ಭೂಮಿ ಮೇಲೆ ಇದ್ದಾಗ್ಲೆ ಈ 2 ಋಣ ತೀರಿಸಿಕೊಂಡರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ.!?

ಹಿಂದೂ ಸಂಪ್ರದಾಯದಲ್ಲಿ ಭಕ್ತರಿಗೆ ಗೊತ್ತಿಲ್ಲದ ಆಚಾರ ವ್ಯವಹಾರ, ಪದ್ಧತಿಗಳು, ಸಂಸ್ಕಾರಗಳು ಬಹಳಷ್ಟು ಇವೆ. ಬಹಳಷ್ಟು ಭಕ್ತರು ಮಾಡುವ ಕೆಲಸಗಳಲ್ಲಿ ಪ್ರತಿಯೊಂದರ ಹಿಂದೆ ಯಾವುದೋ ಒಂದು ಗೊತ್ತಿಲ್ಲದ ನಿಗೂಢತ ಸತ್ಯ ಇರುತ್ತದೆ. ಇದರ ಬಗ್ಗೆ ಬಹಳ ಕಡಿಮೆ ಮಂದಿಗೆ ಗೊತ್ತು. ಯಾವ ಕೆಲಸವನ್ನ, ಪೂಜೆಯನ್ನ ಯಾಕಾಗಿ ಮಾಡುತ್ತೀವಿ ಎಂದು ಬಹಳಷ್ಟು ಮಂದಿಗೆ ಈಗಲೂ ಗೊತ್ತಿಲ್ಲ. ಆ ತರಹದವುಗಳಲ್ಲಿ ಹಿಂದೂಗಳು ನಿರ್ವಹಿಸುವ ಶ್ರಾದ್ಧ ಕರ್ಮ ಕ್ರಿಯೆ ಸಹ ಒಂದು. ಇಷ್ಟಕ್ಕೂ ಈ ಕರ್ಮಗಳನ್ನು ಯಾಕೆ ಮಾಡ್ತಾರೆ ಗೊತ್ತಾ..?

ಮಹಾಭಾರತದಲ್ಲಿ ಶ್ರಾದ್ಧ ಕರ್ಮಗಳ ಬಗ್ಗೆ ವಿವರವಾಗಿ ಇರುವಂತೆ ಕೆಲವು ಪಂಡಿತರು ಹೇಳುತ್ತಾರೆ. ಮುಖ್ಯವಾಗಿ 3 ತರಹದ ಋಣಗಳನ್ನು ತೀರಿಸಿಕೊಳ್ಳುವ ಸಲುವಾಗಿ ಸತ್ತವರಿಗೆ ಈ ಶ್ರಾದ್ಧ ಕರ್ಮಗಳು ಮಾಡುತ್ತಾರಂತೆ.

ಮೊದಲನೆಯದು ದೇವ ಋಣ. ಮನುಷ್ಯ ತಾನು ಬದುಕಿದಷ್ಟು ದಿನ ದಾನ ಧರ್ಮಗಳನ್ನು ಮಾಡಿದರೆ ಈ ಋಣ ತೀರಿಸಿಕೊಂಡಂತೆ ಆಗುತ್ತದಂತೆ. ಆ ರೀತಿ ಮಾಡದವರು ಒಂದು ವೇಳೆ ಸತ್ತರೆ ಅವರ ಕುಟುಂಬಿಕರು ಶ್ರಾದ್ಧ ಕರ್ಮ ಮಾಡಿದರೆ ಆಗ ಆ ಋಣ ತೀರಿ ಅವರಿಗೆ ಒಳ್ಳೆಯ ಲೋಕ ಪ್ರಾಪ್ತವಾಗುತ್ತದಂತೆ.

ಎರಡನೆಯದು ಋಷಿ ಋಣ. ಮನುಷ್ಯ ಬದುಕಿದ್ದಾಗ ತಾನು ಸಂಪಾದಿಸುವ ಜ್ಞಾನವನ್ನು ಇತರರಿಗೆ ಹಂಚಿದರೆ ಆ ಋಣ ತೀರಿಸಿದಂತಾಗುತ್ತದೆ. ಮೇಲೆ ತಿಳಿಸಿದಂತೆ ಒಂದು ವೇಳೆ ಯಾರಾದರೂ ಇಷ್ಟೂ ಮಾಡದಿದ್ದರೆ ಅವರು ಸತ್ತ ಮೇಲೆ ಅವರ ಕುಟುಂಬಿಕರು ಶ್ರಾದ್ಧ ಕರ್ಮಗಳನ್ನು ನಿರ್ವಹಿಸಿದರೆ ಆಗ ಈ ಋಷಿ ಋಣ ಸಹ ತೀರುತ್ತದೆ.
(ಈ ಎರಡು ಋಣಗಳು..ಬದುಕಿದ್ದಾಗ ತೀರಿಸಿಕೊಂಡರೆ ಆ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾನೆಂದು ಪುರಾಣಗಳು ಹೇಳುತ್ತವೆ.)

