ಈ 6 ಮಂದಿ ಹೀರೋಯಿನ್‌ಗಳ “ಮಂಗಳಸೂತ್ರ (ತಾಳಿ)” ಬೆಲೆ ಎಷ್ಟು ಅಂತ ಗೊತ್ತಾದರೆ ಶಾಕ್ ಆಗ್ತೀರ..! ಎಲ್ಲರಿಗಿಂತ ಯಾರದು ದುಬಾರಿ?

“ಮಾಂಗಲ್ಯಂ ತಂತುನಾನೇನಾ ಮಮಜೀವನ ಹೇತುನಾ! ಕಂಠೇ ಭದ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಃ!!”

ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಕಾರ್ಯಕ್ರಮದಲ್ಲಿ ಮಾಂಗಲ್ಯಧಾರಣೆಗೆ ಅತ್ಯಂತ ಪ್ರಾಮುಖ್ಯತೆ ಇದೆ. ಮಾಂಗಲ್ಯಕ್ಕೆ ಮಂಗಳಸೂತ್ರ, ತಾಳಿ, ತಾಳಿಬೊಟ್ಟು, ಪುಸ್ತೆ, ಶತಮಾನ ಎಂಬ ಹೆಸರುಗಳೊಂದಿಗೆ ಬೇರೆಬೇರೆ ಕಡೆ ನಾನಾ ರೀತಿಯ ರೂಪಗಳು ಇವೆ. ವಯಸ್ಸಿಗೆ ಬಂದವರಿಗೆ ಮದುವೆ ಎಷ್ಟು ಮುಖ್ಯವೋ… ಮದುವೆಗೆ ತಾಳಿ ಸಹ ಅಷ್ಟೇ ಮುಖ್ಯ. ವಿವಾಹ ಸಮಯದಿಂದ ಮಹಿಳೆಯರು ಮಂಗಳಸೂತ್ರ ಧರಿಸುವುದು ಭಾರತೀಯ ಸಂಪ್ರದಾಯ.

ಮಂಗಳಸೂತ್ರ ಎಂಬ ಶಬ್ದ ಸಂಸ್ಕೃತದಿಂದ ಹುಟ್ಟಿದೆ. ಸಂಸ್ಕೃತದಲ್ಲಿ ’ಮಂಗಳ’ ಎಂದರೆ ಶೋಭಾಯಮಾನ, ಶುಭಪ್ರದ ಎಂಬ ಅರ್ಥಗಳು ಇವೆ. ಸೂತ್ರ ಎಂದರೆ ದಾರ, ಆಧಾರವಾಗಿರುವುದು ಎಂದರ್ಥ. ಸಾಮಾನ್ಯವಾಗಿ ಮಂಗಳಸೂತ್ರವನ್ನು 108 ಚಿಕ್ಕ ಎಳೆಗಳು, ದಾರಗಳನ್ನು ಸೇರಿಸಿ ಅದಕ್ಕೆ ಅರಿಶಿಣ ಹಚ್ಚಿ ತಯಾರಿಸುತ್ತಾರೆ. ಈ ರೀತಿ ಸೇರಿಸಿದ ಒಂಬತ್ತು ಅಥವಾ ಹನ್ನೊಂದು ಬೆರೆಸಿ ಸಹ ಕೆಲವರು ತಾಳಿಯನ್ನು ತಯಾರಿಸುತ್ತಾರೆ.

ತಾಳಿ ಎಂದರೆ ಅರಿಶಿಣ ದಾರಕ್ಕೆ ಹೆಚ್ಚಿನ ಮಹತ್ವ. ಆದರೆ ಕೆಲವರು ತಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಬಂಗಾರದಿಂದ ಮಾಡಿಸಿಕೊಳ್ಳುತ್ತಾರೆ. ಅದೂ ಸಹ ಈಗ ನಾನಾ ವಿನ್ಯಾಸಗಳಲ್ಲಿ ಲಭಿಸುತ್ತಿವೆ. ಹಾಗಿದ್ದರೆ ಸೆಲೆಬ್ರಿಟಿಗಳ ತಾಳಿಯನ್ನು ಯಾವುದರಿಂದ ಮಾಡಿಸಿಕೊಳ್ಳುತ್ತಾರೆ. ಅವುಗಳ ಬೆಲೆ ಎಷ್ಟು.. ಎಂಬ ಸಂದೇಹ ಎಂದಾದರೂ ಬಂದಿತ್ತಾ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಾಲಿವುಡ್ ಸ್ಟಾರ್ ಹೀರೋಯಿನ್‍ಗಳ ಮಂಗಳಸೂತ್ರ ಹಾಟ್ ಟಾಪಿಕ್ ಆಗಿ ಬದಲಾಗಿದೆ. ಅವುಗಳ ಬೆಲೆ ಗೊತ್ತಾದರೆ ಮೂಗಿನ ಮೇಲೆ ಬೆರಳಿಡುತ್ತೀರ. ವಜ್ರಖಚಿತ ಮಂಗಳ ಸೂತ್ರ ಎಂದರೆ ಸುಮ್ಮನೇನಾ..


Click Here To Download Kannada AP2TG App From PlayStore!