ಬೀದಿಗಳಲ್ಲಿ ಬಿಕ್ಷೆ ಬೇಡುತ್ತಿದ್ದ ಈತ …ಈಗ ರೂ.30 ಕೋಟಿ ವ್ಯವಹಾರವಿರುವ ಸಂಸ್ಥೆಗೆ ಯಜಮಾನ.

ಒಂದು ಗುರಿ…ಅದನ್ನು ಸಾಧಿಸಲು ಸಂಕಲ್ಪ…ಇದಕ್ಕೆ ಸರಿ ಹೊಂದುವಂತೆ ಛಲ,ದೀಕ್ಷೆ,ಅಂಕಿತ ಮನೋಭಾವ,ಶ್ರಮ…ಇವೆಲ್ಲವೂ ಇದ್ದರೆ ಸಾಕು ಯಾವುದೇ ವ್ಯಕ್ತಿಯಾಗಲಿ,ಎಂತಹುದೇ ಪರಿಸ್ಥಿತಿಯಲ್ಲಿದ್ದರೂ ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾನೆ.ಅಂದುಕೊಂಡ ಲಕ್ಷ್ಯವನ್ನು ಸಾಧಿಸುತ್ತಾನೆ.ಕಷ್ಟಪಟ್ಟು ದುಡಿದು ಉನ್ನತ ಸ್ಥಾನ ಗಳಿಸಿದ ಅನೇಕರನ್ನು ನಾವು ಈಗಾಗಳೇ ನೋಡಿದ್ದೇವೆ. ಈಗ ನಾವು ಹೇಳ ಹೊರಟಿರುವುದೂ ಸಹ ಅಂತಹ ಮತ್ತೊಬ್ಬ ವ್ಯಕ್ತಿಯ ಬಗ್ಗೆ.ಆತನೇ ರೇಣುಕಾ ಆರಾಧ್ಯ.

ರೇಣುಕಾ ಆರಾಧ್ಯ ಅವರದು ಬಡ ಕುಟುಂಬ.ತಿನ್ನುವುದಕ್ಕೆ ತಿಂಡಿಯೂ ಇಲ್ಲದ ಕಡು ಬಡ ಕುಟುಂಬದಲ್ಲಿ ಜನಿಸಿದರು. ತಂದೆ,ಸ್ಥಳಿಯ ದೇವಸ್ಥಾನವೊಂದರಲ್ಲಿ ಅರ್ಚಕ. ಅಲ್ಲಿ ಬರುವ ಭಕ್ತರು ಕೊಡುತ್ತಿದ್ದದ್ದೂ ಅಷ್ಟಕಷ್ಟೇ. ಇದರಿಂದಾಗಿ ರೇಣುಕ ಆರಾಧ್ಯ ತಂದೆ ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ರೇಣುಕ ಆರಾಧ್ಯಗೆ ಒಬ್ಬ ಅಣ್ಣ ,ಒಬ್ಬಳು ತಂಗಿ ಇದ್ದಾರೆ. ಒಮ್ಮೊಮ್ಮೆ ರೇಣುಕ ಸಹ ತಂದೆಯೊಡನೆ ಬಿಕ್ಷೆ ಬೇಡಲು ಹೋಗುತ್ತಿದ್ದರು. ಆದರೂ ಸಹ ರೇಣುಕ ಓದುವುದನ್ನು ಮಾತ್ರ ನಿಲ್ಲಿಸಲಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಓದು ಮುಂದುವರೆಸಿದ. ಹೀಗೆ 10 ನೇ ತರಗತಿಗೆ ಬರುವಷ್ಟರಲ್ಲಿ ಕುಟುಂಬದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಹೊಟ್ಟೆಗೆ ಸರಿಯಾಗಿ ತಿನ್ನಲೂ ಸಿಗುತ್ತಿರಲಿಲ್ಲ. ಇದರಿಂದಾಗಿ 10 ನೇ ತರಗತಿಯಲ್ಲಿ ಫೈಲ್ ಆದನಂತರ ಕುಟುಂಬದ ಹೊರೆಯನ್ನು ತಾನೇ ಹೊತ್ತುಕೊಂಡ.