ಇನ್ನು ಮೂರನೆಯದು ಪಿತೃ ಋಣ. ಈ ಋಣ ತೀರಬೇಕೆಂದರೆ ಸತ್ತವರಿಗೆ ಕಡ್ಡಾಯವಾಗಿ ಶ್ರಾದ್ಧ ಕರ್ಮಗಳನ್ನು ನಿರ್ವಹಿಸಿ ತರ್ಪಣ, ಪಿಂಡ ಪ್ರದಾನಗಳನ್ನು ಮಾಡಬೇಕಾಗುತ್ತದೆ. ಆಗ 3 ಋಣಗಳು ತೀರಿದಂತಾಗಿ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಭೂಮಿ ಮೇಲೆ ವಾಸಿಸುತ್ತಿರುವ ಕುಟುಂಬ ಸದಸ್ಯರಿಗೆ ಸಹ ಒಳ್ಳೆಯದು ಆಗುತ್ತದಂತೆ. ಹಾಗಾಗಿ ಯಾರಾದರೂ ತಮ್ಮ ಪೂರ್ವಿಕರು ಶ್ರಾದ್ಧ ಕರ್ಮ ಮಾಡದೆ ಸತ್ತು ಹೋದರೆ, ಅವರ ಹೆಸರಿನಲ್ಲಿ ಈಗಿರುವವರು ತಮ್ಮ ಪೂರ್ವಿಕರಿಗೆ ಶ್ರಾದ್ಧ ಕರ್ಮ ಮಾಡಬೇಕಂತೆ. ಹಾಗೆ ಮಾಡಿದರೂ ಸತ್ತವರ ಆತ್ಮಕ್ಕೆ ಶಾಂತಿ ಸಿಕ್ಕು, ಈಗಿರುವವರಿಗೆ ಒಳ್ಳೆಯದಾಗುತ್ತದೆ.

ಆದರೆ ಸಾಮಾನ್ಯವಾಗಿ ಯಾರಾದರೂ ಸತ್ತವರ ತಮ್ಮ ಪೂರ್ವಿಕರಿಗೆ ಅವರು ಸತ್ತ ದಿನಾಂಕದಲ್ಲೋ, ಇಲ್ಲ ಪುಷ್ಕರ ಬಂದಾಗ ತರ್ಪಣ ಬಿಡುತ್ತಾರೆ. ಪಿಂಡ ಪ್ರದಾನ, ಕರ್ಮಗಳನ್ನು ಮಾಡುತ್ತಾರೆ. ಭಾದ್ರಪದ ಮಾಸ ಮಹಾಲಯ ಪಕ್ಷದಲ್ಲೂ ಕರ್ಮ ಮಾಡುತ್ತಾರಂತೆ. ಪಿಂಡ, ತರ್ಪಣ ಬಿಡಬಹುದಂತೆ. ಹಾಗೆ ಮಾಡಿದರೂ ಒಳ್ಳೆಯ ಫಲಿತಾಂಶ ಸಿಗುತ್ತದೆ. ಪೂರ್ವದಲ್ಲಿ ಒಂದಾನೊಂದು ಕಾಲದಲ್ಲಿ ಕರ್ಣ ಸಹ ಇದೇ ಪಕ್ಷದಲ್ಲಿ ತನ್ನ ತಂದೆತಾಯಿ, ತಾತಂದಿರು, ಮುತ್ತಾತಂದಿರಿಗೆ ತರ್ಪಣ ಬಿಟ್ಟು, ಅವರಿಗೆ ಒಳ್ಳೆಯ ಗತಿ ಸಿದ್ಧಿಸುವಂತೆ ಮಾಡಿದ್ದನಂತೆ. ಆ ರೀತಿ ಮಾಡುವುದು 100 ಯಾಗಗಳನ್ನು ಮಾಡಿದಷ್ಟು ಸಮಾನವಂತೆ. ಹಾಗಾಗಿ ಮೇಲೆ ತಿಳಿಸಿದ 3 ಋಣಗಳಲ್ಲಿ ಪಿತೃ ಋಣವನ್ನು ತೀರಿಸಿಕೊಳ್ಳಲು ಸತ್ತ ತಮ್ಮ ಪೂರ್ವಿಕರಿಗೆ ಶ್ರಾದ್ಧ ಕರ್ಮ, ಪಿಂಡ ಪ್ರದಾನ ಮಾಡುತ್ತಾರೋ ಅವರಿಗೆ ಒಳ್ಳೆಯದಾಗುತ್ತದಂತೆ. ಆದರೆ ಆ ರೀತಿ ಕರ್ಮ ನಿರ್ವಹಿಸುವಷ್ಟು ಶಕ್ತಿ ಇಲ್ಲದವರು ಮಹಾಲಯ ಪಕ್ಷ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ದಿನ ತಮ್ಮ ಸಮೀಪದ ಯಾವುದಾದರೂ ಒಂದು ದೊಡ್ಡ ಮರದ ಬಳಿ ಹೋಗಿ ಅದನ್ನು ಆಲಂಗಿಸಿಕೊಂಡು ಸತ್ತ ಪೂರ್ವಿಕರನ್ನು ನೆನೆದು ಕಣ್ಣೀರು ಸುರಿಸಬೇಕೆಂದು ಶಾಸ್ತ್ರ ಹೇಳುತ್ತದೆ. ಹಾಗೆ ಮಾಡುವುದರಿಂದ ಶ್ರಾದ್ಧ ಕರ್ಮ ಮಾಡಿದಷ್ಟು ಫಲಿತ ಸಿಗುತ್ತದೆ.


Click Here To Download Kannada AP2TG App From PlayStore!

Share this post

scroll to top