ಈ ಐದು ರಾಶಿಗಳಲ್ಲಿ ನಿಮ್ಮ ರಾಶಿಯೂ ಒಂದಾಗಿದ್ದರೆ ಹುಡುಗಿಯರು ನಿಮ್ಮನ್ನೇ ಹಿಂಬಾಲಿಸುತ್ತಾರೆ..!!

ನಾವು ಆಕಾಶವನ್ನು ನೋಡಿದಾಗ ಸೂರ್ಯ, ಚಂದ್ರ, ನಕ್ಷತ್ರಗಳು ವೃತ್ತಾಕಾರ ಕಕ್ಷೆಯಲ್ಲಿ ಭೂಮಿಯ ಸುತ್ತ ತಿರುಗುತ್ತಿದ್ದಂತೆ ಕಾಣಿಸುತ್ತವೆ. ಇದರ ಆಧಾರವಾಗಿಯೇ 12 ನಕ್ಷತ್ರಗಳ ಗುಂಪನ್ನು ಗುರುತಿಸಿದ್ದಾರೆ. ಈ ಗುಂಪಿನಲ್ಲಿ ಒಂದೊಂದು ಒಂದು ಪ್ರತ್ಯೇಕವಾದ ಆಕಾರದಲ್ಲಿ ಕಾಣಿಸುವುದರಿಂದ ಆಕಾರಕ್ಕೆ ತಕ್ಕಂತೆ ಹೆಸರನ್ನು ಇಟ್ಟಿದ್ದಾರೆ. ಈ ರಾಶಿಗಳ ಚಕ್ರವನ್ನು ಸುತ್ತಲು ಒಂದು ವರ್ಷ ಬೇಕಾಗುತ್ತದೆ. (ಇದು ಭೂಮಿ ಸೂರ್ಯನ ಸುತ್ತ ತಿರುಗಲು ಬೇಕಾಗುವ ಸಮಯ) ಅಂದರೆ ಸೂರ್ಯನು ಒಂದು ವರ್ಷದಲ್ಲಿ 12 ರಾಶಿಗಳನ್ನೂ ದಾಟಿಕೊಂಡು ಪುನಃ ಮೊದಲಿನ ಸ್ಥಾನಕ್ಕೆ ಬರುತ್ತಾನೆ. ಒಂದೊಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆಂದು ಇದರ ಅರ್ಥ. ಇದು ವಿಜ್ಞಾನ….ಇನ್ನು ನಮ್ಮ ಆಚಾರ, ನಂಬಿಕೆಯ ವಿಷಯಕ್ಕೆ ಬಂದರೆ…ಒಬ್ಬ ವ್ಯಕ್ತಿ ಜನಿಸಿದ ಸಮಯದಲ್ಲಿನ ರಾಶಿ, ನಕ್ಷತ್ರಗಳ ಆಧಾರವಾಗಿಯೇ ಅವನ ವ್ಯಕ್ತಿತ್ವ ಹಾಗೂ ಮನಸ್ತತ್ವಗಳು ಇರುತ್ತವೆ ಎಂಬುವುದು ನಮ್ಮ ಪೂರ್ವಿಕರ ನಂಬಿಕೆ. ಒಬ್ಬ ವ್ಯಕ್ತಿಯ ಲಕ್ಷಣಗಳು, ಸ್ವಭಾವ, ಇಷ್ಟಾ ಇಷ್ಟಗಳು, ಭವಿಷ್ಯತ್ತು, ಪ್ರೇಮ, ನಡವಳಿಕೆ, ಆಲೋಚನೆ, ವೃತ್ತಿ, ಪ್ರವೃತ್ತಿ, ಆಯುಷ್ಯ, ಆರೋಗ್ಯ, ಐಶ್ವರ್ಯ, ಸಂತೋಷ… ಹೀಗೆ ಪ್ರತಿಯೊಂದನ್ನೂ ಅವರವರ ಜನ್ಮ ರಾಶಿ, ನಕ್ಷತ್ರ, ಗ್ರಹಸ್ಥಿತಿಗತಿಗಳೇ ನಿರ್ಣಯಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.

ಮದುವೆ ಮಾಡುವ ಸಂದರ್ಭದಲ್ಲಿ ಹಿರಿಯರು ಸ್ತ್ರೀ, ಪುರುಷರ ಜನ್ಮ ನಕ್ಷತ್ರಗಳಿಗೆ ಸರಿಹೊಂದುವಂತೆ ಜೋಡಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಈಗ ಇಲ್ಲಿ ಹೇಳ ಹೊರಟಿರುವ 5 ರಾಶಿಗಳಿಗೆ ಸೇರಿದ ಪುರುಷರು ತಮ್ಮ ಸ್ವಭಾವಕ್ಕೆ ತಕ್ಕಂತೆ ಸುಲಭವಾಗಿ ಮಹಿಳೆಯರನ್ನು ಆಕರ್ಷಿಸುತ್ತಾರೆಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ನಿಮಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇದ್ದರೆ ಇದನ್ನು ಪರಿಗಣಿಸಿ. ಇಲ್ಲದಿದ್ದಲ್ಲಿ ಸುಲಭವಾಗಿ ಬಿಟ್ಟುಬಿಡಿ.

