34 ವರ್ಷಗಳಿಂದ. . . ರೈಲ್ವೇ ಸ್ಟೇಷನ್ ನಲ್ಲಿ ನಮಗೆ ಕೇಳಿಸುವ ಧ್ವನಿ ಇವರದೇ!ಯುವರ್ ಅಟೆನ್ಷನ್ ಪ್ಲೀಸ್.

ಯುವರ್ ಅಟೆನ್ಷನ್ ಪ್ಲೀಸ್… ದಯವಿಟ್ಟು ಕೇಳಿ… ಟ್ರೈನ್ ನಂಬರ್… ಸೂಪರ್ ಫಾಸ್ಟ್ ಎಕ್ಸ್ಪ್ರೆಸ್… ಇನ್ನು ಕೆಲವೇ ನಿಮಿಷಗಳಲ್ಲಿ 1 ನೇ ಫ್ಲಾಟ್ ಫಾರಂ ನಲ್ಲಿ ಬರಲಿದೆ. ಎಂಬುದಾಗಿ ಕೇಳಿಬರುವ ರೈಲ್ವೇ ಅನೌನ್ಸ್ ಮೆಂಟನ್ನು ಕೇಳದೇ ಇರುವವರು ಬಹುಶ ಯಾರೂ ಇರಲಾರರು. ಅದು ಅಷ್ಟು ಖ್ಯಾತಿಪಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜೋಕುಗಳು ಹಾಗು ಇತರೆ ವಿಷಯಗಳನ್ನೂ ನಾವು ಕೇಳಿದ್ದೇವೆ. ಆದರೆ ಈ ಅನೌನ್ಸ್ ಮೆಂಟ್ ಮಾಡುವ ಮಹಿಳೆಯ ಧ್ವನಿ ಯಾರದ್ದೆಂದು ನಿಮಗೆ ಗೊತ್ತೆ? ಆ ಮಹಿಳೆಯ ಕುರಿತಾಗಿಯೇ ಈಗ ನಾವು ಹೇಳಲು ಹೊರಟಿರುವುದು.
ಆ ಮಹಿಳೆಯ ಹೆಸರು ಸರಳಾ ಚೌದರಿ. ಈಗ ಅವರ ವಯಸ್ಸು 49 ವರ್ಷ.1982 ನೆ ಇಸವಿಯಲ್ಲಿಸೆಂಟ್ರಲ್ ರೈಲ್ವೇ ಅನೌನ್ಸರ್ ಉದ್ಯೋಗಕ್ಕೆ ಬಹಳಷ್ಟು ಮಹಿಳ ಅಭ್ಯರ್ಥಿಗಳು ಬಂದಿದ್ದರು. ಆ ಉದ್ಯೋಗಕ್ಕಾಗಿ ನಡೆಸುವ ಧ್ವನಿ ಪರಿಕ್ಷೆಗಾಗಿ ಸರಳಾ ಚೌದರಿಯೂ ಹೋಗಿದ್ದರು. ಇವರ ಧ್ವನಿಯನ್ನು ಕೇಳಿದ ಅಂದಿನ ಜನರಲ್ ಮ್ಯಾನೇಜರ್ ಅಶುತೋಶ್ ಬ್ಯಾನರ್ಜಿ ,ಚೌದರಿಯ ಧ್ವನಿಯನ್ನು ಮೆಚ್ಚಿಕೊಂಡು ಆ ಉದ್ಯೋಗಕ್ಕಾಗಿ ಶಿಫಾರಸು ಮಾಡಿದರು. ಇದರಿಂದಾಗಿ ಅಂದಿನಿಂದ ಸರಳಾ ಚೌದರಿ ರೈಲ್ವೇ ಅನೌನ್ಸರ್ ಆಗಿ ಕೆಲಸಮಾಡುತ್ತಿದ್ದಾರೆ. ಮೊದಲ ನಾಲಕ್ಕು ವರ್ಷಗಳು ತಾತ್ಕಾಲಿಕ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸಿದರೆ, ನಂತರ 1986 ರಲ್ಲಿ ಇವರ ಉದ್ಯೋಗವನ್ನು ಖಾಯಂಗೊಳಿಸಲಾಯಿತು.


