ಬೆಳಿಗ್ಗೆ ದೇವಸ್ಥಾನದ ಬಳಿ ಟೂರಿಸ್ಟ್ ಗೈಡ್,ರಾತ್ರಿ ಶಾಲೆಯಲ್ಲಿ ವಿದ್ಯಾರ್ಥಿ…12 ವರ್ಷ ವಯಸ್ಸಿನ ಹುಡುಗಿಯ ನೈಜಕತೆ.

ಎಲ್ಲರಂತೆ ತಾನೂ ಸಹ ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆದುಕೊಳ್ಳಬೇಕೆಂಬುದು 12 ವರ್ಷ ವಯಸ್ಸಿನ ರೂಪಾಲಿಯ ಆಸೆ. ಆದರೆ,ಎಲ್ಲರ ಆಸೆಗಳೂ ಈಡೇರುವುದು ಅಸಾದ್ಯ. ಕಡುಬಡತನ,ಹಾಸಿಗೆ ಹಿಡಿದಿರುವ ರೋಗಗ್ರಸ್ಥ ತಂದೆ, ಮೈ ಮುರಿದು ದುಡಿಯುತ್ತಿರುವ ತಾಯಿ….ಪರಿಸ್ಥಿತಿ ಹೀಗಿರುವಾಗ ಓದುವುದು ಹೇಗೆ. ಇಷ್ಟೆಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ತನಗಿಷ್ಟವಾದುದನ್ನು ಓದುವ ಸಲುವಾಗಿ ಬಂದ ಒಂದು ಆಲೋಚನೆಯಿಂದಾಗಿ, ತನ್ನ ವಿದ್ಯಾಭ್ಯಾಸದ ಜೊತೆಗೆ ಕುಟುಂಬದ ಹೊರೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

ರಾಜಸ್ಥಾನದ ಅಬು ಪರ್ವತದ ಬಳಿಯಿರುವ ರೂಪಾಲಿ…ಬೆಳಿಗ್ಗೆ 8 ಗಂಟೆಗೆ ಸ್ನಾನಮುಗಿಸಿ ತಯಾರಾಗಿ,ತನ್ನ ಊರಿನಿಂದ 11 ಕಿ.ಮೀ.ದೂರದಲ್ಲಿರುವ ಅಳಗರ್ ದೇವಾಲಯಕ್ಕೆ ಹೋಗುತ್ತಾಳೆ.ಈ ದೇವಾಲಯ ಪ್ರಸಿದ್ದಿ ಪಡೆದಿರುವುದರಿಂದ ದೂರದ ಊರುಗಳಿಂದ ಪ್ರವಾಸಿಗರು ಬರುತ್ತಾರೆ. ಅವರಲ್ಲಿಗೆ ತೆರಳಿ ಆ ದೇವಾಲಯದ ಚರಿತ್ರೆ,ಅದನ್ನು ಕಟ್ಟಿಸಿದ ರಾಜರುಗಳು ಚರಿತ್ರೆ ಮೊದಲಾದ ಎಲ್ಲ ವಿಷಯಗಳನ್ನು ಅರಳು ಹುರಿದಂತೆ ಪ್ರವಾಸಿಗರಿಗೆ ವಿವರಿಸುತ್ತಾಳೆ.ಸಣ್ಣ ಸಣ್ಣ ವಿಷಯಗಳನ್ನು ಕತೆಗಳನ್ನು ವಿವರವಾಗಿ ಹೇಳಿ ,ಪ್ರವಾಸಿಗರ ಮನಸೂರೆಗೊಳ್ಳುತ್ತಾಳೆ. ಇವಳ ಮಾತುಗಳಿಗೆ ಆಕರ್ಷಿತರಾದ ಪ್ರವಾಸಿಗರು ಹಣ ನೀಡುತ್ತಾರೆ. ಹೀಗೆ ಬರುವ ಹಣದಿಂದ ತನ್ನ ಕುಟುಂಬಕ್ಕೆ ನೆರವಾಗಿ,ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ. ಮತ್ತೊಂದು ವಿಷಯವೆಂದರೆ,ಆ ಶಾಲೆಯಲ್ಲಿ ರೂಪಾಲಿಯೇ ಟಾಪರ್.

ತನ್ನ ಮುಂದಿನ ದಿನಗಳಲ್ಲಿ ಗೈಡ್ ಆಗಿ ತನ್ನ ಜೀವನವನ್ನು ರೂಪಿಸಿಕೊಳ್ಳಲು
ರೂಪಾಲಿ ಶ್ರದ್ಧೆವಹಿಸುತ್ತಿದ್ದಾಳೆ.ದೇವಾಲಯದ ಇತಿಹಾಸ ತಿಳಿದುಕೊಳ್ಳಲು …ಆ ಊರಿನ ಹಿರಿಯರನ್ನು ಪೀಡಿಸಿ ತಿಳಿದುಕೊಳ್ಳುತ್ತಿದ್ದಳು….ಪುರಾಣಗಳ ಬಗ್ಗೆ ಗೊತ್ತಿರುವ ಜನರನ್ನು ಭೇಟಿಯಾಗಿ,ಆ ದೇವಾಲಯದ ದೇವತೆಗಳ ಬಗ್ಗೆ ಪುರಾಣದಲ್ಲಿ ಉಲ್ಲೇಖಿಸಲಾಗಿದ್ದನ್ನು ತಿಳಿದುಕೊಳ್ಳುತ್ತಿದ್ದಳು. ದೇವಾಲಯವನ್ನು ನಿರ್ಮಿಸಿದ ರಾಜರಿಗೆ ಸಂಬಂಧಿಸಿದ ಸಮಾಚಾರವನ್ನು ತನ್ನ ಪುಟ್ಟ ತಲೆಯಲ್ಲಿ ಇಟ್ಟುಕೊಂಡಿದ್ದಾಳೆ. ತನ್ನ ಓರಗೆಯವರು ಓದುವುದರಲ್ಲಿ,ಆಡುವುದರಲ್ಲಿ ಸಂತೋಷವಾಗಿ ಕಾಲಕಳೆಯುವುದರಲ್ಲಿ ಮಗ್ನರಾಗಿದ್ದರೆ, ರೂಪಾಲಿ ಮಾತ್ರ ಒಂದು ಕಡೆ ವಿದ್ಯಾಭ್ಯಾಸ ಮತ್ತೊಂದುಕಡೆ ಗೈಡ್ ಆಗುವುದರತ್ತ ತನ್ನ ಗಮನವನ್ನು ಕೆಂದ್ರೀಕರಿಸಿ ಆದರ್ಶ ಪ್ರಾಯವಾಗಿದ್ದಾಳೆ.


Click Here To Download Kannada AP2TG App From PlayStore!

Share this post

scroll to top