ಹೀಗೆ ರೇಣುಕ ಆರಾಧ್ಯ ಕುಟುಂಬ ಭಾರವನ್ನು ಹೊರುತ್ತಾ ಹಲವು ಕಂಪೆನಿಗಳಲ್ಲಿ ಕೆಲಸಮಾಡಿದ.ಬರುವ ಹಣ ಯಾವುದಕ್ಕೂ ಸಾಲದಾದಾಗ ಡ್ರೈವರ್ ಕೆಲಸ ಮಾಡಲಾರಂಭಿಸಿದ. ಕೆಲವು ವರ್ಷಗಳು ಒಂದು ಟ್ಯಾಕ್ಸೀ ಕಂಪೆನಿಯಲ್ಲಿ ಕೆಲಸಮಾಡಿದ.ಅದೇ ಸಮಯದಲ್ಲಿ ಮದುವೆ ಮಾಡಿಕೊಂಡ.ದಂಪತಿಗಳಿಬ್ಬರೂ ದುಡಿಯಲಾರಂಭಿಸಿದರು. ಟ್ಯಾಕ್ಸೀ ಡ್ರೈವರ್ ಕೆಲಸದ ಸಂಪಾದನೆಗೆ ಹೆಂಡತಿಯ ಸಂಪಾದನೆಯನ್ನೂ ಸೇರಿಸಿ ‘ಪ್ರವಾಸೀ ಕ್ಯಾಬ್ಸ್’ ಎಂಬ ಹೆಸರಿನ ಸ್ವಂತ ಟ್ರಾವೆಲ್ ಕಂಪೆನಿಯನ್ನು ತೆರೆದ. ಅದು ಹಾಗೇ ಅಭಿವೃದ್ದಿ ಹೊಂದಿತು. ಮೊದಲಿಗೆ 3 ಕಾರುಗಳು ಮಾತ್ರ ‘ಕ್ಯಾಬ್’ ಗಳಾಗಿದ್ದುವು.ಆದರೆ ಈಗ ಅವುಗಳ ಸಂಖ್ಯೆ 500 ಕ್ಕೇರಿದೆ.ಇಷ್ಟಲ್ಲದೇ ಕೆಲವು ಕಂಪೆನಿಗಳಿಗೆ,ಶಾಲಾ ಕಾಲೇಜುಗಳಿಗೆ ತಿಂಗಳ ಬಾಡಿಗೆ ಆಧಾರದಲ್ಲಿ ಬಸ್ಸುಗಳನ್ನು ಓಡಿಸತೊಡಗಿದ. ಹೀಗಾಗಿ ಈಗ ಆತನ ಟರ್ನೋವರ್ ರೂ.30 ಕೋಟಿಗಳಾಗಿದೆ. ಇಷ್ಟೆಲ್ಲಾ ಸಾಧನೆ ಮಾಡಿದರೂ ಇಂದಿಗೂ ಸಹ ಆರಾಧ್ಯ ತನ್ನ ಮೊದಲಿನ ವೃತ್ತಿಯಾದ ಡ್ರೈವರ್ ವೃತ್ತಿಯನ್ನೇ ಮುಂದುವರಿಸುತ್ತಿದ್ದಾರೆ. ತನ್ನ ಹಾಗೆ ಉದ್ಯೋಗ ಮಾಡಿ ಜೀವನ ನಡೆಸಬಯಸುವ ಯುವತಿ,ಯುವಕರಿಗೆ ‘ಡ್ರೈವರ್ ಕಮ್ ಓನರ್’ ಯೋಜನೆಯಲ್ಲಿ,3 ವರ್ಷಗಳಲ್ಲಿ ಕ್ಯಾಬ್ ಸ್ವಂತವಾಗುವ ರೀತಿ ರೂ.50 ಸಾವಿರ ಠೇವಣಿಯೊಂದಿಗೆ ಕಾರುಗಳನ್ನು ಕೊಡುತ್ತಾ,ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.ಅವರ ಜೀವನವನ್ನು ಆರ್ಥಿಕ ಪ್ರಗತಿಯತ್ತ ನಡೆಸುತ್ತಿದ್ದಾರೆ.ಈಗ ರೇಣುಕ ಆರಾಧ್ಯ ವಯಸ್ಸು 50 ವರ್ಷ,ಆದರೂ ತನ್ನ ವ್ಯಾಪಾರವನ್ನು ವೃದ್ದಿಮಾಡಿ ರೂ.100 ಕೋಟಿಗಳ ವ್ಯವಹಾರ ಮಾಡಿ ಇನ್ನೂ ಎಷ್ಟೋ ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡುತ್ತೇನೆ ಎನ್ನುತ್ತಾರೆ. ಅವರ ಆಸೆ ಈಡೇರಲಿ.


Click Here To Download Kannada AP2TG App From PlayStore!

Share this post

scroll to top