ಪ್ರತಿ ಪುರುಷನೂ ಜೀವನದಲ್ಲಿ ಯಾರಿಗೂ ತಿಳಿಸಬಾರದ ರಹಸ್ಯಗಳು ಇವೇ..! ಹೇಳಿದರೆ ಅಷ್ಟೇ ಕಥೆ.

ಗಂಡಸರು ಎಂದಿಗೂ, ಯಾರೊಂದಿಗೂ ಈ ವಿಷಯಗಳನ್ನು ಹಂಚಿಕೊಳ್ಳಬಾರದು. ಒಂದು ವೇಳೆ ಹೇಳಿದರೆ ಜೀವನದಲ್ಲಿ ಮೇಲೆ ಬರಲ್ಲ. ಈಗ ಆ ಮುಖ್ಯವಾದ ಸೂತ್ರಗಳ ಬಗ್ಗೆ ತಿಳಿದುಕೊಳ್ಳೋಣ. ಯಾವಾಗಲಾದರೂ ಆರ್ಥಿಕ ಸಮಸ್ಯೆಗಳಿಂದ ಒದ್ದಾಡುತ್ತಿದ್ದರೆ ಅವುಗಳ ಬಗ್ಗೆ ಇತರರಿಗೆ ಯಾವುದೇ ಕಾರಣಕ್ಕೂ ಹೇಳಬಾರದು. ಹಣ ಕಳೆದುಕೊಂಡರೂ ಸಹ ಅದನ್ನು ಯಾರಿಗೂ ಹೇಳಬಾರದು. ಯಾಕೆಂದರೆ ಆರ್ಥಿಕ ಸಮಸ್ಯೆಯಂತಹ ತೊಂದರೆ ಅನುಭವಿಸುವವರ ಬಗ್ಗೆ ಇತರರಿಗೆ ಗೊತ್ತಾದರೆ ಅವರಿಗೆ ಯಾರೂ ಸಹಾಯ ಮಾಡಲ್ಲ. ಮೇಲಾಗಿ ಹೊರಗಿನವರು ಏನಾದರೂ ಸಹಾಯ ಮಾಡುತ್ತೇವೆಂದು ಬಂದರೂ ಅದು ನಿಜವಾಗಿರಲ್ಲ.

ವೈಯಕ್ತಿಕ ಸಮಸ್ಯೆಗಳ ಬಗ್ಗೆ ಸಹ ಇತರರಿಗೆ ತಿಳಿಸಬಾರದು. ಆ ರೀತಿ ಮಾಡಿದರೆ ಹೊರಗಿನ ವ್ಯಕ್ತಿಗಳು ಅದರ ಬಗ್ಗೆ ತಮಾಷೆ ಮಾಡುತ್ತಾರೆ. ಆ ಸಮಸ್ಯೆ ಬಗ್ಗೆ ಜೋಕ್‍ಗಳನ್ನು ಮಾಡಿ ಇನ್ನಷ್ಟು ಕಿರಿಕಿರಿ ಮಾಡುತ್ತಾರೆ. ಇದರಿಂದ ಸಮಸ್ಯೆಯಿಂದ ನರಳುತ್ತಿರುವವರು ಇನಷ್ಟು ಆತ್ಮನ್ಯೂನತೆಗೆ ಒಳಗಾಗುತ್ತಾರೆ. ಒಂದು ವೇಳೆ ಸಮಸ್ಯೆ ಹೇಳಿಕೊಂಡರೆ ಆ ಸಮಸ್ಯೆ ನಮ್ಮ ಬಲಹೀನತೆಯಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಪತ್ನಿಯ ಬಗ್ಗೆ ಯಾವುದೇ ಕಾರಣಕ್ಕೂ ಚರ್ಚಿಸಬಾರದು. ಯಾವುದೇ ವಿಚಾರವಾದರೂ ರಹಸ್ಯವಾಗಿ ಇಡಬೇಕು. ಒಂದು ವೇಳೆ ಆ ರೀತಿ ಮಾಡದಿದ್ದರೆ ಅದು ಭವಿಷ್ಯದಲ್ಲಿ ತೊಂದರೆಗೆ ಕಾರಣವಾಗುತ್ತದೆ. ಪತ್ನಿ ಬಗೆಗಿನ ರಹಸ್ಯಗಳನ್ನು ಇತರರ ಜತೆಗೆ ಯಾವಾಗಲೂ ಹಂಚಿಕೊಳ್ಳಬಾರದು.

ಒಬ್ಬ ವ್ಯಕ್ತಿ ಯಾವಾಗಾದರೂ, ಯಾವ ಘಟನೆಯಲ್ಲಾದರೂ ಅಪಮಾನಕ್ಕೆ ಗುರಿಯಾದರೆ ಸಾಧ್ಯವಾದಷ್ಟು ಬೇಗ ಅದನ್ನು ಮರೆಯಬೇಕು. ಅಷ್ಟೇ ಹೊರತು ಆ ವಿಚಾರವಾಗಿ ಇತರರಿಗೆ ತಿಳಿಸಬಾರದು. ಆ ರೀತಿ ಮಾಡಿದರೆ ಅದರ ಬಗ್ಗೆ ಅವರು ತಮಾಷೆ ಮಾಡುತ್ತಾರೆ. ಆಗ ಹೇಳಿಕೊಂಡವರ ಮನೋಭಾವನೆಗಳು, ಅವರ ದೊಡ್ಡತನಕ್ಕೆ ಹೊಡೆತ ಬೀಳುತ್ತದೆ. ಇವು ಮಾನಸಿಕವಾಗಿ ಜರ್ಝರಿತವನ್ನಾಗಿ ಮಾಡುತ್ತವೆ.


Click Here To Download Kannada AP2TG App From PlayStore!