ಈ 5 ವಿಷಯಗಳನ್ನು… ಮದುವೆಯನಂತರ ನಿಮ್ಮ ಹೆಂಡತಿ/ಗಂಡನಿಗೆ ಹೇಳದಿರುವುದೇ ಉತ್ತಮ..!?

ಗಂಡ ಹೆಂಡಿರ ನಡುವೆ ಯಾವುದೇ ರೀತಿಯ ರಹಸ್ಯಗಳಿರಬಾರದು…ಆಗ ಮಾತ್ರ ಜೀವನ ಸುಗಮವಾಗಿ ಸಾಗುತ್ತದೆಂದು ಹೇಳುತ್ತಾರೆ. ಆದರೆ, ಈ ಸೂತ್ರ ಎಲ್ಲ ವೇಳೆಯಲ್ಲೂ, ಎಲ್ಲ ವಿಷಯಗಳಿಗೂ ಅನ್ವಯಿಸುವುದಿಲ್ಲ. ಕೆಲವು ವಿಷಯಗಳನ್ನು ಸಂಗಾತಿಗೆ ಹೇಳದಿರುವುದೇ ಉತ್ತಮ. ವೈಯುಕ್ತಿಕವಾದ ಪ್ರತಿಯೊಂದು ವಿಷಯವನ್ನು ಹೇಳುತ್ತಾ ಹೋದರೆ… ಪರಸ್ಪರ ಕೀಳುಭಾವನೆ ಏರ್ಪಡುತ್ತವೆ. ಕೊನೆಗೆ ಅಂತಹ ಸಂಸಾರದಲ್ಲಿ ಕಚ್ಚಾಟ ಪ್ರಾರಂಭವಾಗುತ್ತದೆ. ಆದುದರಿಂದಲೇ…ಯಾವ ವಿಷಯವನ್ನು ಎಲ್ಲಿ ಹೇಳಬೇಕು, ಎಲ್ಲಿ ಗುಟ್ಟಾಗಿಡಬೇಕು ಎಂಬುದನ್ನು ಅರಿತು ಬಾಳುವ ದಂಪತಿಗಳ ಜೀವನ ಸುಗಮವಾಗಿ ಸಾಗುತ್ತದೆ. ಗಂಡ, ಹೆಂಡತಿಯರ ನಡುವೆ ಗುಟ್ಟಾಗಿಡಬೇಕಾದ ಕೆಲವು ವಿಷಯಗಳು ಯಾವುವೆಂದು ನೋಡೋಣ.

ಹಿಂದಿನ ಅನಾರೋಗ್ಯ ಸಮಸ್ಯೆಗಳ ಬಗ್ಗೆ:
ಮದುವೆಯಾಗುವುದಕ್ಕೆ ಮುಂಚೆ ಯಾವುದಾದರೂ ತೀವ್ರ ಅನಾರೋಗ್ಯದ ಸಮಸ್ಯೆಗಳಿಗೆ ಒಳಗಾಗಿದ್ದರೆ, ಹೇಳದಿರುವುದೇ ಉತ್ತಮ. ಆ ಸಮಸ್ಯೆ ಇಂದಿಗೂ ಮುಂದುವರೆದಿದ್ದಲ್ಲಿ ಮಾತ್ರ ಹೇಳಬೇಕು. ಇಲ್ಲವಾದಲ್ಲಿ ಮೋಸಮಾಡಿ ಮದುವೆ ಮಾಡಿಕೊಂಡಿರೆಂಬ ಆಪಾದನೆಗೆ ಒಳಗಾಗುತ್ತೀರ.

top-10-most-common-dental-health-problems

ಅವಮಾನಗಳು :
ಹಿಂದೆ ಅವಮಾನಕ್ಕೆ ಒಳಗಾದ ಸಂಗಾತಿಯನ್ನು ಎಂದಿಗೂ ನಿಮ್ಮ ಅರ್ಧಾಂಗಿಗೆ ಹೇಳಬಾರದು. ಇದರಿಂದ ನಿಮ್ಮ ಮೇಲೆ ಕೀಳುಭಾವ ಉಂಟಾಗುತ್ತದೆ. ಇದನ್ನೇ ಒಂದು ಅಸ್ತ್ರವನ್ನಾಗಿಸಿಕೊಂಡು ಪದೇ ಪದೇ ನಿಮ್ಮ ಮನಸ್ಸನ್ನು ಘಾಸಿಗೊಳಿಸುವ ಸಾಧ್ಯತೆಗಳಿವೆ.

