15 ವರ್ಷಗಳಿಂದ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು, ಕೊನೆಗೆ ಆ ನರಕದಿಂದ ಹೊರಬಂದಳು..! ಹ್ಯಾಟ್ಸಫ್ ಪಾಯಲ್

ಬೆಳಗಿನ ಜಾವ 4  ಗಂಟೆಗೆ ಎದ್ದೇಳುವುದು… ರಾತ್ರಿ ಮನೆಯಲ್ಲಿ ಅಡುಗೆ ಮಾಡಿದ ಪಾತ್ರೆಗಳನ್ನು, ಊಟ ಮಾಡಿದ ತಟ್ಟೆಗಳನ್ನು ತೊಳೆಯುವುದು… ಮನೆಯೆಲ್ಲ ಗೂಡಿಸುವುದು. ಅಡುಗೆ ಮಾಡುವುದು, ಉಳಿದ ಏನಾದರೂ ಕೆಲಸಗಳಿದ್ದರೆ ಪೂರ್ತಿ ಮಾಡಿ, ಎಲ್ಲರೂ ಬೆಳಿಗ್ಗೆ ತಿಂಡಿ ತಿಂದ ನಂತರ, ಉಳಿದ ಅಷ್ಟುಇಷ್ಟು ತಿಂದು ಶಾಲೆಗೆ ಹೋಗುವುದು…. ಸಾಯಂಕಾಲ ಬಂದ ತಕ್ಷಣ ಮತ್ತೇ ಎಲ್ಲರೂ ತಿಂದ ಮೇಲೆ ಉಳಿದರೆ ತಿನ್ನುವುದು, ಇಲ್ಲದ್ದಿದ್ದರೆ ಹಾಗೇ ಉಪವಾಸ ಮಲಗುವುದು ….. ಬೆಳಿಗ್ಗೆ ಆಗುತ್ತಿದ್ದಂತೆ ಮತ್ತೆ ಅದೇ ಕೆಲಸ… ಶಾಲೆ‌… ಇದು ಒಂದುಕಾಲದಲ್ಲಿನ   ಆ ಯುವತಿಯ ದುಃಸ್ಥಿತಿ……15 ವರ್ಷಗಳು ಹಾಗೇ ಅಂತಹ ನರಕಯಾತನೆ ಅನುಭವಿಸಿದ್ದಳು. ಯಾರ ಜೊತೆ ಇದ್ದರೂ ಅದೇಕೆಲಸ, ಅವರು ನೀಡುವ ಚಿತ್ರಹಿಂಸೆಗಳು, ಇವುಗಳೆಲ್ಲವನ್ನು ಮೌನವಾಗಿ ಅನುಭವಿಸುತ್ತಿದ್ದಳು. ಈಗ ಅದು ಇತಿಹಾಸ…. ಇಂದು  ಆ ಯುವತಿ ಸ್ವಂತವಾಗಿ ಕೆಲಸ ಮಾಡುತ್ತಾ, ತನ್ನ ಕಾಲಮೇಲೆ ತಾನು ನಿಂತು ಸ್ವತಂತ್ರವಾಗಿ ಜೀವನ ಸಾಗಿಸುತ್ತಿದ್ದಾಳೆ.

