ಈ ದೇಶದಲ್ಲಿ ಕೈದಿಗಳಿಗೆ ಇಂಟರ್‌ನೆಟ್ ಸೌಲಭ್ಯ ಕೊಡುತ್ತಾರೆ!!

ಒಂದು ಮಾತಿದೆ…ಅದೇನೆಂದರೆ.. “ಅಮೆರಿಕದಲ್ಲಿನ ಶ್ರೀಮಂತನಿಗಿಂತಲೂ, ನಾರ್ವೆ ದೇಶದ ಬಡವ ತುಂಬಾ ಅದೃಷ್ಟವಂತ” ಅಂತ. ಈ ಮಾತೇ ಸಾಕಲ್ಲವೇ ನಾರ್ವೆ ದೇಶದ ಹೆಗ್ಗಳಿಕೆ ಹೇಳಲು. ಬನ್ನಿ ನೋಡೋಣ ನಾರ್ವೆ ದೇಶದ ವಿಶೇಷಗಳನ್ನು. ಈ ದೇಶದ ವಿಶೇಷಗಳನ್ನು ತಿಳಿದುಕೊಂಡರೆ ಒಮ್ಮೆ ಹೋಗಿ ನೋಡಬೇಕು ಎಂದುಕೊಳ್ಳುತ್ತೀರ.

* ನಾರ್ವೆ ದೇಶದ ಮಾಜಿ ರಾಜ ಒಲವ್..ಯಾವಾಗಲೂ ಸಾರ್ವಜನಿಕ ಸಾರಿಗೆಯಲ್ಲಿ ಟಿಕೆಟ್ ಕೊಂಡು ಪ್ರಯಾಣಿಸುತ್ತಿದ್ದ.

* ನಾರ್ವೆ ಪಬ್ಲಿಕ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಜಗತ್ತಿನ ಯಾವ ದೇಶದ ವಿದ್ಯಾರ್ಥಿಗಾದರೂ ಸಂಪೂರ್ಣ ಉಚಿತ.

* ನಾರ್ವೇಯಲ್ಲಿ ಹೆಲ್ (ನರಕ) ಎಂಬ ಹೆಸರಿನ ಊರಿದೆ.

* ವಿಚಿತ್ರ ಎಂದರೆ ಸ್ಟ್ರಿಪ್ಪಿಂಗ್‌ನ್ನು ನಾರ್ವೆ ದೇಶದಲ್ಲಿ ಕಲೆ ಎಂದು ಭಾವಿಸಿ ತೆರಿಗೆ ವಿಧಿಸುತ್ತಾರೆ.

* ಹನ್ನೆರಡು ವರ್ಷದ ಒಳಗಿನ ಮಕ್ಕಳನ್ನು ಜಾಹೀರಾತಿಗೆ ಬಳಸುವುದು ನಾರ್ವೆಯಲ್ಲಿ ಕಾನೂನು ಬಾಹಿರ!

* ನಮ್ಮಲ್ಲಿ ಶ್ರೀನಿವಾಸ, ಮಂಜುನಾಥ, ಮಂಜುಳ ಹೆಸರುಗಳಂತೆ ಇಲ್ಲಿ ಪುರುಷರಿಗೆ “ಆಡ್, ಈವೆನ್” ಎಂಬ ಹೆಸರುಗಳು ಕಾಮನ್.

* ಜಗತ್ತಿನಲ್ಲೇ ಪೆಟ್ರೋಲ್ ಬೆಲೆ ಅತ್ಯಧಿಕವಾಗಿರುವ ದೇಶ ನಾರ್ವೆ! ನಾಲ್ಕುವರೆ ಲೀಟರ್‌ಗೆ 712 ರೂಪಾಯಿ ತೆರಬೇಕು.

* 2014ರಲ್ಲಿ ಸುಖವಾಗಿ ಬದುಕಲು, ಸಂಪತ್ತು ಅಭಿವೃದ್ಧಿಯಲ್ಲಿ ನಾರ್ವೆ ಜಗತ್ತಿನಲ್ಲೇ ಮೊದಲ ದೇಶವಾಗಿದೆ.

* ಇಲ್ಲಿನ ರಾಜನನ್ನು “ನಾರ್ವೇಸ್ ಕಿಂಗ್” ಎಂದು ಕರೆಯುತ್ತಾರೆ ಹೊರತು “ಕಿಂಗ್ ಆಫ್ ನಾರ್ವೆ” ಎಂದು ಕರೆಯಲ್ಲ. ಕಾರಣ ಆತನ ದೇಶಕ್ಕೆ ಸೇರಿದವನೇ ಹೊರತು, ದೇಶ ಆತನಿಗೆ ಸೇರಿದ್ದಲ್ಲ ಎಂಬ ಭಾವನೆ.

* ಇಲ್ಲಿನ ಜೈಲುಗಳಲ್ಲಿ ಕೈದಿಗಳಿಗೆ ಇಂಟರ್‌ನೆಟ್ ಸೌಲಭ್ಯ ಇರುತ್ತದೆ. ಇನ್ಯಾವ ದೇಶದಲ್ಲೂ ಈ ರೀತಿಯ ಸೌಲಭ್ಯ ಬಹುಶಃ ಇರಲಿಕ್ಕಿಲ್ಲ. ಅಲ್ಲಿನ ಕೈದಿಗಳೂ ಎಷ್ಟು ಅದೃಷ್ಟವಂತರಲ್ಲವೇ?!

* ನಾರ್ವೆಯಲ್ಲಿ ಪ್ರಕಟವಾಗುವ ಪ್ರತಿ ಪುಸ್ತಕದ ಸಾವಿರ ಕಾಪಿಗಳನ್ನು ಸರಕಾರ ಅಲ್ಲಿನ ಗ್ರಂಥಾಲಯಗಳಿಗೆ ಕಳುಹಿಸುತ್ತದೆ.

* ನಾರ್ವೆಯಲ್ಲಿನ ಎನ್.ಆರ್.ಕೆ ಟಿವಿ ಚಾನೆಲ್‌ನಲ್ಲಿ ಎಂಟು ಗಂಟೆಗಳ ರೈಲು ಪ್ರಯಾಣ, ಹನ್ನೆರಡು ಗಂಟೆ ಒಲಿಗೆ ಶೋ, 12 ಗಂಟೆಗಳ ಕಾಲ ಮನೆಯಲ್ಲಿ ಒಲೆ ಉರಿಯುವುದನ್ನು ತೋರಿಸುತ್ತಾರೆ.

* ಈ ದೇಶದ ಅಸಲಿ ಹೆಸರು ನಾರ್ವೆ ವೆಗ್. ಇದರ ಅರ್ಥ ಉತ್ತರದ ಮಾರ್ಗ ಎಂದು.


Click Here To Download Kannada AP2TG App From PlayStore!