ಪಾಲಿಟೆಕ್ನಿಕ್ ವಿದ್ಯಾರ್ಥಿಯ ಪ್ರಯೋಗಕ್ಕೆ ಆಶ್ಚರ್ಯಗೊಂಡ ಪ್ರಧಾನಿ..!

ವೇಗವಾಗಿ ಹೋಗುತ್ತಿರುವ  ರೈಲಿನ ಬಾಗಿಲ ಬಳಿ ನಿಂತು ಹೊರಗಿನಿಂದ ಬಲವಾಗಿ ಬೀಸುವ ಗಾಳಿಯನ್ನು ಕೈಯಿಂದ ತಡೆಯುತ್ತಿದ್ದರೆ  ಹೇಗಿರುತ್ತೇ…..? ತುಂಬಾ ಮಜವಾಗಿರುತ್ತೆ ಅಲ್ವಾ…..; ಗಾಳಿ ವೇಗವಾಗಿ ನಮ್ಮ ಕೈಗಳನ್ನು ತಾಕುತ್ತಿದ್ದರೆ ನಿಜವಾಗಲೂ ಆ ಅನುಭವವೇ ಬೇರೆ ಅನಿಸುತ್ತದೆ. ಆದರೆ ಆ ಯುವಕನಿಗೆ ಮಾತ್ರ ಹಾಗೆ ಅನ್ನಿಸಲಿಲ್ಲ. ಏಕೆಂದರೆ  ಆ ಬಲವಾಗಿ ಬೀಸುವ ಗಾಳಿಯಿಂದ ಆತನು ಏನೋ ಒಂದು ಪ್ರಯೋಗ ಮಾಡಬೇಕೆಂದುಕೊಂಡನು.  ಹಾಗೆ ಮಾಡಿದನು.  ಅದು ಸ್ವಲ್ಪ ಯಶಸ್ಸನ್ನು ಕಂಡಿತು. ಈಗ ಅದು ಒಂದು ಪರಿಕರ ರೂಪವನ್ನು ಪಡೆದು ಕೇಂದ್ರ ರೈಲ್ವೆ ಮಂತ್ರಿಮಂಡಲದಲ್ಲಿ ಪರಿಶೀಲನೆಯಲ್ಲಿದೆ. ಹೌದು ನೀವು ಕೇಳುತ್ತಿರುವುದು ಸತ್ಯ. ಪಾಲಿಟೆಕ್ನಿಕ್ ಓದುತ್ತಿರುವ  ಆ ಯುವಕನು ರೂಪಿಸಿದ  ಪರಿಕರವು ಮಾತ್ರ ಅದ್ಬುತವಾದದ್ದು. ಸಾಕ್ಷಾತ್ ಪ್ರಧಾನಿ ಮೋದಿ ಕಾರ್ಯಾಲಯವೇ ಆ ಯುವಕನ ಆವಿಷ್ಕರಣವನ್ನು ಮೆಚ್ಚಿಕೊಂಡಿದೆ. ಇದನ್ನು ಶೀಘ್ರದಲ್ಲೆ ಆಚರಣೆಗೆ ತರಲಿದ್ದಾರೆ. ಇಷ್ಟಕ್ಕು ಆ ಯುವಕನು ತಯಾರಿಸಿದ ಪರಿಕರವಾದರು ಏನು…?

