22 ವರ್ಷಗಳಿಂದಲೂ ಸಂಬಳ ತೆಗೆದುಕೊಳ್ಳದೆ ಪಾಠ ಮಾಡುತ್ತಿರುವ ಶಿಕ್ಷಕ…!

ನಮ್ಮ ದೇಶದ ಸರಕಾರಿ ಪಾಠಶಾಲೆಗಳು ಹೇಗಿರುತ್ತವೆಂದು ಎಲ್ಲರಿಗೂ ಗೊತ್ತಿದೆ. ಮೂಲಭೂತ ಸೌಕರ್ಯಗಳನ್ನು ಬದಿಗಿರಿಸಿದರೆ, ಶಾಲೆಗಳಲ್ಲಿ ಶಿಕ್ಷಕರಿದ್ದರೂ ಪಾಠಗಳನ್ನು ಸರಿಯಾಗಿ ಮಾಡುವುದಿಲ್ಲ. ಹೀಗಾಗಿ ಅನೇಕ ತಂದೆ, ತಾಯಿಯರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುವುದಕ್ಕೆ ಹಿಂದೇಟು ಹಾಕುತ್ತಾರೆ. ಇಂತಹ ಧೋರಣೆಯನ್ನು ಹೋಗಲಾಡಿಸಿ,ಸರಕಾರೀ ಶಾಲೆಗಳಲ್ಲೂ ಉತ್ತಮ ಶಿಕ್ಷಣ ದೊರೆಯುತ್ತದೆಂದು ತೋರಿಸಲು ಒಬ್ಬ ಶಿಕ್ಷಕ ಶ್ರಮಿಸುತ್ತಿದ್ದಾರೆ. ಈ ಶಿಕ್ಷಕ ನಿವೃತ್ತಿ ಹೊಂದಿದ್ದರೂ,ಸರಕಾರೀ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಬೇಕೆನ್ನುವುದೇ ಇವರ ಮುಖ್ಯ ಉದ್ದೇಶ. ಹೀಗೆ ಕೆಲಸ ಮಾಡುತ್ತಿದ್ದರೂ ಕಳೆದ 22 ವರ್ಷಗಳಿಂದ ವೇತನವನ್ನು ಪಡೆಯದೆ ನಿಸ್ವಾರ್ಥದಿಂದ ಸೇವೆಸಲ್ಲಿಸುತಿದ್ದಾರೆ. ಅವರೇ….ಶ್ರೀಕೃಷ್ಣಶರ್ಮ.

ಶ್ರೀಕೃಷ್ಣಶರ್ಮ 1954 ನೇ ಇಸವಿ ಮೇ ತಿಂಗಳಲ್ಲಿ ,ಉತ್ತರ ಪ್ರದೇಶದ ಷಾಜಹಾನ್ ಪೂರ್ ಕಾಂತಾಬ್ಲಾಕ್ನಲ್ಲಿರುವ ಸರಕಾರೀ ಪಾಠಶಾಲೆಗೆ ಶಿಕ್ಷಕರಾಗಿ ನೇಮಿಸಲ್ಪಟ್ಟರು. ಅಂದಿನಿಂದ 1995 ಜೂನ್ 30 ರವರೆಗೂ ಅದೇ ಪಾಠಶಾಲೆಯಲ್ಲಿ ಇಂಗ್ಲಿಶ್ ಶಿಕ್ಷಕರಾಗಿ ಸೇವೆ ಸಲ್ಲಿಸಿ 1995 ರಲ್ಲಿ ನಿವೃತ್ತಿ ಹೊಂದಿದರು. ಆದರೂ ಸಹ ಆ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಏಕೈಕ ಉದ್ದೇಶದಿಂದ ಇಂದಿನವರೆಗೂ ಅಲ್ಲೇ ಕೆಲಸ ಮಾಡುತ್ತಿದ್ದಾರೆ.ಇದಕ್ಕೆಂದು ಶ್ರೀಕೃಷ್ಣಶರ್ಮ ವೇತನ ತೆಗೆದುಕೊಳ್ಳಲೇಯಿಲ್ಲ.

ಸರಕಾರೀ ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ ವಿಶ್ರಾಂತಿ ಜೀವನ ನಡೆಸುತ್ತಾರೆ. ಆದರೆ,ಶ್ರೀಕೃಷ್ಣಶರ್ಮಹಾಗೆ ಮಾಡದೆ,ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದು ನಿವೃತ್ತಿಯ ನಂತರವೂ ಅದೇ ಶಾಲೆಯಲ್ಲಿ ಕಳೆದ 22 ವರ್ಷಗಳಿಂದ ಉಚಿತವಾಗಿ ವಿದ್ಯೆ ಕಲಿಸುತ್ತಿದ್ದಾರೆ. ಸಾಮಾನ್ಯವಾಗಿ ಇಂಗ್ಲಿಷನ್ನು ಬೋಧಿಸುವುದರ ಜೊತೆಗೆ ಇತರೆ ಪಠ್ಯಾಂಶಗಳನ್ನೂ ಬೋಧಿಸುತ್ತಿದ್ದಾರೆ.ಯಾವುದಾದರೂ ಒಂದು ವಿಷಯದ ಶಿಕ್ಷಕರು ರಜೆಯಲ್ಲಿ ತೆರಳಿದ್ದರೆ ಆ ವಿಷಯವನ್ನು ಸಹ ಶ್ರೀಕೃಷ್ಣಶರ್ಮ ಬೋಧಿಸುತ್ತಾರೆ ತರಗತಿಯ ವಿದ್ಯಾರ್ಥಿಗಳ ಸಂದೇಹಗಳನ್ನೂ ನಿವಾರಿಸುತ್ತಾರೆ. ಇತರೆ ಉಪಾಧ್ಯಾಯರು ಒಮ್ಮೊಮ್ಮೆ ಪಾಠಶಾಲೆಗೆ ಗೈರುಹಾಜರಾದರೂ.ಶರ್ಮ ಮಾತ್ರ ಹಾಗೆ ಮಾಡುತ್ತಿರಲಿಲ್ಲ. ತುರ್ತು ಕೆಲಸವಿದ್ದರೆ ಮಾತ್ರ ಶಾಲೆಗೆ ಬರುತ್ತಿರಲಿಲ್ಲ. ಇದುವರೆಗೂ ಅವರು ರಜೆ ಪಡೆದುಕೊಂಡೇ ಇಲ್ಲವಂತೆ. ಇವರ ನಿಸ್ವಾರ್ಥಸೇವೆಗಾಗಿ ಊರಜನರು ಅವರನ್ನು ಅಭಿನಂದಿಸುತ್ತಿದ್ದಾರೆ. ಸರಕಾರವೂ ಸಹ ಶ್ರೀಕೃಷ್ಣಶರ್ಮ ರನ್ನು ಸನ್ಮಾನಿಸಬೇಕೆಂದುಕೊಳ್ಳುತ್ತಿದೆ.ಎಲ್ಲ ಶಾಲೆಗಳಲ್ಲೂ ಶರ್ಮ ರಂತಹ ಶಿಕ್ಷಕರು ಇರಬೇಕೆನ್ನುವುದೇ ಎಲ್ಲರ ಅಪೇಕ್ಷೆ.


Click Here To Download Kannada AP2TG App From PlayStore!

Share this post

scroll to top