ್ತಿದೆ‌.

ಸಂತಾನ ಎನ್ನುವುದು ಯಾವ ದೇಶದಲ್ಲಾದರೂ ಪ್ರತಿ ಸ್ತ್ರೀಗೆ ಒಂದು ತುಂಬಿಕೆಯನ್ನು, ಪರಿಪೂರ್ಣತೆಯನ್ನು ಕೊಡುತ್ತದೆ…
ಗಂಡ ವೀರಮರಣ ಹೊಂದಿದನು, ಆದರೂ ತನ್ನ ಮನೋಬಲವನ್ನು ಮಾತ್ರ ಬಿಡದೇ ತನ್ನ ಗುರಿಯನ್ನು ಮುಟ್ಟಿದಳು ಆಕೆ. ಗಂಡನ ಅಂಶವನ್ನು ತನ್ನ ಹೊಟ್ಟೆಯಲ್ಲಿ ಹೊತ್ತು ಕೊನೆಗೆ ತನ್ನ ಗಂಡನನ್ನು ಆ ಮಗುವಿನ ರೂಪದಲ್ಲಿ ಮತ್ತೆ ಪಡೆದು, ಹ್ಯಾಟ್ಸ್ ಆಫ್ ಟೂ ಪಿಯಾಕ್ಸಾಯಾಚೆನ್..

 


Click Here To Download Kannada AP2TG App From PlayStore!