ಪರ್ಸ್/ಲಗೇಜ್ ಬಿಡಲ್ಲ ಎಂದು… ಅಕೆ ಸಹ X-Ray Scannerನಲ್ಲಿ ತೂರಿದಳು.! ಬಳಿಕ ಏನಾಯಿತು ಗೊತ್ತಾ..?

ಪ್ರಯಾಣಿಸುವಾಗ ಯಾರಿಗೇ ಆಗಲಿ ತಮ್ಮ ಲಗೇಜ್ ಎಂದರೆ ಅಷ್ಟೆಲ್ಲಾ ಭಯ ಇರುತ್ತದೆ ಬಿಡಿ. ಲಗೇಜ್ ಎಲ್ಲಿ ಮಿಸ್ ಆಗುತ್ತೇವೋ ಎಂದುಕೊಂಡು ಗಾಬರಿ ಬೀಳುತ್ತಾರೆ. ಆ ಗಾಬರಿಯಲ್ಲೇ ಭಯ ಸಹ ಆಗುತ್ತದೆ. ಇದರಿಂದಾಗಿ ಲಗೇಜ್ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಆ ರೀತಿ ಮಾಡುವುದರಿಂದ ಕಳ್ಳರು ಯಾರೂ ಲಗೇಜನ್ನು ಕದಿಯುವ ಅವಕಾಶ ಇರುವುದಿಲ್ಲ ಎಂದು ಭಾವಿಸುತ್ತಾರೆ. ಇನ್ನು ಅಂತಹ ಲಗೇಜ್‌ನಲ್ಲಿ ತುಂಬಾ ಬೆಲೆಬಾಳುವ ವಸ್ತುಗಳಿದ್ದರೆ..? ಹೌದು ಆ ಲಗೇಜನ್ನು ತೆಗೆದುಕೊಂಡು ಹೋಗುವವರಿಗೆ ತುಂಬಾ ಭಯ.. ಆಗ ಅವರ ಪಾಡು ಹೇಳತೀರದು. ಚೀನಾದಲ್ಲೂ ಮಹಿಳೆಯೊಬ್ಬರು ಇಂತಹದ್ದೇ ಸಮಸ್ಯೆಯನ್ನು ಎದುರಿಸಿದಳು. ಇಷ್ಟಕ್ಕೂ ನಡೆದದ್ದೇನೆಂದರೆ..

ಚೀನಾದಲ್ಲಿನ ಗುವಾಂಗ್‍ಡಾಂಗ್ ಪ್ರಾವಿನ್ಸ್‌ನ ಡೊಂಗುವನ್ ಎಂಬ ಪ್ರದೇಶದಲ್ಲಿ ಇರುವ ಮಹಿಳೆ ಇದೇ ತಿಂಗಳ 11ರಂದು ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ಹೋದರು. ಇನ್ನೊಂದು 5 ದಿನಗಳಲ್ಲಿ ಚೀನಾದಲ್ಲಿ ಲೂನಾರ್ ಹೊಸ ವರ್ಷ ಬರುತ್ತದೆ. ಇದರಿಂದ ರೈಲ್ವೆ ಸ್ಟೇಷನ್‌ನಲ್ಲಿ ಜನಜಂಗುಳಿ ಜಾಸ್ತಿ ಇತ್ತು. ಆದರೆ ಅಲ್ಲಿನ ಪ್ರಯಾಣಿಕರು ಒಳಗೆ ಹೋಗಬೇಕಾದರೆ ತಮ್ಮ ಲಗೇಜನ್ನು ಎಕ್ಸ್‌ರೇ ಮೆಷಿನ್‌ ಒಳಗೆ ಕಳುಹಿಸಿ ಸೆಕ್ಯುರಿಟಿ ಚೆಕಿಂಗ್ ಮಾಡಿಸಿಕೊಳ್ಳಬೇಕು. ಆಗ ಸ್ಟೇಷನ್ ಒಳಗೆ ಅನುಮತಿ ನೀಡುತ್ತಾರೆ. ಆದರೆ ಓರ್ವ ಮಹಿಳೆ ಮಾತ್ರ ವಿಚಿತ್ರವಗಿ ನಡೆದುಕೊಂಡಳು. ಲಗೇಜ್ ಸ್ಕ್ಯಾನ್ ಮಾಡುವ ಎಕ್ಸ್‌ರೇ ಮೆಷಿನ್ ಒಳಗೆ ಆಕೆ ಸಹ ಹೋದಳು.

