ಹಾವು ಕಚ್ಚಿದರೂ ಇನ್ನು ಮುಂದೆ ಯಾರೂ ಸಾಯಲ್ಲ..! ಅಂತಹ ಐಡಿಯಾ ಕಂಡುಹಿಡಿದರು ಆ ಪ್ರೊಫೆಸರ್..!

ಜಗತ್ತಿನಾದ್ಯಂತ ಪ್ರತಿವರ್ಷ ಸುಮಾರು 50 ಲಕ್ಷ ಮಂದಿ ಹಾವು ಕಡಿತಕ್ಕೆ ಗುರಿಯಾಗುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ ಎರಡು ಲಕ್ಷ ಎಂದು ಅಂದಾಜು… ನಮ್ಮ ದೇಶದಲ್ಲಿ ಸುಮಾರು 250 ವಿಧದ ಹಾವುಗಳಿದ್ದರೂ ಅವರುಗಳಲ್ಲಿ 52 ವಿಷ ಸರ್ಪಗಳು ಇವೆ. ಅತ್ಯಂತ ವಿಷಕಾರಿ ಹಾವುಗಳಲ್ಲಿ 5 ಇವೆ. ಅವು ಕಚ್ಚಿದರೆ ಮ್ಯಾಗ್ಜಿಮಮ್ 3 ಗಂಟೆಗಳಲ್ಲಿ ಸಾಯುತ್ತಾರೆ…ಏನಾದರೂ ಪ್ರಥಮ ಚಿಕಿತ್ಸೆ ಮಾಡಿದರೆ 3 ಗಂಟೆಗಳ ಒಳಗೆ ಮಾಡಬೇಕು, ಇಲ್ಲದಿದ್ದ ಹಾವು ಕಡಿದ ವ್ಯಕ್ತಿ ನಮಗೆ ಸಿಗಲ್ಲ. ಹಾವಿನ ಕಡಿತದಿಂದ ಯಾರೂ ಸಾಯಬಾರದು ಎಂದು ಪ್ರೊಫೆಸರ್ ಒಬ್ಬರು ಒಂದು ಐಡಿಯಾದಿಂದ ಮುಂದೆ ಬಂದರು!

rat-snake-fight

ಹಾವು ಕಡಿತದಿಂದ ದೇಹದಲ್ಲಿ ವಿಷ ಸೇರಿಕೊಂಡರೆ “ಆಂಟಿ ಸ್ನೇಕ್ ವೀನಮ್” ಬಿಟ್ಟರೆ ಇನ್ಯಾವ ವೈದ್ಯದಿಂದಲೂ ಬದುಕುವ ಅವಕಾಶ ಇಲ್ಲ. ಆದರೆ ದೇಶದಲ್ಲಿ ಆಂಟಿ ವೀನಮ್ ಸೌಲಭ್ಯಗಳು ಸೂಕ್ತ ರೀತಿಯಲ್ಲಿ ಇಲ್ಲ. ಇದರಿಂದ ಪ್ರತಿವರ್ಷ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಮುಖ್ಯವಾಗಿ ಗಿರಿಜನ ಪ್ರದೇಶಗಳಲ್ಲಿ… ಮರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಒಂದು ಉಪಾಯ ಕಂಡುಹಿಡಿದರು ಹಿಮಾಚಲ ಪ್ರದೇಶದ ಪ್ರೊಫೆಸರ್ ಡಾಕ್ಟರ್ ಒಮೇಶ್  ಕುಮಾರ್ ಭಾರತಿ.