ಈ ರೀತಿಯಾಗಿ ಎಷ್ಟೋ ವರ್ಷಗಳಕಾಲ ಸರಳಾ ಚೌದರಿಯ ಧ್ವನಿ ರೈಲ್ವೇ ಅನೌನ್ಸ್ ಮೆಂಟ್ ಗಳಲ್ಲಿ ಕೇಳಿಸುತ್ತಿತ್ತು. 1991 ರಲ್ಲಿ ಆಲಿಂಡಿಯಾ ರೇಡಿಯೋದಲ್ಲಿ ಅನೌನ್ಸ್ ಮೆಂಟ್ ಗಾಗಿ ಅವರ ಧ್ವನಿಯನ್ನು ರೆಕಾರ್ಡ್ ಮಾಡಲಾಯಿತು. ಆದರೆ,ಕಂಪ್ಯೂಟರ್ ಗಳಿಲ್ಲದ ಆ ಕಾಲದಲ್ಲಿ ಪ್ರತಿಯೊಂದು ಅನೌನ್ಸ್ ಮೆಂಟನ್ನೂ ಅವರು ಓದಿ ಹೇಳಬೇಕಾಗಿತ್ತು. ಕಂಪ್ಯೂಟರ್ ಬಂದ ನಂತರ ರೈಲ್ವೆ ಯಲ್ಲಿ ಟ್ರೈನ್ ಮ್ಯಾನೇಜ್ ಮೆಂಟ್ ಸಿಸ್ಟಂ( ಟಿಎಂಎಸ್) ಅಳವಡಿಸಿದರು. ಇದರಿಂದಾಗಿ ಸರಳಾ ಚೌದರಿ ಒಂದೇ ಸಾರಿ ತನ್ನ ಧ್ವನಿಯಲ್ಲಿ ಸಾವಿರಾರು ರೆಕಾರ್ಡ್ ಗಳನ್ನು ಮಾಡಿಕೊಟ್ಟರು.

watch video

ಅವುಗಳನ್ನು ರೈಲ್ವೇ ಇಲಾಖೆಯವರು ಭದ್ರವಾಗಿಟ್ಟುಕೊಂಡು ಟಿ ಎಂ ಎಸ್ ಮೂಲಕ ಸ್ವಯಂಚಾಲಿತ ಅನೌನ್ಸ್ ಮೆಂಟ್ ಬರುವ ಹಾಗೆ ಮಾಡಿದರು. ಆದರೆ,ಸರಳಾ ಚೌದರಿ ಕರ್ತವ್ಯ ನಿರ್ವಹಿಸಿದ 12 ವರ್ಷಗಳ ಉದ್ಯೋಗಕ್ಕೆ ರಾಜಿನಾಮೆಯಿತ್ತರು .ಆದರೂ ಇಂದಿಗೂ ಸಹ ರೈಲ್ವೇ ಅನೌನ್ಸ್ ಮೆಂಟ್ ಗಳಲ್ಲಿ ಅವರ ಧ್ವನಿ ಕೇಳಿಸುತ್ತಲೇ ಇದೆ. ಆ ಧ್ವನಿಯನ್ನು ಅವರೇ ಕೇಳುವಾಗ ಉದ್ವೇಗಕ್ಕೆ ಒಳಗಾಗುತ್ತಿರುತ್ತಾರೆ. ಏನೇ ಆಗಲಿ ರೈಲ್ವೇ ಅನೌನ್ಸ್ ಮೆಂಟ್ ಗಳಲ್ಲಿ ಅವರ ಮೃಧುವಾದ ಧ್ವನಿಯನ್ನು ಎಂದಿಗೂ ಯಾರೂ ಮರೆಯುವುದಿಲ್ಲ.


Click Here To Download Kannada AP2TG App From PlayStore!

Share this post

scroll to top