hotel, travel, relationships, and sexual problems concept - upset man sitting on the bed with woman on the back

ಕನಸುಗಳು :
ಬೇರೊಬ್ಬ ಮಹಿಳೆ/ಪುರುಷ ನನ್ನು ಅನುಭವಿಸಿದಹಾಗೆ ಕನಸು ಬಂದಿದ್ದಲ್ಲಿ ಯಾವುದೇ ಕಾರಣಕ್ಕೂ ಸಂಗಾತಿಗೆ ಹೇಳಲೇಬಾರದು.ಬೇರೆ ಹೆಣ್ಣು/ಗಂಡು ಬಗ್ಗೆ ಕನಸಿನಲ್ಲಿ ಊಹಿಸಿಕೊಳ್ಳುವುದು ನಿಮ್ಮ ಸಂಗಾತಿಗೆ ಇಷ್ಟವಾಗದು. ಸಂಸಾರ ಹಾಳಾಗುವ ಸಾಧ್ಯತೆಗಳಿವೆ.

wet-dreams

ಪ್ರೇಮ…ಸಮಬಂಧ:
ತಮ್ಮ ಪ್ರೇಮ ಕತೆಗಳನ್ನು ಇತರರಿಗೆ ಹೇಳಲು ಬಹಳಷ್ಟು ಜನ ಉತ್ಸುಕರಾಗಿರುತ್ತಾರೆ. ಆದರೆ, ತಮ್ಮ ಸಂಗಾತಿಯಲ್ಲಿ ಮಾತ್ರ ಇದರ ಬಗ್ಗೆ ಹೇಳದಿರುವುದೇ ಉತ್ತಮ. ಹಾಗೆ ಒಂದು ವೇಳೆ ಹೇಳಿದಲ್ಲಿ ಪ್ರತಿಯೊಂದು ವಿಷಯದಲ್ಲೂ ಅನುಮಾನ ಉಂಟಾಗುತ್ತದೆ.

41a6373c-122f-4eb1-94c0-9eb39e255e00

ಶಾರೀರಿಕ ಸಂಬಂಧ :
ಮದುವೆಗೆ ಮುಂಚೆ ಯಾರೊಂದಿಗಾದರೂ ಶಾರೀರಕ ಸಂಬಂಧ ಹೊಂದಿದ್ದಲ್ಲಿ…ಈ ವಿಷಯವನ್ನು ಹೇಳದಿರುವುದೇ ಉತ್ತಮ. ಒಂದು ವೇಳೆ ಹಾಗೇನಾದರೂ ಬಾಯಿತಪ್ಪಿ ಹೇಳಿದಲ್ಲಿ ನೀವಿಡುವ ಪ್ರತಿಯೊಂದು ಹೆಜ್ಜೆಯೂ ಅನುಮಾನ ಮೂಡಿಸುತ್ತದೆ.

couple-in-bed-romance-hot-images

ಆದುದರಿಂದ ಒಟ್ಟಾರೆ ಹೇಳುವುದಾದರೆ ಗತಂ ಗತ:… ಮದುವೆಗೆ ಮುನ್ನ ಏನೇ ನಡೆದಿದ್ದರೂ, ತಾಳಿಕಟ್ಟುವ ಮೊದಲೇ ಅವೆಲ್ಲವನ್ನೂ ಮರೆತರೆ ಸಂಸಾರ ನೂರ್ಕಾಲ ಸಂತೋಷವಾಗಿ ಸಾಗುತ್ತದೆ. ಹಿಂದಿನದ್ದೆಲ್ಲಾ ಒಂದು ಕೆಟ್ಟ ಕನಸು, ಈಗಿರುವುದು ಸುಂದರವಾದ ಜೀವನದ ಹಾದಿ ಎಂದು ಮುಂದುವರೆಯಬೇಕು.ಗಂಡ ಹೆಂಡಿರ ನಡುವೆ ಅನ್ಯೋನ್ಯ ಹೆಚ್ಚಾಗಿದ್ದರೆ… ಈ ವಿಷಯಗಳನ್ನು ಹಂಚಿಕೊಳ್ಳಬಹುದು.


Click Here To Download Kannada AP2TG App From PlayStore!