ಆ ಮಹಿಳೆ ತನ್ನ ಲಗೇಜನ್ನು ಎಕ್ಸ್‌ರೇ ಮೆಷಿನ್‌ಗೆ ಹಾಕಿ ಬಳಿಕ ಲಗೇಜ್ ಜತೆಗೆ ತಾನೂ ಸಹ ಸ್ಕ್ಯಾನಿಂಗ್ ಮೆಷಿನ್‌ನಲ್ಲಿ ತೂರಿದಳು. ಬಳಿಕ ತನ್ನ ಲಗೇಜನ್ನು ಎಚ್ಚರಿಕೆಯಿಂದ ನೋಡುತ್ತಾ ಹೊರಗೆ ಬಂದಳು. ಆ ರೀತಿ ಬಂದ ಬಳಿಕ ತನ್ನ ಲಗೇಜ್ ತೆಗೆದುಕೊಂಡು ಹೊರಟು ಹೋದಳು. ಆಕೆಯನ್ನು ನೊಡಿದ ಭದ್ರತಾ ಸಿಬ್ಬಂದಿ ಶಾಕ್ ಆದರು. ಆಕೆ ಎಕ್ಸ್‌ರೇ ಮೆಷಿನ್‍ನಲ್ಲಿದ್ದಾಗ ಅದನ್ನು ಹೊರಗೆ ನೋಡಿದವರು ಶಾಕ್ ಆದರು. ಅಷ್ಟು ಭಯಾನಕವಾಗಿತ್ತು. ಅದು ಒಂದು ದೆವ್ವದಂತೆ ಕಾಣಿಸುತ್ತಿತ್ತು. ಎಕ್ಸ್‌ರೇಯಲ್ಲಿ ಮನುಷ್ಯ ಇದ್ದರೆ ಅವರ ಚಿತ್ರ ಹಾಗೆಯೇ ಕಾಣಿಸುತ್ತದೆ ಅಲ್ಲವೇ. ಆದರೆ ಈ ಅಚಾನಕ್ ಘಟನೆಯಿಂದ ಸೆಕ್ಯುರಿಟಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ಬಳಿಕ ಆ ಮೆಷಿನ್‌ನಲ್ಲಿ ಯಾರೂ ಹೋಗದಂತೆ ಭದ್ರತೆ ಹೆಚ್ಚಿಸಿದರು. ಅದೇನೇ ಇರಲಿ ಲಗೇಜ್‌ಗಾಗಿ ಆ ಮಹಿಳೆ ಇಷ್ಟೆಲ್ಲಾ ಸಾಹಸ ಮಾಡಿದ್ದಾರೆ. ಇಷ್ಟಕ್ಕೂ ಆಕೆ ಬ್ಯಾಗ್‌ನಲ್ಲಿ ಏನಿತ್ತು? ಎಂಬ ಸಂಗತಿ ಮಾತ್ರ ಯಾರಿಗೂ ಗೊತ್ತಾಗಿಲ್ಲ. ಅದೇನೋ ಬೆಲೆಬಾಳುವುದೇ ಇರುತ್ತದೆ. ಹಾಗಾಗಿಯೇ ಆಕೆ ತನ್ನ ಬ್ಯಾಗನ್ನು ಆ ರೀತಿ ಮಾಡಿದಳು…ಎಂದು ಬಹಳಷ್ಟು ಮಂದಿ ಭಾವಿಸಿದ್ದಾರೆ. ನಿಜವಾಗಿ ಈ ಘಟನೆ ತುಂಬಾ ಶಾಕಿಂಗ್ ಅನ್ನಿಸುತ್ತದೆ ಅಲ್ಲವೇ..?

A woman climbed into security inspection machine with her handbag, to prevent theft.

LMAO! A woman climbed into security inspection machine with her handbag, to prevent THEFT.Feb 11th, railway station inspectors in Dongguan found a woman climb into the security inspection machine. She explained this is to protect her handbag from theft.

Posted by PearVideo on Tuesday, February 13, 2018


Click Here To Download Kannada AP2TG App From PlayStore!