ಆಕೆಯ ಹೆಸರು ಪಾಯಲ್,  ತನಗೆ ನಾಲ್ಕು ವರ್ಷಗಳ ವಯಸ್ಸಿನಲ್ಲಿಯೇ ತಂದೆ ತಾಯಿಗಳು ಮೃತಪಟ್ಟಿದ್ದರು. ಇದರಿಂದ ಬಂಧುಗಳೆ ಆಕೆಗೆ ಆಧಾರವಾದರು. ಮೊದಲು ಆಕೆಯನ್ನು ತನ್ನ ಮಾವ ಕರೆದು ಕೊಂಡುಹೋದನು. ಕೆಲವು ದಿನಗಳವರೆಗೆ ಸ್ವಂತ ಮಗಳಂತೆ ನೋಡಿಕೊಂಡನು. ಆದರೆ ಅನಂತರ ಪಾಯಲ್ ನ ಜೀವನ ಕೆಲಸದ ಆಳಿನಂತೆ ಹೀನಾಯವಾಗಿತ್ತು. ಮೇಲೆ ತಿಳಿಸಿದಂತೆ ನಿತ್ಯವೂ ಅದೇ ಜೀವನ. ಈ ರೀತಿಯಾಗಿ ಆಕೆ  ಮಾನಸಿಕವಾಗಿ ಕುಗ್ಗಿಹೋಗಿದ್ದಳು. ಕೆಲವು ದಿನಗಳವರೆಗೆ ಅಕ್ಕ ಎಂಬಾಕೆಯ ಜೊತೆ ಇದ್ದಳು. ಅಲ್ಲಿಯೂ ಅದೇ ಕೆಲಸ, ಇದೇ ಪರಿಸ್ಥಿತಿ. ಹೀಗೆ ಸಂಬಂಧಿಕರೆಲ್ಲರ ಮನೆಗಳಲ್ಲಿ, ಪಾಯಲ್ ಇದ್ದೂ ಬಂದಿದ್ದಾಳೆ. ಆದರೂ ಆಕೆಯ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಬರಲಿಲ್ಲ. ನಿತ್ಯವೂ ಸಾಕಾಗುವಷ್ಟು ಕೆಲಸ ಮಾಡುವುದು. ಅವರ ಕೈಯಲ್ಲಿ ಹಿಂಸೆಗಳಿಗೆ ಗುರಿಯಾಗುವುದು. ಒಂದು ದಿನ ಪಾಯಲ್  ಒಬ್ಬಳೇ ಹೀಗೆಂದು ಕೊಂಡಳು. ಏನಾದರೂ ಮಾಡಿ ಓದಿಕೊಂಡು, ತನ್ನ ಕಾಲ್ ಮೇಲೆ ತಾನು ನಿಲ್ಲಬೇಕೆಂದು, ತಕ್ಷಣ ಆ ನಿರ್ಣಯದ ದಿಕ್ಕಿನಲ್ಲಿ ಮುಂದೆ ಸಾಗಿದಳು. ಕೆಲಸ ಮಾಡುವುದಕ್ಕಾಗಿ ಬೆಳಿಗ್ಗೆ 4 ಗಂಟೆಗೆ ಎದ್ದು ಬೇಗ ಎಲ್ಲಾ ಕೆಲಸಗಳನ್ನು ಮುಗಿಸಿ, ಶಾಲೆಗೆ ಹೋಗಿ, ಸಾಯಂಕಾಲ ಮನೆಗೆ ಬಂದು. ಮತ್ತೆ ಕೆಲಸವನ್ನು ಮುಗಿಸಿ, ಸಮಯ ಸಿಕ್ಕಾಗ ಓದುತ್ತಿದ್ದಳು. ಈ ರೀತಿಯಾಗಿ ವಿಧ್ಯಾಭ್ಯಾಸವನ್ನು ಹೇಗೂ ಮಾಡಿ, ಪೂರ್ತಿ ಮಾಡಿದಳು. ಅಂತಹ ಪರಿಸ್ಥಿತಿಯಲ್ಲಿ ಆಕೆಗೆ ಈತಾಷಾ  ಎಂಬ ಸ್ವಯಂಸೇವೆ ಸಂಸ್ಥೆಯವರು ಸಿಕ್ಕಿದರು. ಅವರು ಪಾಯಲ್ ನಂತಹ ಯುವತಿಯರಿಗೆ ಕಂಪ್ಯೂಟರ್ ಕೋರ್ಸ್ ,ಡೇಟಾಎಂಟ್ರಿಗಳಂತಹ ಕೋರ್ಸ್ ಗಳನ್ನು ಕಲಿಸಿ ಉದ್ಯೋಗ ನೀಡುತ್ತಿದ್ದರು. ಅದರಲ್ಲಿ ಪಾಯಲ್ ಸಹ ಶಿಕ್ಷಣ ಪಡೆದುಕೊಂಡಳು. ಈ ರೀತಿ ಆಕೆಗೆ ಶಿಕ್ಷಾ ಕೇಂದ್ರ ಎಂಬ ಎನ್.ಜಿ.ಓ.ದಲ್ಲಿ ಕೆಲಸ ಸಿಕ್ಕಿತು. ಅಲ್ಲಿಯೇ ರಿಸೆಪ್ಷನಿಸ್ಟ್ ಆಗಿ ಆಕೆ ಕೆಲಸ ಮಾಡುತ್ತಿದ್ದಾಳೆ. ಈಗ ಆಕೆಗೆ 19 ವರ್ಷ ವಯಸ್ಸು. ಉದೋಗ್ಯದಿಂದಾಗಿ ತಿಂಗಳು ಬರುವಹೊತ್ತಿಗೆ ಸಂಬಳ ಪಡೆಯುತ್ತಿದ್ದಾಳೆ. ಮುಂಚೆಯಂತೆ, ಕೆಲಸ ಮಾಡುವ ನೋವು ಈಗ ಇಲ್ಲ. ಮಾನಸಿಕ ವೇದನೆ, ಚಿತ್ರಹಿಂಸೆಗಳು ಅವ ಯಾವ್ಯಾವು ಇಲ್ಲ. ಹೀಗೆ ಮತ್ತೇ ಕೆಲವು ವರ್ಷಗಳ ಕಷ್ಟಪಟ್ಟು, ಒಂದೊಂದುರೂಪಾಯಿಯನ್ನು ಕೂಡಿಡುತ್ತಿದ್ದಾಳೆ. ತನ್ನ ಮದುವೆಗಾಗಿ… ಆಕೆಯ ಕನಸು ನನಸಾಗಬೇಕೆಂದು, ಆಕೆ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲೆಂದು ಬಯಸೋಣ…


Click Here To Download Kannada AP2TG App From PlayStore!