ಈ ವಿಷಯದಲ್ಲಿ ಮಿಥುನ ರಾಶಿಗೆ ಸೇರಿದ ಪುರುಷರು ತುಂಬಾ ಅದೃಷ್ಟವಂತರು. ಇವರು ಸುಲಭವಾಗಿ ಮಹಿಳೆಯರನ್ನು ಆಕರ್ಷಿಸುತ್ತಾರೆ. ಇವರು ಬಹಳ ಮೃದು ಮನಸ್ತತ್ವವುಳ್ಳವರು ಹಾಗೂ ಸೌಮ್ಯ ಸ್ವಭಾವವುಳ್ಳವರೂ ಆಗಿರುವುದರಿಂದ ಇವರೊಂದಿಗೆ ಹುಡುಗಿಯರು ಶೀಘ್ರವಾಗಿ ಸ್ನೇಹ ಬೆಳೆಸಿ ಬೆರೆಯುತ್ತಾರೆ. ಇವರೊಂದಿಗೆ ಮಾತನಾಡಲು ಅನುಕೂಲಕರವಾಗಿರುವಂತೆೆ ಭಾವಿಸುತ್ತಾರೆ. ಸ್ತ್ರೀಯರ ಮನಸ್ತತ್ವಕ್ಕೆ ತಕ್ಕಂತೆ ನಡೆದುಕೊಳ್ಳುವುದರಲ್ಲಿ ಇವರು ಪರಿಣಿತರಾಗಿದ್ದು, ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇವರಲ್ಲಿ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಈ ರಾಶಿಯವರನ್ನು ಸ್ತ್ರೀಯರು ತುಂಬಾ ಇಷ್ಟಪಡುತ್ತಾರೆ.

ಸಿಂಹ ರಾಶಿಗೆ ಸೇರಿದವರು ಬಲವಾದ ಶಾಶ್ವತ ಸಂಬಂಧಗಳನ್ನು ಇಷ್ಟಪಡುತ್ತಾರೆ. ಇವರು ವಿಶಾಲ ಹೃದಯವುಳ್ಳವರು, ರೊಮ್ಯಾಂಟಿಕ್ ಆಗಿದ್ದರೂ ಹುಡುಗಿಯರೊಂದಿಗೆ ಹತ್ತಿರವಾಗಿದ್ದರೂ ಅವರೊಂದಿಗೆ ಹೊಂದಿಕೊಳ್ಳಲು ನಾಚಿಕೆ ಪಡುತ್ತಾರೆ. ಕೆಲವರು ಮೃದು ಮನಸ್ತತ್ವವುಳ್ಳವರೂ ಆಗಿರುತ್ತಾರೆ. ಯಾರೊಂದಿಗಾದರೂ ಸ್ನೇಹದಿಂದ ಇರುತ್ತಾರೆ. ಆದ್ದರಿಂದಲೇ ಇವರನ್ನು ಹುಡುಗಿಯರೇ ಅಲ್ಲದೆ ಇತರರೂ ಹೆಚ್ಚಾಗಿ ಇಷ್ಟಪಡುತ್ತಾರೆ. ಇವರು ಸೂಕ್ಷ್ಮವಾಗಿರುತ್ತಾರೆ. ಹುಡುಗಿಯರನ್ನು ಆಕರ್ಷಿಸುವ ಸಾಮರ್ಥ್ಯವುಳ್ಳವರಾಗಿದ್ದು, ಈ ಲಕ್ಷಣಗಳಿಂದ ಹುಡುಗಿಯರ ಮನಸ್ಸನ್ನು ಗೆಲ್ಲುತ್ತಾರೆ.

ತುಲಾ ರಾಶಿಯವರು ಅವರ ಕಣ್ಣಿನಿಂದಲೇ ಕಡಿಮೆ ಸಮಯದಲ್ಲಿ ಸುಂದರವಾದ ಹುಡುಗಿಯರನ್ನು ಆಕರ್ಷಿಸುತ್ತಾರೆ. ಇವರ ಶೈಲಿ, ನಡವಳಿಕೆ, ಮಾತಾಡುವ ಪದ್ಧತಿ ಎಲ್ಲವೂ ಇತರರಿಗಿಂತಲೂ ಭಿನ್ನವಾಗಿರುತ್ತವೆ. ಪ್ರೀತಿಯ ವಿಷಯದಲ್ಲಿ ದೀರ್ಘವಾಗಿ ಆಲೋಚಿಸುತ್ತಾ ಆಳವಾದ ಸ್ವಭಾವವನ್ನು ಹೊಂದಿರುತ್ತಾರೆ. ತನ್ನದು ಎಂದುಕೊಂಡದ್ದನ್ನು ಬಿಡುವುದೇ ಇಲ್ಲ. ಪ್ರೀತಿ ಮತ್ತು ಕರ್ತವ್ಯಗಳೆರಡನ್ನೂ ಸಮವಾಗಿ ಪಾಲಿಸುತ್ತಾರೆ. ಎಲ್ಲರಿಗೂ ಪ್ರೀತಿಯನ್ನು ಸಮವಾಗಿ ಹಂಚುತ್ತಾರೆ. ಒಂದು ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸುತ್ತಾರೆ. ತಪ್ಪು ಮಾಡುವುದಿಲ್ಲ. ಭಯವಿದ್ದರೂ ಹುಡುಗಿಯೊಂದಿಗೆ ಸ್ವಲ್ಪ ಹೊತ್ತು ಮಾತಾಡಿದರೆ ಸಾಕು ಅವರನ್ನು ಸ್ನೇಹಿತರಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ತಮ್ಮ ಮಾತೇ ನಡೆಯಬೇಕೆಂಬ ಮೊಂಡುತನ ಜಾಸ್ತಿ ಇರುತ್ತದೆ.

