ಭಾರತೀಯ ಸೇನೆಯಲ್ಲಿ ವಿಶೇಷ ಸೇವೆಗಳನ್ನು ಸಲ್ಲಿಸಿದ ಈ 14 ಮಂದಿ ಮಹಿಳಾ ಅಧಿಕಾರಿಗಳ ಬಗ್ಗೆ ಈ ವಿಷಯಗಳು ಗೊತ್ತಾ?

ಅವಕಾಶ ಕೊಡಬೇಕೆ ಹೊರತು ತಾವೂ ಕಡಿಮೆಯೇನು ಅಲ್ಲ ಎಂದು ನಿರೂಪಿಸುತ್ತಿದ್ದಾರೆ ಇಂದಿನ ಮಹಿಳೆಯರು. ಎಲ್ಲಾ ಕ್ಷೇತ್ರಗಳಲ್ಲಿ ಅವರು ಮುಂದೆ ಬರುತ್ತಿದ್ದಾರೆ. ಈ ಮೂಲಕ ಆರ್ಮಿಯಲ್ಲೂ ಸಹ ಅವರು ತಮ್ಮದೇ ಆದ ಶೈಲಿಯಲ್ಲಿ ಸಾಮರ್ಥ್ಯ ತೋರುತ್ತಿದ್ದಾರೆ. ಆರ್ಮಿಯಲ್ಲಿ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಯುದ್ಧ ಎದುರಾದರೆ ತಾವೂ ಶತ್ರುಗಳ ಜತೆಗೆ ಹೋರಾಡುತ್ತೇವೆಂದು ನಿರೂಪಿಸಿಕೊಳ್ಳುತ್ತಿದ್ದಾರೆ. ಅಂತಹ ಕೆಲವು ಆರ್ಮಿ ಮಹಿಳಾ ಅಧಿಕಾರಿಗಳ ಬಗ್ಗೆ ಈಗ ತಿಳಿದುಕೊಳ್ಳೋಣ. ಇವರೆಲ್ಲಾ ತಮ್ಮ ಕೆಲಸಕ್ಕಾಗಿ ಆರ್ಮಿಯಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದಾರೆ.

1. ಪುನೀತಾ ಅರೋರಾ
ಉತ್ತರ ಪ್ರದೇಶದಲ್ಲಿನ ಸಹರಾನ್‌ಪುರ ವಾಸಿ ಈಕೆ. ಇವರು ಭಾರತ ಆರ್ಮಿಯಲ್ಲಿ ಲೆಫ್ಟಿನೆಂಟ್ ಜನರಲ್ ಹಂತಕ್ಕೇರಿದ ಮೊದಲ ಮಹಿಳಾ ಆರ್ಮಿ ಅಧಿಕಾರಿ. 2004ರಲ್ಲಿ ಆರ್ಮಡ್ ಫೋರ್ಸಸ್ ಮೆಡಿಕಲ್ ಕಾಲೇಜಿನಲ್ಲಿ ಕಮಾಂಡೆಂಟ್ ಆಗಿ ಮಾಡಿದ್ದಾರೆ. ಬಳಿಕ ಇಂಡಿಯನ್ ನೇವಿಯಲ್ಲಿ ವೈಸ್ ಅಡ್ಮಿರಲ್ ಆಗಿದ್ದರು. Armed Forces Medical Services (AFMS) ಅಡಿಷಿನಲ್ ಡೈರೆಕ್ಟರ್ ಜನರಲ್ ಆಗಿ ಕೆಲಸ ಮಾಡಿದ್ದಾರೆ.

2. ಪದ್ಮಾವತಿ ಬಂಧೋಪಾಧ್ಯಾಯ
ಈಕೆ ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಮೊದಲ ಮಹಿಳಾ ಏರ್ ಮಾರ್ಷಲ್ ಆಗಿ ಗುರುತಿಸಿಕೊಂಡಿದ್ದಾರೆ. 1978ರಲ್ಲಿ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜ್‌ನಲ್ಲಿ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಏವಿಯೇಷನ್ ಮೆಡಿಸಿನ್ ಸ್ಪೆಷಲಿಸ್ಟ್ ಆಗಿ, ಏರ್ ವೈಸ್ ಮಾರ್ಷಲ್ ಆಗಿ ಕೆಲಸ ಮಾಡಿದ್ದಾರೆ. 1971ರ ಇಂಡೋ ಪಾಕ್ ಉದ್ವಿಗ್ನ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ವಿಶಿಷ್ಟ್ ಸೇವಾ ಪದಕ ಪಡೆದಿದ್ದಾರೆ.

