ಆಟೋ ಓಡಿಸುತ್ತಲೇ IAS ಗೆ ತಯಾರಾಗುತ್ತಿರುವ ಮಹಿಳೆ. ಕಲೆಕ್ಟರಾಗಿ,ಮಹಿಳೆಯರ ಪರವಾಗಿರುತ್ತೇನೆಂಬ ಆತ್ವ ವಿಶ್ವಾಸ.

ಓದಲು,ಕಲಿಯಲು,ಆಡಲು ಎಷ್ಟೋ ದಾರಿಗಳಿವೆ,ಅದೇ ರೀತಿ ಸೌಲಭ್ಯಗಳು ಇದ್ದರೂ ತಮ್ಮ ಸೋಲಿಗೆ ಸಾವಿರಾರು ಕಾರಣಗಳನ್ನು ನೀಡುವವರನ್ನೂ, ಮಧ್ಯದಲ್ಲೇ ವಿದ್ಯಾಭ್ಯಾಸವನ್ನು ನಿಲ್ಲಿಸುವ ಜನರನ್ನು ನಾವು  ದಿನ ನಿತ್ಯ ನೋಡುತ್ತಿರುತ್ತೇವೆ. ಆದರೆ,ಒಬ್ಬ ಮಹಿಳೆ ಅಟೋ ಓಡಿಸುವ ಕೆಲಸಮಾಡುತ್ತಲೇ IAS ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದಾಳೆ. ತನ್ನ ಮಗುವನ್ನು ಸಾಕುತ್ತಾ ,ತನ್ನ ಕುಟುಂಬದ ಹೊರೆಯನ್ನು ಹೊರುತ್ತಾ,ಆದರ್ಶಪ್ರಾಯವಾಗಿರುವ ಮಹಿಳೆಯೇ ‘ಎಲ್ಲಮ್ಮ’.

ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಜನ ನಿಬಿಡ ರಸ್ತೆಗಳಲ್ಲಿ,ಆಟೋ ನಿಲ್ದಾಣ ಗಳಲ್ಲಿ,ನಗರದ ಹೊರವಲಯಗಳಲ್ಲಿ ಆಟೋ ಓಡಿಸುತ್ತಿರುವ ಮಹಿಳೆಯೇ ಎಲ್ಲಮ್ಮ.
18 ನೇ ವರ್ಷದಲ್ಲಿ ಮದುವೆ ಮಾಡಿಕೊಂಡ ಎಲ್ಲಮ್ಮ, ಗಂಡ ಹೂ ಗುಚ್ಛಗಳನ್ನು ಮಾರುತ್ತಾ, ಸಭೆ ಸಮಾರಂಭಗಳಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದನಂತೆ. ದುರದೃಷ್ಟವಶಾತ್ ಅವರು ದೂರವಾದರಂತೆ.ಇಂತಹ ವಿಷಮ ಪರಿಸ್ಥಿತಿಯಲ್ಲಿ ಕುಟುಂಬದ ಸಂಪೂರ್ಣ ಜವಾಬ್ಧಾರಿ ಎಲ್ಲಮ್ಮನ ಮೇಲೆ ಬಿತ್ತು. ಹೇಗಾದರೂ ಮಾಡಿ ಮಗುವನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕೆಂಬ ಛಲದಿಂದ, ಸದಾ ಜನಜಂಗುಳಿಯಿಂದ ತುಂಬಿರುವ,ಲಕ್ಷಾಂತರ ಉದ್ಯೋಗಿಗಳಿರುವ ಬೆಂಗಳೂರಿನಲ್ಲಿ ಆಟೋ ಓಡಿಸಿ ಹಣ ಸಂಪಾದನೆ ಮಾಡಲು ತೀರ್ಮಾನಿಸಿದರು.