ಆತನ ಹೆಸರು ಆಕಾಶ್ ಸಿಂಗ್, ವಯಸ್ಸು 17 ವರ್ಷ. ಗ್ರೇಟರ್  ನೊಯಿಡಾದಲ್ಲಿ ಜೆವಾರ್ ಪ್ರದೇಶದ ನಿವಾಸಿ. ಗುರ್ಗಾವ್ ನ, ಮನೇಸರ್ ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾನೆ. ಆದರೆ ಆತನು ಒಂದು ದಿನ ರೈಲಿನಲ್ಲಿ ಪ್ರಯಾಣಮಾಡುತ್ತಾ ಅದರಲ್ಲಿನ ಬಾಗಿಲ ಬಳಿ ನಿಂತು, ಹೊರಗಿನಿಂದ  ಬಲವಾಗಿ ಬೀಸುತ್ತಿರುವ ಗಾಳಿಯನ್ನು ಆಸ್ವಾದಿಸುತ್ತಿದ್ದಾನೆ. ಆದರೆ ಅಷ್ಟರಲ್ಲಿ ಆತನ ಮೆದುಳಿನಲ್ಲಿ ಒಂದು ಯೋಚನೆ ಬಂತು ಅಷ್ಟೇ, ತಕ್ಷಣ ಆ ಯೋಚನೆಗೆ ಕಾರ್ಯರೂಪವನ್ನು ನೀಡಿದನು. ವೇಗವಾಗಿ ಚಲಿಸುವ ವಾಹನಗಳಿಂದ ಬರುವ ಬಲವಾದ ಗಾಳಿಯಿಂದ ವಿದ್ಯುತ್ ಶಕ್ತಿಯನ್ನು ತಯಾರಿಸುವ ವಿಂಡ್ ಕನೆಕ್ಟರ್ ಎಂಬ  ಪರಿಕರವನ್ನು ರೂಪಿಸಿದನು. ಇದನ್ನು ಬಸ್’ಗಳು, ಲಾರಿಗಳು, ಕಾರುಗಳಂತಹ ವಾಹನಗಳ ಮೇಲಿಟ್ಟರೇ ಅಲ್ಲಿ ಬೀಸುವ ಗಾಳಿಯನ್ನು ಇದು ವಿದ್ಯುತ್ ಶಕ್ತಿಯಾಗಿ ಬದಾಲಾಯಿಸುತ್ತದೆ. ಹಾಗೆ ಉತ್ಪತ್ತಿಯಾಗುವ ವಿದ್ಯುತ್ ಅದೇ ಕನ್ವರ್ಟರ್’ಗೆ ಜೋಡಿಸಲ್ಪಟ್ಟಿರುವ ಬ್ಯಾಟರಿಗಳಲ್ಲಿ ಉಳಿಯುತ್ತದೆ. ಅದನ್ನು ಬೇಕಾದಾಗ ಬಳಸಿಕೊಳ್ಳಬಹುದು.

ಆಕಾಶ್ ಸಿಂಗ್ ತಯಾರಿಸಿದ  ಈ ವಿಂಡ್ ಕನ್ವರ್ಟರ್ ಗಳಲ್ಲಿ, ಒಂದು ಚಕ್ರಕ್ಕೆ  ಸ್ವಸ್ತಿಕ್ ಆಕಾರದಲ್ಲಿ  ನಾಲ್ಕು ಬ್ಲೇಡ್ ಗಳನ್ನು ಜೋಡಿಸಲಾಗಿರುತ್ತದೆ. ಆ ಬ್ಲೇಡ್ ಗಳ ಕೊನೆಯ ಭಾಗಗಳಲ್ಲಿ ಬಟ್ಟಲಿನ ಆಕಾರದ ವಸ್ತುಗಳಿರುತ್ತವೆ. ಇವುಗಳಿಗೆ ಅನುಗುಣವಾಗಿ ಕನ್ವರ್ಟರ್ ಗಾಳಿ ಬೀಸುವ ದಿಕ್ಕಿಗೆ ಆಕಡೆ, ಈಕಡೆ, ಸುಲಭವಾಗಿ ಕದಲುತ್ತವೆ. ಬ್ಲೇಡ್ ಗಳು ಜೋಡಿಸಿದ ಚಕ್ರದ ಬಳಿ ಗೇರ್ ಬಾಕ್ಸ್ ಡೈನಮೋ ಇರುತ್ತದೆ. ವಿಂಡ್ ಕನೆಕ್ಟರ್ ಅಲುಗಾಡುತ್ತಿದ್ದರೆ, ಅದರಿಂದ ಈ ಡೈನಾಮೊ ವಿದ್ಯುತ್ ಉತ್ಪತ್ತಿ ಮಾಡುತ್ತದೆ. ಬಸ್ ಗಳು, ಕಾರಗಳು, ಲಾರಿಗಳು ನಗರಗಳಲ್ಲಾದರೆ, ಗಂಟೆಗೆ 40 ರಿಂದ 80 ಕಿಲೋಮೀಟರ್ ವೇಗದಲ್ಲಿ ಹೋಗುತ್ತವೆ. ಅದೇ ಹೈ ವೇಗಳ ಮೇಲಾದರೆ ಆ ವೇಗವೂ ಎರಡರಷ್ಟಾಗುತ್ತದೆ. ಈ ರೀತಿಯಾಗಿ  ವಿಂಡ್ ಕನೆಕ್ಟರ್ ಕೆಲಸಮಾಡಬೇಕೆಂದರೆ ಗಂಟೆಗೆ 30 ಕಿಲೋಮೀಟರ್ ವೇಗದಲ್ಲಿದ್ದರೂ ಸಾಕು. ಆದ್ದರಿಂದ ಆ ಪರಿಕರವನ್ನು ಸುಲಭವಾಗಿ ಉಪಯೋಗಿಸಿಕೊಳ್ಳಬಹುದು. ರೈಲುಗಳಂತಹ ಭಾರೀ ಪ್ರಮಾಣದ ವಾಹನಗಳ ಮೇಲೆ ಇಂತಹ ಪರಿಕರಗಳನ್ನು ಇರಿಸಿದರೆ ಅದರಿಂದ ಇನ್ನೂ ಹೆಚ್ಚು ವಿದ್ಯುತ್ ಶಕ್ತಿ ಉತ್ಪತ್ತಿಮಾಡಬಹುದು. ಆಕಾಶ್ ಸಹಾ ಇಂತಹದ್ದೇ ಯೋಚನೆ ಮಾಡಿದ್ದಾನೆ. ಇದರಿಂದ ತನ್ನ ಬಳಿಯಿರುವ ಪರಿಕರದ ಬಗ್ಗೆ ವಿವರಿಸುತ್ತಾ, ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಾಗ ,ಅವರಿಂದ ರಿಪ್ಲೈ ಬಂದಿದೆ. ಅಲ್ಲದೆ ಅವರು ಆಕಾಶ್ ಆವಿಷ್ಕರಣವನ್ನು ತುಂಬಾ ಮೆಚ್ಚಿಕೊಂಡರು. ಈಗ ಕೇಂದ್ರ ರೈಲ್ವೇ ಮಂತ್ರಿ ಮಂಡಲಿಯವರು ಆಕಾಶ್ ತಯಾರಿಸಿದ ಪರಿಕರವನ್ನು ಪರೀಕ್ಷಿಸುವ ಕೆಲಸದಲ್ಲಿದ್ದಾರೆ. ಶೀಘ್ರದಲ್ಲೇ ಅದನ್ನು ಕಾರ್ಯರೂಪಕ್ಕೆ ತರಲಿದ್ದಾರೆ. ಆದರೆ ಆಕಾಶ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಇದೇ ಪರಿಕರವನ್ನು ಇನ್ನೂ ಆಧುನಿಕವಾಗಿ ಪರಿವರ್ತಿಸುತ್ತೇನೆಂದು ಹೇಳುತ್ತಿದ್ದಾನೆ.

