ಓದಿದ್ದು 5 ನೇ ತರಗತಿ…ಈಗ ಆತನ ವೇತನ 21 ಕೋಟಿ.!

ಖಾಸಗಿ ಕಂಪೆನಿಗಳಲ್ಲಿ ಸಿಈವೋ(Chief Executive Officer) ಗಳೇ ಮುಖ್ಯಸ್ಥರು. ಅವರಿಗೆ ಅತಿ ಹೆಚ್ಚು ವೇತನ ದೊರೆಯತ್ತದೆ. ನಮ್ಮ ದೇಶದ ವಿಷಯಕ್ಕೆ ಬಂದರೆ,ಅನೇಕ ಕಂಪೆನಿಗಳ ಸಿಈಓ ಗಳ ವೇತನ ವಾರ್ಷಿಕ ಹಲವು ಕೋಟಿಗಳನ್ನು ದಾಟುತ್ತದೆ. ಹಾಗಾದರೆ ನಮ್ಮ ದೇಶದಲ್ಲಿರುವ ಕಂಪೆನಿಗಳ ಪೈಕಿ ಅತಿ ಹೆಚ್ಚು ವೇತನವನ್ನು ಪಡೆಯುತ್ತಿರುವ ವ್ಯಕ್ತಿ ಯಾರೆಂದು ನಿಮಗೆ ಗೊತ್ತೆ? ಅವರೇ ಧರಮ್ ಪಾಲ್ ಗುಲಾಟಿ. ಇಷ್ಟಕ್ಕೂ ಅವರು ಕೆಲಸ  ಮಾಡುತ್ತಿರುವ ಕಂಪೆನಿ ಯಾವುದೆಂದು ನಿಮಗೆ ಗೊತ್ತೇ ? ಅದೇ… ಮಸಾಲೆಗಳನ್ನು ಮಾರುತ್ತಾರಲ್ಲಾ…ಎಂಡಿಹೆಚ್(MDH) ಹೆಸರಿನಲ್ಲಿ ಅದೇ ಕಂಪೆನಿಗೆ ಈತ ಸಿಈಓ. ಅವರ ವಿದ್ಯಾಭ್ಯಾಸ ಎಲ್ಲಿಯವರೆಗೆ ಆಗಿದೆಯೆಂದು ನಿಮಗೆ ಗೊತ್ತೇ ? ಎಂಬಿಎ,ಪಿಹೆಚ್ ಡಿ,ಇಲ್ಲವೆ ಇನ್ನಿತರೆ ಯಾವುದೋ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಿರುತ್ತಾರೆಂದು ನೀವೆನ್ನುತ್ತೀರ ? ಹಾಗಾದರೇ ನೀವು ತಪ್ಪು ಹೇಳಿದಂತೆಯೇ. ನಿಜ ಹೇಳಬೇಕೆಂದರೆ ಅವರು ಓದಿರುವುದು ಕೇವಲ 5 ನೇ ತರಗತಿಯನ್ನು ಮಧ್ಯದಲ್ಲೇ ಓದುವುದನ್ನು ಬಿಟ್ಟಿದ್ದಾರೆ. ಈಗವರು ಭಾರತದಲ್ಲೇ ಅತಿ ಹೆಚ್ಚು ವೇತನ ಪಡೆಯುತ್ತಿರುವ ಸಿಈಓ ಆಗಿದ್ದಾರೆ.


ನಿಜಹೇಳಬೇಕೆಂದರೆ, ಎಂಡಿ ಹೆಚ್ ಅಂದರೆ….ಮಹಷಿಯನ್ ದಿ ಹತ್ತಿ (Mahashian di hatti) ಇದನ್ನೇ ಸಂಕ್ಷಿಪ್ತ ರೂಪದಲ್ಲಿ ಎಂಡಿಹೆಚ್ ಎನ್ನುತ್ತಾರೆ. ಈ ಕಂಪೆನಿಯನ್ನು 1919 ರಲ್ಲಿ ಅಂದಿನ ಪಾಕಿಸ್ತಾನಕ್ಕೆ ಸೇರಿದ್ದ ‘ಸಿಯಾಲ್ ಕೋಟ್’ ನಲ್ಲಿ ಧರಮ್ ಪಾಲ್ ತಂದೆ ಚುನಿಲಾಲ್ ಪ್ರಾರಂಭಿಸಿದರು. ಸ್ವಾತಂತ್ರ್ಯ ಬಂದು ಪಾಕಿಸ್ತಾನ ,ಭಾರತ ಬೇರೆಯಾದನಂತರ, ಎಂಡಿಹೆಚ್ ಕಾರ್ಯಾಲಯವನ್ನು ದಿಲ್ಲಿಯ ಕರೋಲ್ ಭಾಗ್ ಗೆ ಸ್ಥಳಾಂತರಿಸಿದರು. ಅದಾಗಲೇ ಧರಮ್ ಪಾಲ್ ಗುಲಾಟಿ ಕಂಪೆನಿಯ ಬಾಧ್ಯತೆಗಳನ್ನು ಸ್ವೀಕರಿಸಿದ್ದರು. ಈಗ ಎಂಡಿಹೆಚ್ ಕಂಪೆನಿ 15 ಫ್ಯಾಕ್ಟರಿಗಳನ್ನು,1000 ಡೀಲರ್ ಗಳನ್ನು ಹೊಂದಿದೆ. ಸುಮಾರು 60 ಮಸಾಲಾ ಪದಾರ್ಥಗಳನ್ನು ತಯಾರು ಮಾಡಿ ಮಾರುತ್ತಿದ್ದಾರೆ. ಆದರೆ ಅವುಗಳಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಸಾಲೆಗಳೆಂದರೆ…ದೆಗ್ಗೀ ಮಿರ್ಚೀ,ಚಾಟ್ ಮಸಾಲಾ,ಚನಾ ಮಸಾಲಾ. ಈ ಮೂರು ಮಸಾಲೆಗಳು ತಿಂಗಳಿಗೆ 3 ಕೋಟಿ ಪ್ಯಾಕೆಟ್ ಗಳಿಗೂ ಅಧಿಕ ಮಾರಾಟವಾಗುತ್ತಿವೆ. ಪ್ರಸ್ತುತ ಎಂಡಿಹೆಚ್ ಕಂಪೆನಿ 1500 ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿರುವ ಸಂಸ್ಥೆಯಾಗಿದೆ.


Click Here To Download Kannada AP2TG App From PlayStore!

Share this post

scroll to top