ನಮ್ಮ ರಾಜ್ಯದಲ್ಲಿ ಪರಿಚಿತವಾದ 108 ನಂತಹ ಎಮರ್ಜೆನಿಸ್ ಆಂಬ್ಯುಲೆನ್ಸ್‌ನಲ್ಲಿ ಆಂಟಿ ಸ್ನೇಕ್ ವೀನಮ್‌ ಲಭ್ಯವಾಗುವಂತೆ ಇಟ್ಟರೆ…ಅಪಾಯದಿಂದ ಬಹಳಷ್ಟು ಮಂದಿಯನ್ನು ಕಾಪಾಡುವ ಶಕ್ತಿ ಇದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಹಾವಿನ ಕಡಿತಕ್ಕೆ ಗುರಿಯಾದ ವ್ಯಕ್ತಿಯನ್ನು ಗಂಟೆಯೊಳಗೆ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ಪ್ರಾಣವನ್ನು ಕಾಪಡುವ ಅವಕಾಶ ಇದೆ. ಆದರೆ ನಮ್ಮಲ್ಲಿ ಆಂಬ್ಯುಲೆನ್ಸ್‌ನಲ್ಲಿ ಈ ಅವಕಾಶ ಇಲ್ಲ. ಇದರ ಬಗ್ಗೆ ಸರಕಾರಕ್ಕೂ ಸಮಗ್ರ ದೃಷ್ಟಿಕೋನ ಇಲ್ಲ. ಈ ವಿಷಯವನ್ನು ಗಮನಿಸಿದ ಒಮೇಶ್ ಕುಮರ್… ಹಿಮಾಚಲ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಈ ವಿಧಾನವನ್ನು ಜಾರಿಗೆ ತಂದರು. ಒಂದು ವರ್ಷದಲ್ಲಿ 42 ಮಂದಿ ಪ್ರಾಣ ಕಾಪಾಡಿದರು. ಇದರ ಬಗ್ಗೆ ಒಂದು ಸಂಶೋಧನಾ ಪತ್ರವನ್ನು ಇಂಡಿಯನ್ ಜರ್ನಲ್ ಆಫ್ ಅಪ್ಲೈಡ್ ರೀಸರ್ಚ್ -2015ಕ್ಕೆ ಸಲ್ಲಿಸಿದರು. ಅದು ದೇಶದಾದ್ಯಂತ ಅಷ್ಟೇ ಅಲ್ಲದೆ..ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಸಹ ಇದನ್ನು ಪ್ರಶಂಸಿತು. ಈ ವಿಷಯವನ್ನು ಕಳೆದ ವರ್ಷ ಜೆನೀವಾದಲ್ಲಿ ನಡೆದ ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಶೃಂಗದಲ್ಲಿ ಪ್ರಸ್ತಾಪಿಸದರು. ಆ ವಿವರಗಳನ್ನು ಕೇಂದ್ರ ಸರಕಾರ ಸಹ ತೆಗೆದುಕೊಂಡಿದೆ. ಹಾವು ಕಚ್ಚುವುದರಿಂದ ಆಗುವ ಸಾವಿನಲ್ಲಿ ನೂರಕ್ಕೆ ಶೇ.95ರಷ್ಟು ಸೂಕ್ತ ವೈದ್ಯಕೀಯ ಚಿಕಿತ್ಸೆ ಲಭಿಸುವುದಿಲ್ಲ.. ಆಂಬುಲೆನ್ಸ್‌ಗಳಲ್ಲಿ ಆಂಟಿ ಸ್ನೇಕ್ ವೀನಮ್ ಇರುವಂತೆ ನೋಡಿಕೊಂಡರೆ….ಈ ಮರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಡಾಕ್ಟರ್ ಒಮೇಶ್. ಈಗಾಗಲೆ ಇದು ಆಂಧ್ರದಲ್ಲಿ ಜಾರಿಯಾಗಿದೆ. ಹಾಗಾಗಿ ಸಾಕಷ್ಟು ಮಂದಿಯ ಪ್ರಾಣ ಉಳಿಸುವಂತಾಗಿದೆ.ನಮ್ಮ ರಾಜ್ಯದಲ್ಲಿ ಪರಿಚಿತವಾದ 108 ನಂತಹ ಎಮರ್ಜೆನಿಸ್ ಆಂಬ್ಯುಲೆನ್ಸ್‌ನಲ್ಲಿ ಆಂಟಿ ಸ್ನೇಕ್ ವೀನಮ್‌ ಲಭ್ಯವಾಗುವಂತೆ ಇಟ್ಟರೆ…ಅಪಾಯದಿಂದ ಬಹಳಷ್ಟು ಮಂದಿಯನ್ನು ಕಾಪಾಡುವ ಶಕ್ತಿ ಇದೆ ಎಂದು ಹೇಳಿದ್ದಾರೆ.


Click Here To Download Kannada AP2TG App From PlayStore!