3. ಮಿಥಾಲಿ ಮಧುಮಿತ
ಸೇನಾ ಮೆಡಲ್ ಫಲ್ ಗ್ಯಾಲಂಟ್ರಿ ಪಡೆದ ಮೊದಲ ಮಹಿಳಾ ಆರ್ಮಿ ಅಧಿಕಾರಿ ಈಕೆ. ಲೆಫ್ಟಿನೆಂಟ್ ಕಲ್ನಲ್ ಆಗಿ ಕೆಲಸ ಮಾಡಿದ್ದಾರೆ. 2010ರಲಿ ಸೂಸೈಡ್ ಬಾಂಬರ್ ಅಟ್ಯಾಕ್‌ನಿಂದ 19 ಮಂದಿ ಆರ್ಮಿ ಸಿಬ್ಬಂದಿಯನ್ನು ಕಾಪಾಡಿದ್ದರು. ಆಗ ಟೀಂ ಒಂದನ್ನು ಈಕೆ ನೋಡಿಕೊಳ್ಳುತ್ತಿದ್ದರು.

4. ಪ್ರಿಯಾ ಜಿಂಗಾನ್
1992ರಲ್ಲಿ ಇಂಡಿಯನ್ ಆರ್ಮಿಯಲ್ಲಿ ಸೇರಲು ರಿಜಿಸ್ಟರ್ ಮಾಡಿಕೊಂಡ ಮೊದಲ ಮಹಿಳೆ ಈಕೆ. ಬಳಿಕ ಆರ್ಮಿಯಲ್ಲಿ ಸೇರಿ ಈಕೆ ಅನೇಕ ಸೇವೆಗಳನ್ನು ಸಲ್ಲಿಸಿದರು.

5. ದಿವ್ಯ ಅಜಿತ್ ಕುಮಾರ್
ಟ್ರೈನಿಂಗ್ ಅಕಾಡೆಮಿಯಲ್ಲಿ ಈಕೆ 244 ಮಂದಿ ಫೆಲೋ ಕ್ಯಾಟೆಟ್‌‍ಗಳನ್ನು ಸೋಲಿಸಿ ಮೆಡಲ್ ಪಡೆದಿದ್ದರು. ಇದರಿಂದ Sword of Honour ಅವಾರ್ಡ್ ಈಕೆಗೆ ಲಭಿಸಿತು. ಇದರಿಂದ ಆಕೆ ಆರ್ಮಿಯಲ್ಲಿ ಸೇವೆಸಲ್ಲಿಸಿದರು. 2015 ರಿಪಬ್ಲಿಕ್ ಪರೇಡ್‍ನಲ್ಲಿ 154 ಮಂದಿ ಆರ್ಮಿ ಟೀಂನ್ನು ಈಕೆ ಲೀಡ್ ಮಾಡಿದರು.

6. ನಿವೇತಾ ಚೌದರಿ
ಎಂಟಿ ಎವರೆಸ್ಟ್‌ನಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಮಹಿಳಾ ಪೈಲಟ್ ಆಗಿ ಹೆಸರು ಮಾಡಿದ್ದಾರೆ. ಈಕೆ ಫ್ಲೈಟ್ ಲೆಫ್ಟಿನೆಂಟ್ ಆಗಿ ಕೆಲಸ ಮಾಡಿದ್ದಾರೆ. ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.

7. ಅಂಜನಾ ಬಡೂರಿಯಾ
ಇಂಡಿಯನ್ ಆರ್ಮಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಮೊದಲ ಮಹಿಳಾ ಅಧಿಕಾರಿ ಈಕೆ. ಈಕೆ ಆರ್ಮಿಯಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಟ್ರೈಯ್‌ನಿಂಗ್‌ನಲ್ಲಿ ಪುರುಷ ಅಧಿಕಾರಿಗಳ ಜತೆಗೆ ಸ್ಪರ್ಧಿಸಿ ಗೋಲ್ಡ್ ಮೆಡಲ್ ಪಡೆದಿದ್ದರು.

8. ಪ್ರಿಯಾ ಸೆಮ್‌ವಾಲ್
ಈಕೆ ಗಂಡ ನಾಯಕ್ ಅಮಿತ ಶರ್ಮಾ ಭಾರತ ಸೇನೆಯಲ್ಲಿ ಗಡಿಯಲ್ಲಿ ಕೆಲಸ ಮಾಡುತ್ತಿರಬೇಕಾದರೆ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಇದರಿಂದ ಆಕೆ ಗಂಡನ ಕೋರಿಕೆ ಮೇರೆಗೆ ಆರ್ಮಿ ಸೇರಿದರು. 2012ರಿಂದ ಈಕೆ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

9. ದಿಪಿಕಾ ಮಿಶ್ರಾ
ಹೆಲಿಕಾಪ್ಟರ್ ಎರೋಬೋಟಿಕ್ ಟೀಂಗೆ ತರಬೇತಿ ನೀಡಿದ ಮೊದಲ ಮಹಿಳೆ ಏರ್‌‍ಫೋರ್ಸ್ ಆಫೀಸರ್ ಆಗಿ ಈಕೆ ಹೆಸರು ಮಾಡಿದ್ದಾರೆ. ಬಳಿಕ ಅನೇಕ ಟೀಂ‍ಗಳಿಗೆ ಈಕೆ ಸಾರಥ್ಯ ವಹಿಸಿ ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಸೇವೆಗಳನ್ನು ಸಲ್ಲಿಸಿದರು.