an-ias-aspirant

ಮಹಿಳೆಯರಿಗೆ ಆಟೋ ಬಾಡಿಗೆಗೆ ನೀಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಕೊನೆಗೆ ತನ್ನ ಭಾವನ ಸಹಕಾರದೊಂದಿಗೆ ಒಂದು ಆಟೋವನ್ನು ದಿನ ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದಳು.ಬೆಳಿಗ್ಗೆ 6 ಗಂಟೆ ಯಿಂದ ರಾತ್ರಿ 8 ಗಂಟೆಯವರೆಗೆ ಆಟೋ ಓಡಿಸಿ 700 ರಿಂದ 800 ಸಂಪಾದಿಸಿ, ದಿನದ ಆಟೋ ಬಾಡಿಗೆ 130 ತೆತ್ತು, ಉಳಿದ ಹಣದಿಂದ ಕುಟುಂಬವನ್ನು ಪೋಷಿಸಲು ಪ್ರಾರಂಭಿಸಿದಳು. ಇದೇ ರೀತಿ ಜೀವನ ಸಾಗಿಸುವ ಬದಲು ಬೇರೆ ಇನ್ನೇನಾದರೂ ಮಾಡಬೇಕೆಂದು ಹಲವಾರು ನಿಯುತಕಾಲಿಕೆಗಳು,ತಾಂತ್ರಿಕತೆಗೆ ಸಂಬಂಧಿಸಿದ ಪುಸ್ತಕಗಳು ಓದುವುದರ ಮೂಲಕ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲು ಪ್ರಾರಂಭಿಸಿದಳು Civil service exam( ನಾಗರೀಕ ಸೇವಾ ಪರಿಕ್ಷೆ)ಯ ತಯಾರಿ ನಡೆಸುತ್ತಿದ್ದಾರೆ.ಪ್ರಸ್ತುತ Public utilityಪೂರ್ಣಗೊಳಿಸಲು ಮಗ್ನರಾಗಿದ್ದಾರೆ. ತನ್ನ ಕನಸು ಸಾಕಾರಗೊಂಡು, ಜೀವನದಲ್ಲಿನೆಲೆ ಕಂಡುಕೊಳ್ಳುವರೆಗೂ ಪ್ರಯತ್ನ ನಡೆಸುತ್ತಲೇ ಇರುತ್ತೇನೆ ಎನ್ನುತ್ತಾರೆ.  ಐ ಎ ಎಸ್ ಗೆ ಸೇರಿ ಮಹಿಳೆಯರ ಪರವಾಗಿದ್ದು ಸಹಾಯ ಮಾಡಬೇಕೆಂದುಕೊಳ್ಳುತ್ತಿದ್ದಾರೆ. ಯಾಕೆಂದರೆ, ನಾನೂ ಸಹ ಒಬ್ಬ ಮಹಿಳೆಯಾಗಿದ್ದುಕೊಂಡು ಆಟೋ ಓಡಿಸಲು ಮುಂದಾದಾಗ ಪುರುಷ ಆಟೋ ಚಾಲಕರಿಂದ ಅನುಭವಿಸಿದ ಹಿಂಸೆಯೇ ನಾನು ಈ ನಿರ್ಣಯಕ್ಕೆ ಬರಲು ಮುಖ್ಯ ಕಾರಣ. ಅದೇ ರೀತಿ ತನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ತನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಜೀವನದ ನನ್ನ ಪಯಣ ನನ್ನ ಗುರಿ ಸಾಧಿಸಲು ಪ್ರಯಾಣಕ್ಕೆ ತಗುಲುವ ವೆಚ್ಚಕ್ಕಿಂತಾಹೆಚ್ಚಿಗೆ ಹಣ ನೀಡಿದ ಸಂದರ್ಭಗಳನ್ನು ನೆನಪಿಸಿಕೊಳ್ಳುತ್ತಾರೆ. ಈ ಹಣ ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ.

ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮನೋಸ್ಥೈರ್ಯ,ಬಂದದ್ದನ್ನು ಬಂದಹಾಗೆ ಸ್ವೀಕರಿಸುವ ಗುಣ ಅತ್ಯವಶ್ಯಕ. ಸಮಸ್ಯೆಗಳನ್ನು ಲೆಕ್ಕಿಸದೆ ಧೈರ್ಯವಾಗಿ ಮುನ್ನುಗ್ಗಿ ತನ್ನ ಲಕ್ಷ್ಯವನ್ನು ಸಾಧಿಸಲಿರುವ ಎಲ್ಲಮ್ಮನಿಗೆ ಪ್ರೋತ್ಸಾಹ ನೀಡುತ್ತಿರುವ ಬೆಂಗಳೂರಿನ ಪ್ರಯಾಣಿಕರು ಅಭಿನಂದನಾರ್ಹರು. ಎಷ್ಟೋ ಮಹಿಳೆಯರಿಗೆ ಆದರ್ಶಪ್ರಾಯರಾಗಿರುವ ಎಲ್ಲಮ್ಮನಿಗೆ ಶುಭವಾಗಲಿ.


Click Here To Download Kannada AP2TG App From PlayStore!

Share this post

scroll to top