ಇಷ್ಟಕ್ಕೂ ಆಕಾಶ್ ಈ ಪರಿಕರವನ್ನು ಏಕೆ ತಯಾರಿಸಿದ್ದಾನೆಂಬುದು ಗೊತ್ತಾ…? ದಿನ ಕಳೆದಂತೆ ಬರಿದಾಗುತ್ತಿರುವ ಸ್ವಾಭಾವಿಕ ಸಂಪನ್ಮೂಲಗಳನ್ನು ರಕ್ಷಿಸುವುದಕ್ಕಾಗಿ…! ಹೌದು ನೀರು, ಕಲ್ಲಿದ್ದಿಲುಗಳಂತಹ  ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ವಿದ್ಯುತ್ ಶಕ್ತಿಯನ್ನು ತಯಾರಿಸಿಕೊಳ್ಳುತ್ತಿದ್ದೇವೆ ಅಲ್ವಾ. ಮತ್ತೇ ಅವು ಸಹಾ ಮುಂದೊಂದು ದಿನ ಮುಗಿದು ಹೋದಾಗಲಾದರೂ  ಈ ಅವಸ್ಥೆ ತಪ್ಪುವುದಿಲ್ಲ. ಆಗ ಇಂತಹ ವಿಂಡ್ ಎನರ್ಜಿಮೇಲೆ ಆದರಿಸಿರುತ್ತದೆ.ಅದಕ್ಕೆ ಆಕಾಶ್ ಆ ದಿಕ್ಕಿನಲ್ಲಿ ಈ ಪರಿಕರವನ್ನು ತಯಾರಿಸಿದ್ದಾನೆ. ಆತನ ಆವಿಷ್ಕರಣಕ್ಕೆ ಹ್ಯಾಟ್ಸಾಫ್..!


Click Here To Download Kannada AP2TG App From PlayStore!

Share this post

scroll to top