10. ಸೋಫಿಯಾ ಖುರೇಷಿ
2016ರಲ್ಲಿ ASEAN Plus multinational field training exercise ನಲ್ಲಿ ಈಕೆ ಇಂಡಿಯನ್ ಆರ್ಮಿ ಟೀಂ ಲೀಡ್ ಮಾಡಿದರು. ಅದಕ್ಕಾಗಿ ಈಕೆ ಇತಿಹಾಸ ಸೃಷ್ಟಿಸಿದರು. ಈ ಗೌರವಕ್ಕೆ ಪಾತ್ರರಾದ ಏಕೈಕ ಮಹಿಳಾ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ.

11. ಸ್ವಾತಿ ಸಿಂಗ್
ಇಂಡಿಯನ್ ಆರ್ಮಿಯಲ್ಲಿ ನಾಥು ಲಾ ಪಾಸ್ ಬಳಿ ಅತ್ಯಂತ ಕ್ಲಿಷ್ಟವಾದ ಭಾಗದಲ್ಲಿ 63ನೇ ಬ್ರಿಗೇಡ್ ಕ್ಯಾಪ್ಟನ್ ಆಗಿ ಈಕೆ ಸೇವೆ ಸಲ್ಲಿಸಿದ್ದಾರೆ. ಅದು ತುಂಬಾ ಕಠಿಣವಾದ ಕೆಲಸ. ಆ ಟೀಂನಲ್ಲಿ ಈಕೆ ಒಬ್ಬರೇ ಲೇಡಿ ಆಫೀಸರ್. ಆದರೂ ಧೈರ್ಯದಿಂದ ತನಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದರು.

12. ಶಾಂತಿ ಟಿಗ್ಗಾ
ಇಂಡಿಯನ್ ಆರ್ಮಿಯಲ್ಲಿ ಈಕೆ ಮೊದಲ ಮಹಿಳಾ ಜವಾನ್‌ ಆಗಿ ಹೆಸರು ಮಾಡಿದ್ದಾರೆ. ಈ ಘನತೆಯನ್ನು ಆಕೆ 35ನೇ ವಯಸ್ಸಿನಲ್ಲಿ ಸಾಧಿಸಿದ್ದು ವಿಶೇಷ. 12 ಸೆಕೆಂಡ್‌ಗಳಲ್ಲಿ 50 ಮೀಟರ್ ರನ್ ಪೂರ್ತಿ ಮಾಡಿದರು. ಆಗ ಈಕೆಗೆ ಇಬ್ಬರು ಮಕ್ಕಳು. ಆದರೂ ಆರ್ಮಿಯಲ್ಲಿ ಎಲ್ಲಾ ಟೆಸ್ಟ್‌ಗಳನ್ನೂ ಪಾಸು ಮಾಡಿ ಜವಾನ್ ಆದರು. ಅದರಲ್ಲಿ ಸೇವೆ ಸಲ್ಲಿಸಿದರು.

13. ಗನ್‌ವೇ ಲಾಲ್ಜಿ
ಆರ್ಮಿ ಕಮಾಂಡರ್‌ಗೆ ಏಯ್ಡ್ ಆಗಿ ನೇಮಿಸಲಾದ ಮೊದಲ ಮಹಿಳಾ ಆರ್ಮಿ ಆಫೀಸರ್ ಆಗಿ ಹೆಸರು ಮಾಡಿದ್ದಾರೆ. ತರಬೇತಿಯಲ್ಲಿ ಇರಬೇಕಾದರೆ ಹಲವು ದಾಖಲೆಗಳನ್ನು ಸೃಷ್ಟಿಸಿದರು.

14. ಗುಂಜನ್ ಸಕ್ಸೇನಾ
ಕಾರ್ಗಿಲ್ ಯುದ್ಧದಲ್ಲಿ ಫ್ಲೈಟ್ ನಡೆಸಿದ ಮೊದಲ ಮಹಿಳಾ ಏರ್‌ಫೋರ್ಸ್ ಅಧಿಕಾರಿಯಾಗಿ ಈಕೆ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಸಮಯದಲ್ಲಿ ಈಕೆ ಲೆಕ್ಕಕ್ಕೆ ಮೀರಿದ ಹೆಲಿಕಾಪ್ಟರ್‌ಗಳನ್ನು ನಡೆಸಿ ದಾಖಲೆ ಸೃಷ್ಟಿಸಿದರು. ಯುದ್ಧ ಸಮಯದಲ್ಲಿ ಆರ್ಮಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಶೌರ್ಯ ವೀರ ಪ್ರಶಸ್ತಿ ಗಳಿಸಿದರು. ಗ್ಯಾಲಂಟ್ರಿ ಪ್ರಶಸ್ತಿ ಸಹ ಈಕೆಗೆ ಲಭಿಸಿದೆ.

 


Click Here To Download Kannada AP2TG App From PlayStore!