ಮಕರ ರಾಶಿಗೆ ಸೇರಿದ ಹುಡುಗರು ಆಕರ್ಷಣೆವುಳ್ಳವರು. ಹುಡುಗಿಯರು ಇವರಿಗೆ ಬೇಗ ಆಕರ್ಷಿತರಾಗುತ್ತಾರೆ. ಜಾಣತನದಿಂದ ಸಮಾಧಾನ ನೀಡುತ್ತಾರೆ. ವರ್ತಮಾನದ ಬಗ್ಗೆ ಮಾತ್ರ ಚಿಂತಿಸುತ್ತಾರೆ . ನಾಳೆಯ ಬಗ್ಗೆ ಚಿಂತಿಸುವುದಿಲ್ಲ. ಉದ್ವೇಗಕ್ಕೀಡಾಗುವುದಿಲ್ಲ. ತಮ್ಮ ಸುತ್ತಲೂ ಇರುವವರನ್ನು ಸಂತೋಷದಿಂದ ಇರಿಸಲು ಏನನ್ನಾದರೂ ತ್ಯಜಿಸುತ್ತಾರೆ. ಆದ್ದರಿಂದಲೇ ಇವರು ಎಲ್ಲಾ ಸಮಯದಲ್ಲೂ ಸಂತೋಷವಾಗಿರುತ್ತಾರೆ. ಚುರುಕಾಗಿರುವವರನ್ನೇ ಹುಡುಗಿಯರು ಹೆಚ್ಚಾಗಿ ಇಷ್ಟಪಡುವುದರಿಂದ ಇಂತಹ ವ್ಯಕ್ತಿತ್ವ ಹೊಂದಿರುವ ಇವರು ಮಹಿಳೆಯರನ್ನು ಹೆಚ್ಚಾಗಿ ಆಕರ್ಷಿಸುತ್ತಾರೆ.

ವೃಶ್ವಿಕ ರಾಶಿಯವರು ಕಳಾ ಪ್ರಪೂರ್ಣ ಎಂಬ ಬಿರುದನ್ನು ಪಡೆದವರು. ‘ಪ್ಲೇ ಬಾಯ್’ ನಂತಹವರು. ಆದ್ದರಿಂದಲೇ ಹುಡುಗಿಯರು ಇವರನ್ನು ತುಂಬಾ ಇಷ್ಟಪಡುತ್ತಾರೆ. ಇವರಿಗೆ ಗೊತ್ತಿಲ್ಲದ ಕೆಲಸ, ಇವರಲ್ಲಿ ಇಲ್ಲದ ಪ್ರತಿಭೆ ಯಾವುದೂ ಇರುವುದಿಲ್ಲ. ತನ್ನವರಿಗಾಗಿ ಎಷ್ಟೇ ಕಷ್ಟವನ್ನಾದರೂ ಎದುರಿಸುತ್ತಾರೆ. ಬಯಸಿದ್ದನ್ನು ಸಾಧಿಸುವವರೆಗೂ ಬಿಡುವುದಿಲ್ಲ. ಸುಂದರವಾಗಿ ಮಾತಾಡುತ್ತಾರೆ. ತಮ್ಮ ವ್ಯಕ್ತಿತ್ವ, ಮನಸ್ತತ್ವಗಳಿಂದ ಯಾರನ್ನೂ ನೋಯಿಸಬಾರದೆಂಬ ಭಾವನೆಯುಳ್ಳವರು. ಹುಡುಗಿಯರನ್ನು ಜಾಣತನದಿಂದ ಮಾತಾಡಿ ಮಾಯೆ ಮಾಡುತ್ತಾರೆ. ಸಹಾಯ ಮಾಡಲು ಹಿಂಜರಿಯುವುದಿಲ್ಲ. ರೊಮ್ಯಾಂಟಿಕ್ ವ್ಯವಹಾರಿಕ ಶೈಲಿಯಲ್ಲಿರುತ್ತಾರೆ. ಸುಂದರವಾಗಿ ಇರುವುದರೊಂದಿಗೆ ಇವರಿಗೆ ಭವಿಷ್ಯತ್ತಿನ ಬಗ್ಗೆ ಸ್ಪಷ್ಟತೆ ಇರುತ್ತದೆ.

 


Click Here To Download Kannada AP2TG App From PlayStore!